ಕಡೆ ಕಾರ್ತಿಕ ಸೋಮವಾರ ಬೃಂದಾವನ ಬಡಾವಣೆಯ ಮಹಾಗಣಪತಿ ದೇವಸ್ಥಾನದಲ್ಲಿ ದೀಪೋತ್ಸವ

ಮೈಸೂರು:30 ನವೆಂಬರ್ 2021

ನಂದಿನಿ

ಇಂದು ಕೊನೆ ಕಾರ್ತಿಕ ಸೋಮವಾರ.ಸಾಂಸ್ಕೃತಿಕ ನಗರಿ ಮೈಸೂರಿನ ವಿವಿದ ದೇವಾಲಯಗಳಲ್ಲಿ ದೀಪೋತ್ಸವ ಅದ್ದೂರಿಯಿಂದ ನೆರವೇರಿದೆ.

ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಮಹಾಗಣಪತಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಭಕ್ತರನ್ನ ಸೂಜಿಗಲ್ಲಿನಂತೆ ಆಕರ್ಷಿಸಿದೆ.

ದೇವಾಲಯ ಒಳ ಹಾಗೂ ಹೊರ ಆವರಣದಲ್ಲಿ ದೀಪಗಳನ್ನ ಬೆಳಗಿಸಿದ ಭಕ್ತರು ಪೂಜಾ ಕೈಂಕರ್ಯಗಳಲ್ಲಿ ಮಿಂದೆದ್ದಿದ್ದಾರೆ.ವಿವಿದ ಆಕಾರಗಳಲ್ಲಿ ದೀಪಗಳನ್ನ ಹಚ್ಚಿ ಸಡಗರ ಸಂಭ್ರಮದಿಂದ ಭಕ್ತರು ಪಾಲ್ಗೊಂಡಿದ್ದಾರೆ.

Leave a Reply

Your email address will not be published. Required fields are marked *