ವನ್ಯಜೀವಿ ಛಾಯಾಗ್ರಹಾಕರಾದ ಎಸ್ ಆರ್ ಮಧುಸೂದನ್ ರವರಿಗೆ ಪ್ರಶಸ್ತಿ

ನಂದಿನಿ ಮೈಸೂರು

ಪತ್ರಿಕಾ ಛಾಯಾಗ್ರಾಹಕ ಹಾಗೂ ವನ್ಯಜೀವಿ ಛಾಯಾಗ್ರಹಾಕರಾದ ಎಸ್ ಆರ್ ಮಧುಸೂದನ್ ರವರಿಗೆ ಬೆಂಗಳೂರಿನ ಯೂಥ್ ಫೋಟೋಗ್ರಾಫಿಕ್ ಸೊಸೈಟಿ ವತಿಯಿಂದ ನಡೆದ ವೈ ಪಿ ಎಸ್ (YPS) ನ್ಯಾಷನಲ್ ಫೋಟೋಗ್ರಾಫಿ ಸಲೂನ್ 2024 ರಲ್ಲಿ ಎಸ್ಆರ್ ಮಧುಸೂದನ್ ರವರ ಬಾರ್ನ್ ಔಲ್ ಛಾಯಾಚಿತ್ರಕ್ಕೆ ವೈ ಪಿ ಎಸ್ ಹಾನರರಿ ಮೆಂಷನ್ ದೊರೆತಿದ್ದು ಇನ್ನೆರಡು ಛಾಯಾಚಿತ್ರಗಳು ಸ್ವೀಕೃತಗೊಂಡಿವೆ .

ಈ ಸಲೂನ್ ನಲ್ಲಿ ನಾಲ್ಕು ವಿಭಾಗಗಳಿದ್ದು 206 ಮಂದಿ ಸ್ಪರ್ಧೆಗಳಿದ್ದು 2753 ಛಾಯಾಚಿತ್ರಗಳು ಸ್ಪರ್ಧೆಯಲ್ಲಿ ಇದ್ದವು. ಹಾಗೂ ಜನವರಿ 2024 ರಿಂದ ಇತ್ತೀಚಿಗೆ ನಡೆದ ಹಲವಾರು ಇಂಟರ್ನ್ಯಾಷನಲ್ ಸಲೂನ್ ಫೋಟೋಗ್ರಾಫಿ ಸ್ಪರ್ಧೆಗಳಲ್ಲಿ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಾಫಿಯ ಚಿನ್ನದ ಪದಕಗಳು ಹಾಗೂ 20ಕ್ಕೂ ಹೆಚ್ಚು ಹಾನರರಿ ಪದಕಗಳು ದೊರೆತಿವೆ ಹಾಗೂ ಎಸ್ ಆರ್ ಮಧುಸೂದನ್ ರವರಿಗೆ ಫೋಟೋಗ್ರಾಫಿ ಸೊಸೈಟಿ ಆಫ್ ಇಂಡಿಯಾದ 2023 ನೇ ಸಾಲಿನ ಟಾಪ್ 100 ಇಂಡಿಯನ್ ಎಕ್ಸಿಬಿಟರ್ ರಲ್ಲಿ 74ನೇ ಸ್ಥಾನ ಗಳಿಸಿದ್ದಾರೆ. ಹಾಗೂ ಟಾಪ್ ರಾಂಕಿಂಗ್ (RANKING) 20 ಛಾಯಾ ಚಿತ್ರಗಳಲ್ಲಿ ಜಿಂಕೆಗಳ ಮಿಲನ ಚಿತ್ರ 17 ನೇ ( RANK )ರಾಂಕಿಂಗ್ ಗಳಿಸಿರುತ್ತಾರೆ.

Leave a Reply

Your email address will not be published. Required fields are marked *