ಸಮುದಾಯ ಆಧಾರಿತ ತಪಾಸಣೆ ಶಿಬಿರ:ಡಾ.ರವಿಕುಮಾರ್

ನಂದಿನಿ ಮೈಸೂರು

ಹೆಚ್.ಡಿ ಕೋಟೆ ತಾಲ್ಲೂಕಿನ ಅಂತರ ಸಂತೆ ಸಂಚಾರಿ ಗಿರಿಜನ ಆರೋಗ್ಯ ಘಟಕದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ ಕೋಟೆ ಮತ್ತು ಸಾರ್ವಜನಿಕ ಆಸ್ಪತ್ರೆ ಐ.ಸಿ.ಟಿ.ಸಿ.ವಿಭಾಗ ಹೆಚ್.ಡಿ.ಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಆಧಾರಿತ ತಪಾಸಣೆ ಶಿಬಿರವನ್ನೂ ಆಯೋಜಿಸಲಾಯಿತು .

ಈ ತಪಾಸಣೆ ಶಿಬಿರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ”ರವಿಕುಮಾರ್ ಟಿ.ರವರು ಅಧ್ಯಕ್ಷತೆಯನ್ನು ವಹಿಸಿದ್ದರು.ಈ ಕಾರ್ಯ ಕ್ರಮವನ್ನು ದೀಪ ಬೆಳಗುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿದರು. ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ನಮ್ಮ ದೇಶದಲ್ಲಿ 20 30 ಒಳಗೆ ಹೆಚ್.ಐ.ವಿ.ಮತ್ತು ಏಡ್ಸ್ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ನವದೆಹಲಿ ಮತ್ತು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸಿ ಬೆಂಗಳೂರು ವತಿಯಿಂದ ಜಂಟಿಯಾಗಿ ಎಚ್.ಐ.ವಿ. ಮತ್ತು ಏಡ್ಸ್ ನಿಯಂತ್ರಿಸಲು ಹಲವಾರು ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿಅನುಷ್ಠಾನಗೊಳಿಸಲಾಗುತ್ತಿದೆ.

ಸಮುದಾಯ ಆಧರಿತ ಸ್ಕ್ರೀನಿಂಗ್ ಆರಂಭಿಕ ರೋಗ ನಿಯಂತ್ರಣವನ್ನು ಸುಧಾರಿಸಲು ಮೊದಲ ಬಾರಿಗೆ ಪರೀಕ್ಷಕರನ್ನು ತಲುಪಲು ಮತ್ತು ವೈದ್ಯಕೀಯ ಸೇವೆಗಳನ್ನು ವಿರಳವಾಗಿ ಬಳಸುವ ಜನರನ್ನು ತಲುಪಲು ಒಂದು ಪ್ರಮುಖ ವಿಧಾನವಾಗಿದೆ, ಇದರಲ್ಲಿ ಪುರುಷರು ಮತ್ತು ಅವಧಿ ಅರಿಯದವರು ಹೆಚ್ಚು ಹಡಬಹುದಾದ ಸನ್ನಿವೇಶ ಮತ್ತು ಹೆಚ್ಚು ಅಪಾಯದ ಗುಂಪುಗಳು, ಎಚ್.ಐ.ವಿ. ಆಪ್ತ ಸಮಾಲೋಚನೆ ಮತ್ತು ಪರೀಕ್ಷೆ ಸೇವೆಗಳ ಪಡೆಯುವಿಕೆ ಮತ್ತು ವ್ಯಾಪ್ತಿಯನ್ನು ಸುಧಾರಿಸಲು ಸಮುದಾಯ ಆಧಾರಿತ ಎಚ್.ಐ.ವಿ ಕುರಿತು ಪರಿಶೀಲಿಸಲು ವಿವಿಧ ವಿಧಾನಗಳ ಮೂಲಕ ನಡೆಸಲಾಗುತ್ತದೆ.

ಈ ಕಾರ್ಯಕ್ರಮದ ಉದ್ದೇಶ
ಅಪಾಯದಲ್ಲಿರುವ ಜನಸಂಖ್ಯೆಯಲ್ಲಿ ಎಚ್.ಐ.ವಿ ತಡೆಗಟ್ಟುವಿಕೆ ,ಹಾರೈಕೆ ಮತ್ತು ಸೇವೆಗಳ ಪಡೆಯುವಿಕೆಯನ್ನು ಸುಧಾರಿಸಲು ಸಮುದಾಯ ಆಧಾರಿತ ಉಚಿತ ಎಚ್.ಐ.ವಿ .ಆಪ್ತ ಸಮಾಲೋಚನೆ ಮತ್ತು ಪರೀಕ್ಷೆಯನ್ನು ಮಾಡಬಹುದಾಗಿದೆ.

ಈ ಪರೀಕ್ಷೆಗೆ ಒಳಗಾದ ಮತ್ತು ಎಚ್ಐವಿ ಸೋಂಕಿಲ್ಲ ಎಂದು ತಿಳಿದುಕೊಂಡ ಜನರು ಲೈಂಗಿಕತೆ, ಮಾದಕ ವಸ್ತು, ಬಳಕೆ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಮುಂಜಾಗ್ರತೆ ಮತ್ತು ನಿರ್ಧಾರ ಗಳನ್ನೂ ತೆಗೆದುಕೊಳ್ಳಬಹುದು ಅದು ಹೆಚ್.ಐ.ವಿ. ತಡೆಯಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬ ಗರ್ಭಿಣಿಯರು ಹಾಗೂ ಅವರ ಯಜಮಾನ ಕಡ್ಡಾಯವಾಗಿ ಹೆಚ್.ಐ. ವಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ಇದರಿಂದ ತಾಯಿಂದ ಮಗುವಿಗೆ ರೋಗ ಹರಡದಂತೆ ತಪ್ಪಿಸಬಹುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ. ಸಂಚಾರಿ ಗಿರಿಜನ ಆರೋಗ್ಯ ಘಟಕ ವೈದ್ಯಾಧಿಕಾರಿಗಳಾದ ಡಾ” ಹರ್ಷ ಉಪಾಧ್ಯಕ್ಷರಾದ ಲೋಲಮ್ಮ. ಮಾಜಿ ಉಪಾಧ್ಯಕ್ಷರಾದ ಕಲೀಮ್ ಪಾಷಾ, ಗ್ರಾಮ ಪಂಚಾಯತಿ ಸದಸ್ಯರಾದ ಮಾದೇವಮ್ಮ. ರೂಪ. ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ರವಿರಾಜ್ ,ಚಂದ್ರು, ನಾಗರಾಜ್ ರಾಮು, ಲೋಲಾಕ್ಷಿ, ಹರೀಶ್ ರಾಹುಲ್ ,ಉಮೇಶ್, ನಟರಾಜ್, ಪವಿತ್ರ ಪದ್ಮರಾಜ್ ಸುನಿತಾ ಸುಮಲತಾ ಭಾರತಿ ಆಶಾ ಕಾರ್ಯಕರ್ತೆಯರು ಗರ್ಭಿಣಿಯರು ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *