ಹಿಂದೂ ಧರ್ಮದಲ್ಲಿ ಅರಿಶಿಣ ಕುಂಕುಮಕ್ಕೆ ವಿಶೇಷ ಸ್ಥಾನವಿದೆ:ರೇಖಾ ಶ್ರೀನಿವಾಸ್

ಮೈಸೂರು:18 ಜುಲೈ 2022

ನಂದಿನಿ ಮೈಸೂರು

ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಆಷಾಢ ಮಾಸ ಹಾಗೂ ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನದ ಸ್ವಚ್ಛ ತೆ ಮಾಡುವ 50 ಮಹಿಳಾ ಸ್ವಚ್ಚತಾ ಸೇನಾನಿಗಳಿಗೆ ಸೀರೆ ,ಬಳೆ, ಹೂವು, ಕುಂಕುಮ ,ಅರಿಶಿನ, ಬಳೆ ನೀಡಿ ಬಾಗಿನ ನೀಡುವ ಮೂಲಕ ಅರಿಶಿನ ಕುಂಕುಮ ಎಂಬ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷಿತ್ ರವರು ಮಾತನಾಡಿ ಮೈಸೂರು ಪ್ರಾಂತ್ಯದಲ್ಲಿ ಆಷಾಢ ಮಾಸವೆಂದರೇ ದೇವಿಆರಾಧನೆಗೆ ಪೂಜಾಕೈಂಕರ್ಯಕ್ಕೆ ಮಹಿಳೆಯರು ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ, ಚಾಮುಂಡಿ ಬೆಟ್ಟದಲ್ಲಿ ಪ್ರತಿನಿತ್ಯ ಸೇವೆಸಲ್ಲಿಸುವ ಮಹಿಳಾ ಭದ್ರತಾ ಸಿಬ್ಬಂದಿಗಳಿಗೆ ಸ್ವಚ್ಚತಾ ಸಿಬ್ಬಂದಿಗಳಿಗೆ ಬಾಗಿನ ಸಮರ್ಪಣೆ ಮಾಡುವ ಮೂಲಕ ಅವರಲ್ಲೂ ಸಹ ಹಬ್ಬಸಡಗರ ಮನೆಮಾಡಿದೆ, ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಅವರಲ್ಲಿ ಮತ್ತಷ್ಟು ಆತ್ಮ ಸ್ಥೈರ್ಯ ಮನಃಶಕ್ತಿ ತುಂಬಿದೆ ಎಂದರು,
ನಂತರಕಾಂಗ್ರೆಸ್ ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್ ರವರು ಮಾತನಾಡಿ ಆಷಾಡ ಮಾಸದ ಆಚರಣೆ ಮೈಸೂರು ಭಾಗವಲ್ಲದೇ ಇಡೀ ದೇಶದಲ್ಲಿ ಮಹಿಳೆಯರು ಸಾಂಪ್ರದಾಯಿಕ ಹಬ್ಬವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ, ಚಾಮುಂಡಿ ಬೆಟ್ಟದಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ವ್ಯಾಪಾರಸ್ಥರನ್ನು ಖಾಯಂ ವೃತ್ತಿಪರವಾಗಿ ಘೋಷಿಸಬೇಕು, ಮಹಿಳೆಯರು‌ ಹೆಚ್ಚಾಗಿ ಮೆಟ್ಟಿಲು ಹತ್ತಿಕೊಂಡು ಅರಿಶಿನ ಕುಂಕುಮ ಸೇವೆ ಸಲ್ಲಿಸಿ ಚಾಮುಂಡಿ ತಾಯಿ ದರ್ಶನ ಪಡೆಯಲು ಬರುತ್ತಾರೆ ಹಾಗಾಗಿ ಮುಜರಾಯಿ ಇಲಾಖೆ ಅದಕ್ಕೊಂದು ಧಾರ್ಮಿಕ ಯೋಜನೆ ರೂಪಿಸಿ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಮಾತನಾಡಿ
ಹಿಂದೂ ಧರ್ಮದಲ್ಲಿ ಅರಿಶಿಣ ಕುಂಕುಮಕ್ಕೆ ವಿಶೇಷ ಸ್ಥಾನವಿದೆ. ಮಹಿಳೆಯ ಮುತ್ತೈದೆತನ ಅರಿಶಿಣ ಕುಂಕುಮದೊಂದಿಗೆ ಪೂರ್ಣಗೊಳ್ಳುತ್ತದೆ. ಈ ಕಾರ್ಯಕ್ರಮ ಆಯೋಜನೆಯ ಮೂಲಕ ಧರ್ಮ ಜಾಗೃತಿ, ಧಾರ್ಮಿಕ ಸಾಮರಸ್ಯದ ಜೊತೆಗೆ ಮಹಿಳಾ ಸಂಘಟನೆಗೆ ಮಹಿಳೆಯರನ್ನು ಸಜ್ಜುಗೊಳಿಸಿದಂತಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷಿತ್ ,ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಶ್ರೀದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ,ಚಾಮುಂಡಿಬೆಟ್ಟದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭರತ್ , ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಣ್ಣ, ವಿದ್ಯ,ಸಂತೋಷ್ ಕಿರಾಳು ,ರಾಜೇಶ್, ಪವನ್ ಸಿದ್ರಾಮ ,ಪ್ರಾಧ್ಯಾಪಕರಾದ ಪದ್ಮಾ ,ದೇವೆಂದರ್ , ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *