ಪಕ್ಷೇತರ ಅಭ್ಯರ್ಥಿ ಆರ್ ಮಂಜುನಾಥ್ ರವರನ್ನು ಗೆಲ್ಲಿಸಿ

ಮೈಸೂರು :29 ನವೆಂಬರ್ 2021

ನಂದಿನಿ

ನಾಯಕ ಸಮುದಾಯದ ಯುವ ಮುಖಂಡ ಪಕ್ಷೇತರ ಅಭ್ಯರ್ಥಿ ಆರ್ ಮಂಜುನಾಥ್ ರವರನ್ನು ಮೈಸೂರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆ ಮಾಡುವಂತೆ ದ್ಯಾವಪ್ಪನಾಯಕ ಮನವಿ ಮಾಡಿದ್ದಾರೆ.

ಭಾರತದಲ್ಲಿ ವಿಧಾನ ಪರಿಷತ್ ವ್ಯವಸ್ಥೆ ಕೇವಲ ಆರು ರಾಜ್ಯಗಳಲ್ಲಿ ಮಾತ್ರವಿದೆ , ಕಾನೂನು ರಚಿಸುವ ಸ್ಥಾನಗಳಲ್ಲಿ ಅವಕಾಶ ವಂಚಿತ ಜನಸಮೂದಾಯಗಳು , ಚಿಂತಕರು , ಸಾಹಿತಿಗಳು , ಸಾಮಾಕ ಹೋರಾಟಗಾರು , ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು ವಿಧಾನ ಪರಿಷತ್ ಸದಸ್ಯರಾಗಿ ಕಲ್ಯಾಣ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿತ್ತು . ದುರದೃಷ್ಟವಶಾತ್ ಈಗ ಬಂಡವಾಳ ಶಾಹಿಗಳು , ಶಿಕ್ಷಣ , ಆರೋಗ್ಯ ವ್ಯಾಪಾರೀಕರಣವಾಗುತ್ತಾ ಶ್ರೀಮಂತರು ಹಣ ಬಲದಿಂದ ಆಯ್ಕೆಯಾಗುತ್ತಿದ್ದಾರೆ ಇದು ನಿಲ್ಲಬೇಕು . S. Soul ಶ್ರೀಧರ್ ಚಾಮುಂಡಿಬೆಟ್ಟ ಜಿಲ್ಲಾಧ್ಯಕ್ಷರು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಆರ್ ಮಂಜುನಾಥ್ ರವರನ್ನು ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸವಿದೆ . ಏಕೆಂದರೆ ವಿಧಾನ ಪರಿಷತ್‌ ಗಾಂಧೀಜಿ , ಅಬ್ದುಲ್ ಕಲಾಂ ಅಜಾದ್ , ಅಂಬೇಡ್ಕರ್ ರವರ ಕನಸಾಗಿತ್ತು . ಬಲಿಷ್ಠ ಸ್ಥಳೀಯ ಸರ್ಕಾರ ಮತ್ತು ಗ್ರಾಮ ಸ್ವರಾಜ್ಯ ಅಬ್ದುಲ್ ನಜೀರ್ ಸಾಬ್ ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ : ದೇಶಕ್ಕೆ ಮಾದರಿ ಮಾಡಿ ತೋರಿಸಿದ್ದಾರೆ . ರಾಜೀವ್ ಗಾಂಧಿ ಅದನ್ನು ಇಡಿ ದೇಶಕ್ಕೆ ತರಲು ಪ್ರಯತ್ನಿಸಿದರು . ಆದರೆ ಸಂಸದರು , ಶಾಸಕರು ಮತ್ತು ರಾಜಕೀಯ ಪಕ್ಷಗಳ ಲಾಭದಿಂದ ಸ್ಥಳೀಯ ಜನ ಪ್ರತಿನಿಧಿಗಳ ಅಧಿಕಾರ ವ್ಯಾಪ್ತಿ ಕುಂಠಿತವಾಗಿದೆ . ಅನುದಾನ ನಿರಂತರ ಕಡಿಮೆಯಾಗುತ್ತಿದೆ , ನೆರೆ ರಾಜ್ಯಗಳಿಗೆ ಹೋಲಿಸಿದರೆ ಗ್ರಾಮಪಂಚಾಯತ್ ಸದಸ್ಯರು , ಕೌನ್ಸಿಲರ್ , ಕಾರ್ಪೊರೇಟರ್ ಗಳ ಗೌರವ ಧನ ತೀರಾ ಅತ್ಯಲ್ಪ ಅವರು ತಾರತಮ್ಯ ಭ್ರಷ್ಟಾಚಾರ ರಹಿತ ಕೆಲಸ ಮಾಡಬೇಕಿದ್ದರೆ ಅವರಿಗೂ ಸ್ವಾಭಿಮಾನ ಸರಳ ಜೀವನ ನಡೆಸುವಷ್ಟು ಗೌರವಧನ ನೀಡಿ ಅವರ ಹೆಚ್ಚಿನ ಸಮಸ್ಯೆಗಳನ್ನು ಅವರ ವಾರ್ಡಿನ ಜನರ ಸಮಸ್ಯೆಗಳನ್ನು ನಿವಾರಿಸಲು ಮೀಸಲಿಡಬೇಕು . ನರೇಗಾ ಯೋಜನೆ , ವೈಜ್ಞಾನಿಕ ಕಸ ವಿಲೇವಾರಿ , ಗ್ರಾಮಗಳಿಂದಲೇ ಉದ್ಯೋಗ ಸೃಷ್ಟಿ ತೆರಿಗೆ ಹಣ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು , ಮೊದಲಾದ ಹಲವು ವಿಚಾರಗಳನ್ನು ನಾವು ಸ್ಥಳೀಯ ಜನಪ್ರತಿನಿಧಿಗಳಿಗೆ ಮನದಟ್ಟು ಮಾಡುತ್ತೇವೆ . ಆದರಿಂದ ನಾಯಕ , ದಲಿತ , ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳು ಯುವ ಮುಖಂಡ ಆರ್ . ಮಂಜುನಾಥ್ ( ಮಂಜುನಾಥ್ ನಾಯಕ ) ರವರ ಕ್ರಮ ಸಂಖ್ಯೆ 7 ಕ್ಕೆ ತಮ್ಮ ಮೊದಲ ಪ್ರಾಶಸ್ಯ ಮತ ನೀಡಿ ತಮ್ಮ ಸೇವೆ ಮಾಡಲು ಗೆಲ್ಲಿಸಬೇಕೇಂದು ಮನವಿ ಮಾಡಿದರು.

ಮಂಜುನಾಥ್‌ .ಆರ್‌ .
ಹೆಚ್.ಆರ್ . ಪ್ರಕಾಶ್ , ಪ್ರಭಾಕರ್, ಚನ್ನನಾಯಕ ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *