ನಂದಿನಿ ಮೈಸೂರು
*ಪುಂಡಾನೆ ದಾಳಿಗೆ, ಸಾಕಾನೆ ಗೋಪಾಲಸ್ವಾಮಿ ಬಲಿ*.
ಸಾಕಾನೆ ಗೋಪಾಲಸ್ವಾಮಿ ಇಂದು ಕಾಡಾನೆಯೊಂದಿಗೆ ನಡೆದ ಕಾದಾಟದಲ್ಲಿ ಪ್ರಾಣಾ ಬಿಟ್ಟಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹನಗೋಡು ಹೋಬಳಿ ಕೊಳುವಿಗೆ ಬಳಿಯ ಅರಣ್ಯ ಪ್ರದೇಶದಲ್ಲಿ ಗೋಪಾಲಸ್ವಾಮಿ ಸಾಕಾನೆಯು ಮೃತಪಟ್ಟಿದ್ದು, ನಿನ್ನೆ ನೇರಳಕುಪ್ಪೆ ಬಿ ಹಾಡಿಯ ಕ್ಯಾಂಪಿನಿಂದ ಮೇಯಲು ಅರಣ್ಯಕ್ಕೆ ಬಿಟ್ಟಿದ್ದ ವೇಳೆ ಮಸ್ತಿಗೆ ಬಂದಿದ್ದ ಗೋಪಾಲಸ್ವಾಮಿ ಕೊಳುವಿಗೆ ಅರಣ್ಯ ಪ್ರದೇಶಕ್ಕೆ ನುಗ್ಗಿದೆ.
ಈ ಹಿಂದೆ ಅರಣ್ಯ ಇಲಾಖೆಯವರು ಪುಂಡಾಟ ನಡೆಸುತ್ತಿದ್ದ ಅಯ್ಯಪ್ಪ ಎಂಬ ಕಾಡಾನೆಗೆ ಕಾಲರ್ ಅಳವಡಿಸಿದ್ದು, ಈ ಪುಂಡಾನೆಯ ದಾಳಿಗೆ ಸಿಲುಕಿ ತೀವ್ರ ಗಾಯಗೊಂಡಿದ ಗೋಪಾಲಸ್ವಾಮಿಗೆ
ಮಂಗಳವಾರ ಮಧ್ಯಾನದಿಂದ ನಾಲ್ಕು ವೈದ್ಯರ ತಂಡ ಎಲ್ಲಾ ರೀತಿಯ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವಿಗೀಡಾಗಿದೆ.
ಸ್ಥಳಕ್ಕೆ ಡಿ.ಸಿ.ಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎ.ಸಿ.ಎಫ್ ದಯಾನಂದ್ ಸೇರಿದಂತೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದರು.
ಇಂದು ಸಂಜೆ ಕೊಳುವಿಗೆ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು.