ಉಮೇಶ್. ಬಿ.ನೂರಲಕುಪ್ಪೆ / ನಂದಿನಿ ಮೈಸೂರು
ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ೨ನೇ ಸ್ಥಾನ ಪಡೆದ ಬೀಚನಹಳ್ಳಿ ಶಾಲೆ
ಹೆ.ದೇ.ಕೋಟೆ:ತುಮಕೂರಿನ ಪ್ರೌಢಶಾಲಾ ಹೊನ್ನುಡಿಕೆ ಯಲ್ಲಿ ನಡೆದ 17 ವರ್ಷ ವಯೋಮಿತಿಯ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ನಾಲ್ಕು ವಿಭಾಗಗಳಿಂದ ನಾಲ್ಕು ತಂಡಗಳು ಭಾಗವಹಿಸಿ ಲೀಗ್ ಪಂದ್ಯಗಳಲ್ಲಿ ತಮ್ಮ ಪ್ರದರ್ಶನ ನೀಡಿಲಾಯಿತು.
ಅದರಲ್ಲಿ ಮೈಸೂರು ವಿಭಾಗದಿಂದ ಎಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಮೈಸೂರು ವಿಭಾಗದಿಂದ ಸ್ಪರ್ಧಿಸಿ ಮೊದಲಿಗೆ ಬೆಳಗಾಂ ಮತ್ತು ಕಲಬುರ್ಗಿ ವಿಭಾಗದ ತಂಡಗಳನ್ನು ಮಣಿಸಿ, ಅಂತಿಮವಾಗಿ ಬೆಂಗಳೂರು ವಿಭಾಗದ ತಂಡದ ಜೊತೆ ಸೆಣಸಾಡಿ ಬಹಳ ಕಡಿಮೆ ಅಂಕಗಳ ಅಂತರದಿಂದ ಪರಾಭವ ಗೊಂಡು ರಾಜ್ಯ ಮಟ್ಟದ ೨ನೇ ತಂಡವಾಗಿ ಹೊರಹೊಮ್ಮಿತು.
ಈ ಪಂದ್ಯಾವಳಿಯಲ್ಲಿ ಪ್ರಾರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡಿದ ಐದು ಜನ ವಿದ್ಯಾರ್ಥಿನಿಯರನ್ನ ರಾಷ್ಟ್ರಮಟ್ಟಕ್ಕೆ ಆಯ್ಕೆಮಾಡಿರುವುದು ತಾಲೋಕಿಗೆ ಹೆಮ್ಮೆಯ ವಿಷಯವಾಗಿದೆ.
ತಂಡದ ನಾಯಕಿ ರಂಜಿತ, ಲಾಂಛನ, ದಿವ್ಯಶ್ರೀ, ಸಿಂಚನ ಮತ್ತು ಐಶ್ವರ್ಯ ಆಯ್ಕೆಯಾಗಿದ್ದಾರೆ.
ಈ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೀಚನಹಳ್ಳಿ ಶಾಲೆಯ ವಿದ್ಯಾರ್ಥಿ ರಂಜಿತ ಇವರು ಕ್ರೀಡಾಕೂಟದ ಅತ್ಯುತ್ತಮ ಆಟಗಾರ್ತಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದು ಉಡುಗೊರೆಯಾಗಿ ಒಂದು ಉತ್ತಮ ಗುಣಮಟ್ಟದ ಗ್ರಾಫೈಟ್ ರಾಕೆಟ್ ಅನ್ನು ಪಡೆದಿರುತ್ತಾರೆ.