ಮೈಸೂರು:19 ಮೇ 2022
ನಂದಿನಿ ಮೈಸೂರು
ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು ಸಾಗರ್ ಶೆಟ್ಟಿ ಎಂಬ ವಿದ್ಯಾರ್ಥಿ 625 ಕ್ಕೆ 622 ಅಂಕ ತೆಗೆದು ಮೈಸೂರಿಗೆ ಕೀರ್ತಿ ತಂದುಕೊಟ್ಟಿದ್ದಾನೆ
ಸಂತೋಷ್ ಶೆಟ್ಟಿ,ಸವಿತಾ ಶೆಟ್ಟಿ ದಂಪತಿಯ ಪುತ್ರ ಸಾಗರ ಶೆಟ್ಟಿ ಮೈಸೂರಿನ
ಸದ್ವಿದ್ಯಾ ಶಾಲೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.ಮೂಲತಃ ಕುಂದಾಪುರದವರು.ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದು ನೆಲೆಸಿದ್ದರು. ಹೋಟೆಲ್ ಉದ್ಯಮ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಬಡ ಕುಟುಂಬದಲ್ಲಿ ಕಷ್ಟ ಪಟ್ಟು ಓದಿದ ಸಾಗರ್ ಶೆಟ್ಟಿ ಹೆಚ್ಚಿನ ಅಂಕಗಳಿಸಿ ಶಾಲೆಗೆ ಹೆಸರು ತಂದುಕೊಟ್ಟಿದ್ದಾನೆ.ಮಗನ ಸಾಧನೆ ನೋಡಿ ದಂಪತಿಗಳು ಖುಷಿಪಟ್ಟಿದ್ದಾರೆ.