ನಂದಿನಿ ಮೈಸೂರು
ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ, ಎಸ್.ಟಿ ನೌಕರರ ಸಂಘದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಬೌದ್ಧ ಬಿಕ್ಕುಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.
ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ವೇದಿಕೆ ಗಣ್ಯರು ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವರಾಜ ಕಾಲೇಜಿನ ನಿವೃತ್ತಿ ಪ್ರಾಂಶುಪಾಲರಾದ ಪ್ರೋ.ನಂಜುಂಡಯ್ಯ,ಧಮ್ಮ ಕ್ಷೇತ್ರದಿಂದ ಐಪಿಎಸ್ ಅಧಿಕಾರಿ ಪುಟ್ಟಮಾದಯ್ಯ,ಆರ್.ಮಹದೇವಪ್ಪ,ಮಾಧ್ಯಮ ಕ್ಷೇತ್ರದಲ್ಲಿ ಲಿಖಿತ.ಕೆವಿ, ವರದಿಗಾರ್ತಿ ನಂದಿನಿ.ಎನ್ ರವರನ್ನ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಎ.ಆರ್.ಕೃಷ್ಣಮೂರ್ತಿ,ಎಂಎಲ್ ಸಿ ಡಾ.ಡಿ.ತಿಮ್ಮಯ್ಯ,
ಮನಹೋಕಿತ ಭಂತೇಜಿ, ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಪ್ರಸನ್ನನಾಂದ ಸ್ವಾಮೀಜಿ, ಸಿದ್ದರಾಮ ಶಿವಯೋಗಿ, ಸವಿತಾನಂದ ಬಸವ ಸ್ವಾಮೀಜಿ,ಮಾಜಿ ಮಹಾಪೌರ ಪುರುಷೋತ್ತಮ್, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ರಾಜ್ಯಾಧ್ಯಕ್ಷ ಡಿ.ಚಂದ್ರಶೇಖರಯ್ಯ, ಜಿಲ್ಲಾಧ್ಯಕ್ಷ ಡಾ.ಎಂ.ಡಿ.ಶಿವರಾಮ ಕೃಷ್ಣ,ಶ್ರೀಧರ್ ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ,ದ್ಯಾವಪ್ಪನಾಯಕ,ಗಂಗಾಧರ್,ಮಹದೇವು,ಎಚ್.ಪಿ.ಮಹದೇವು,ನಂದಪ್ರಕಾಶ್,ರಾಘವೇಂದ್ರ ಸೇರಿದಂತೆ ಸಂಘದ ಸದಸ್ಯರು ಭಾಗಿಯಾಗಿದ್ದರು.