ನಿಗದಿತ ಅವಧಿಗೂ ಮುನ್ನ 28 ವಾರಗಳಿಗೇ ಜನಿಸಿದ ಶಿಶುವಿಗೆ ನೂತನ ಜೀವನದ ಭರವಸೆ ನೀಡಿದ ಮೈಸೂರಿನ ಮದರ್‍ಹುಡ್ ಹಾಸ್ಪಿಟಲ್ಸ್‍ನಲ್ಲಿನ ಎನ್‍ಐಸಿಯು ಪರಿಣತರು

ನಂದಿನಿ ಮೈಸೂರು

ನಿಗದಿತ ಅವಧಿಗೂ ಮುನ್ನ 28 ವಾರಗಳಿಗೇ ಜನಿಸಿದ ಶಿಶುವಿಗೆ ನೂತನ ಜೀವನದ ಭರವಸೆ ನೀಡಿದ ಮೈಸೂರಿನ ಮದರ್‍ಹುಡ್ ಹಾಸ್ಪಿಟಲ್ಸ್‍ನಲ್ಲಿನ ಎನ್‍ಐಸಿಯು ಪರಿಣತರು

ಮೈಸೂರು:- ಮೈಸೂರಿನ ಮದರ್‍ಹುಡ್ ಹಾಸ್ಪಿಟಲ್, ಗಂಭೀರ ರೀತಿಯ ನವಜಾತ ಶಿಶು ತೀವ್ರ ಆರೈಕೆ ಅಗತ್ಯವಿದ್ದ ಹಾಗೂ ನಿಗದಿತ ಅವಧಿಗೂ ಮುನ್ನ 28 ವಾರಗಳಿಗೇ ಜನಿಸಿದ ಹೆಣ್ಣು ಮಗುವಿನ ಜೀವವನ್ನು ಉಳಿಸಿದೆ.
ಗುಂಡ್ಲುಪೇಟೆ ಬಳಿಯ ದೂರದ ಗ್ರಾಮದ ಶ್ರೀಮತಿ ದೇವಿಕಾ ಮಹೇಶ್ ತಮಗೆ ವಿವಾಹವಾದ 15 ವರ್ಷಗಳ ನಂತರ ಗರ್ಭಿಣಿಯಾಗಿದ್ದರು. ನಿಗದಿತ ಅವಧಿಗೂ ಮುನ್ನ ಜನನಕ್ಕೆ ಕಾರಣವಾಗುವ, ಸಂಕೀರ್ಣ ತೊಂದರೆಗಳಿಂದಾಗಿ ಅವರು 28 ವಾರಗಳಲ್ಲಿಯೇ(7 ತಿಂಗಳುಗಳ ಗರ್ಭಾವಸ್ಥೆಯ ನಂತರ) ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಅಲ್ಲಿನ ವೈದ್ಯರ ತಂಡ ಎರಡೂ ಶಿಶುಗಳನ್ನು ಉಳಿಸಲು ಕೈಲಾದಷ್ಟು ಅತ್ಯುತ್ತಮ ಪ್ರಯತ್ನ ನಡೆಸಿದ್ದರು. ಆದರೆ, ತೀವ್ರ ರೀತಿಯ ಜನನ ಸಂಬಂಧಿತ ಸಂಕೀರ್ಣ ತೊಂದರೆಗಳಿಂದಾಗಿ ಒಂದು ಶಿಶು ಮಾತ್ರ ಉಳಿದುಕೊಂಡಿತ್ತು. ಈ ರೀತಿಯಲ್ಲಿ ಉಳಿದುಕೊಂಡ ಶಿಶು ಕೇವಲ 1.050 ಕೆಜಿಯಷ್ಟು ತೂಕ ಹೊಂದಿತ್ತು. ಜೊತೆಗೆ ಉಸಿರಾಟದ ತೊಂದರೆ, ಜೀವಕ್ಕೆ ಬೆದರಿಕೆವೊಡ್ಡುವ ಸೋಂಕುಗಳು, ಹಲವು ಔಷಧಗಳಿಗೆ ನಿರೋಧಕತೆ, ತೀವ್ರ ನ್ಯೂಮೋನಿಯಾದಿಂದ ಬಳಲಿತ್ತು. ಅತ್ಯುನ್ನತ ಮಟ್ಟದ ಎನ್‍ಐಸಿಯು(ನವಜಾತ ಶಿಶು ತೀವ್ರ ನಿಗಾ ಘಟಕ) ಆರೈಕೆಯ ಅಗತ್ಯ ಶಿಶುವಿಗೆ ಇತ್ತು. ಆದ್ದರಿಂದ ಈ ಶಿಶುವನ್ನು ಸಂಚಾರಿ ಎನ್‍ಐಸಿಯು ಘಟಕದಲ್ಲಿ ಮೈಸೂರಿನ ಮದರ್‍ಹುಡ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಗಂಭೀರವಾಗಿ ಅಸ್ವಸ್ಥವಾಗಿರುವ ನವಜಾತ ಶಿಶುಗಳನ್ನು ಸಾಗಿಸುವುದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಆ್ಯಂಬುಲೆನ್ಸ್ ಈ ಸಂಚಾರಿ ಎನ್‍ಐಸಿಯು ಘಟಕವಾಗಿರುತ್ತದೆ.
ರೋಗನಿರ್ಣಯದ ನಂತರ ಶಿಶುವಿನಲ್ಲಿ ಪ್ಲೇಟ್‍ಲೆಟ್‍ಗಳ ಸಂಖ್ಯೆ ಬಹಳ ಕಡಿಮೆ ಇರುವುದನ್ನು ನವಜಾತ ಶಿಶು ತಜ್ಞರ ತಂಡ ಗಮನಿಸಿತ್ತು. ಇದರಿಂದ ಶಿಶುವಿಗೆ ತೀವ್ರ ಸೋಂಕು ಉಂಟಾಗುವ ಸಾಧ್ಯತೆ ಇತ್ತು. ಶಿಶುವಿಗೆ ರಕ್ತ ಮತ್ತು ಪ್ಲೇಟ್‍ಲೆಟ್ ವರ್ಗಾವಣೆಯ ಕಾರ್ಯವನ್ನು ವೈದ್ಯರು ಪೂರ್ಣಗೊಳಿಸಿದ್ದರು. ಎರಡು ವಾರಗಳ ನಂತರ ಶಿಶುವಿನ ಆರೋಗ್ಯ ಮತ್ತೊಮ್ಮೆ ತೀವ್ರ ನಿರೋಧಕತೆವುಳ್ಳ ಸೋಂಕಿನ ಕಾರಣವಾಗಿ ಹದಗೆಟ್ಟಿತ್ತು. ಐದು ವಾರಗಳ ಕಾಲ ಶಿಶುವನ್ನು ಎನ್‍ಐಸಿಯುನಲ್ಲಿ ಇರಿಸಲಾಗಿದ್ದು, ಆಕೆಯ ಸ್ಥಿತಿಯನ್ನು ಸ್ಥಿರಗೊಳಿಸಲು ಹಲವಾರು ಚಿಕಿತ್ಸೆಗಳನ್ನು ನೀಡಲಾಯಿತು. ಆರೋಗ್ಯಕರ ತಾಯಿ ಹಾಲು ಜೊತೆಗೆ ಜನನ ಪೂರ್ವ ಪೋಷಕಾಂಶಗಳನ್ನು ಶಿಶುವಿಗೆ ನೀಡಲಾಯಿತ್ತಲ್ಲದೆ, ಶಿಶುವಿನ ಹೃದಯ, ತಲೆ, ಶ್ವಾಸಕೋಶಗಳು ಮತ್ತು ಕರುಳುಗಳ ನಿಗದಿತ ಪರೀಕ್ಷೆಗಳನ್ನು ನಡೆಸಲಾಯಿತು.
ಮೈಸೂರಿನ ಮದರ್‍ಹುಡ್ ಹಾಸ್ಪಿಟಲ್‍ನ ನವಜಾತ ಶಿಶು ರೋಗಶಾಸ್ತ್ರ ಸಲಹಾತಜ್ಞರಾದ ಡಾ. ಚೇತನ್ ಬಿ. ಅವರು ಮಾತನಾಡಿ, “ಈ ವೈದ್ಯಕೀಯ ತುರ್ತು ಸ್ಥಿತಿಗೆ ಚಿಕಿತ್ಸೆ ನೀಡುವುದು ನಮಗೆ ಬಹಳ ಮುಖ್ಯವಾಗಿತ್ತು. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವುದಕ್ಕಾಗಿ ಮಗುವನ್ನು ಉಳಿಸಿಕೊಳ್ಳುವಲ್ಲಿ ನಮ್ಮ ತಂಡ ಪ್ರಮುಖ ಪಾತ್ರ ವಹಿಸಿತ್ತು. ತಕ್ಷಣದಲ್ಲಿ ಶಿಶುವಿನ ಆರೋಗ್ಯ ಸ್ಥಿತಿಯನ್ನು ಗಮನಿಸುವುದು ಬಹಳ ಮುಖ್ಯವಾಗಿತ್ತು. ಏಕೆಂದರೆ ಇದು ಸಂಕೀರ್ಣ ತೊಂದರೆಗಳಿಗೆ ದಾರಿ ಮಾಡಬಹುದಿತ್ತು. ಅವರ ಕುಟುಂಬ ಚಿಕಿತ್ಸೆಯ ವೆಚ್ಚವನ್ನು ನೀಡುವ ಶಕ್ತಿಯನ್ನು ಹೊಂದಿರಲಿಲ್ಲವಾದ್ದರಿಂದ ಹಣಕಾಸು ಸಹಾಯ ಕೋರಲು ನಾವು ನಿಯೋನೇಟ್ಸ್ ಫೌಂಡೇಷನ್ ಆಫ್ ಇಂಡಿಯಾವನ್ನು ಸಂಪರ್ಕಿಸಿದ್ದೆವು’’ ಎಂದರು.
ಡಾ. ಚೇತನ್ ಮಾತನಾಡಿ, “ಸಮಯಕ್ಕೆ ಸರಿಯಾದ ವೈದ್ಯಕೀಯ ಹಸ್ತಕ್ಷೇಪ ಮತ್ತು ಗುಣಮಟ್ಟದ ಚಿಕಿತ್ಸೆಯೊಂದಿಗೆ ಶಿಶುವಿನ ಸ್ಥಿತಿ ಸುಧಾರಿಸಿತ್ತು. ಶಿಶು ಪ್ರಗತಿ ಹೊಂದುತ್ತಿರುವುದನ್ನು ತಂಡ ಗಮನಿಸುತ್ತಿತ್ತು. ಕೊಳವೆಯಲ್ಲಿ ಶಿಶುವಿಗೆ ಪೋಷಕಾಂಶಯುತ ಆಹಾರ ನೀಡಲಾಗುತ್ತಿತ್ತು. ನಿಧಾನವಾಗಿ, ಹಂತ ಹಂತವಾಗಿ ಆಕೆಯ ತೂಕ ಹೆಚ್ಚಾಗಲು ಆರಂಭವಾಗಿತ್ತು. ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದಾಗ ಶಿಶುವಿನ ತೂಕ 1.620 ಕಿಲೋಗಳಷ್ಟು ಇತ್ತು. ಅವಳು ಯಾವುದೇ ಆಮ್ಲಜನಕದ ನೆರವಿಲ್ಲದೆ, ಸ್ವತಃ ಉಸಿರಾಡುತ್ತಿದ್ದು, ಸಾಮಾನ್ಯ ಆಹಾರ ಸೇವನೆ ಮಾಡುತ್ತಿದ್ದಳು. ಶಿಶುವಿಗೆ ಇನ್ನು ಮುಂದೆ 3, 6, 9, 12 ತಿಂಗಳುಗಳಲ್ಲಿ ಮಕ್ಕಳ ನರರೋಗ ಶಾಸ್ತ್ರ ಮೌಲ್ಯೀಕರಣ ಕೈಗೊಳ್ಳುವುದರ ಜೊತೆಗೆ ನಮ್ಮ ನವಜಾತ ಶಿಶು ರೋಗಶಾಸ್ತ್ರ ತಂಡ ಆಗಾಗ್ಗೆ ಶಿಶುವಿನ ಪರೀಕ್ಷೆ ನಡೆಸಲಿದೆ. ಜೊತೆಗೆ ಅತ್ಯುತ್ತಮ ಫಲಿತಾಂಶದ ಭರವಸೆಗಾಗಿ 1.5 ವರ್ಷಗಳ ನಂತರ ಮತ್ತೊಮ್ಮೆ ಪರೀಕ್ಷೆ ಮಾಡಲಾಗುವುದು’’ ಎಂದರು.
ಮದರ್‍ಹುಡ್ ಹಾಸ್ಪಿಟಲ್‍ನ ನವಜಾತಶಿಶು ರೋಗಶಾಸ್ತ್ರ ಸಲಹಾ ತಜ್ಞ ಮತ್ತು ಮಕ್ಕಳ ರೋಗ ತಜ್ಞ ಡಾ. ಸುಹೇಮ್ ಅಫ್ಸರ್ ಅವರು ಮಾತನಾಡಿ, “ಶಿಶು ಅತ್ಯಂತ ಅಸ್ವಸ್ಥ ಸ್ಥಿತಿಯಲ್ಲಿತ್ತಲ್ಲದೇ ಗಮನಾರ್ಹ ಪ್ರಮಾಣದ ಬ್ಯಾಕ್ಟೀರಿಯ ಸೋಂಕು ಹೊಂದಿತ್ತು. ಶಿಶುವಿನ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಿ ತಕ್ಕ ರೀತಿಯಲ್ಲಿ ಸೋಂಕಿಗೆ ಚಿಕಿತ್ಸೆ ನೀಡುವುದು ಒಂದು ತಂಡವಾಗಿ ನಮ್ಮ ಆದ್ಯತೆಯಾಗಿತ್ತು. ಆರಂಭದಲ್ಲಿ ಶಿಶುವಿಗೆ ಸೆಂಟ್ರಲ್ ಆಕ್ಸೆಸ್(ರಕ್ತ ವರ್ಗಾವಣೆ ಮತ್ತು ಚಿಕಿತ್ಸೆ ನೀಡಲು ಬಳಸುವ ಉಪಕರಣ) ಮತ್ತು ಸರಾಗವಾದ ಉಸಿರಾಟಕ್ಕಾಗಿ ಗಾಳಿ ಓಡಾಡಲು ಮಾರ್ಗದ ಅಗತ್ಯವಿತ್ತು. ಸೂಕ್ತ ಆ್ಯಂಟಿಬಯಾಟಿಕ್‍ಗಳೊಂದಿಗೆ ಶಿಶುವಿನ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡು ಬಂದಿತ್ತು. ಆ್ಯಂಟಿಬಯಾಟಿಕ್‍ಗಳ ಚಿಕಿತ್ಸೆ ನೀಡುವಲ್ಲಿ ಎನ್‍ಐಸಿಯು ನಿದರ್ಶನೀಯ ಕಾರ್ಯ ಮಾಡಿತ್ತು. ಸೋಂಕು ಬಹು ಔಷಧ ನಿರೋಧಕತೆ ಹೊಂದಿದ್ದು, ಸಂಪೂರ್ಣವಾಗಿ ಗುಣಪಡಿಸಲು ನಿರ್ದಿಷ್ಟ ಆ್ಯಂಟಿಬಯಾಟಿಕ್‍ಗಳನ್ನು ನೀಡಬೇಕಿತ್ತು. 14 ದಿನಗಳ ಕಾಲ ಆ್ಯಂಟಿಬಯಾಟಿಕ್‍ಗಳನ್ನು ನೀಡಲಾಯಿತು. ನನಗೆ ಬಹಳ ಸಂತಸವಾಗಿದೆಯಲ್ಲದೇ ಅಮೂಲ್ಯ ಆರೋಗ್ಯಯುತ ಶಿಶುವಿನೊಂದಿಗೆ ಮರಳುತ್ತಿರುವ ಪೋಷಕರನ್ನು ನಾನು ಅಭಿನಂದಿಸುತ್ತೇನೆ. ಜೊತೆಗೆ ಈ ಫಲಿತಾಂಶದ ಭರವಸೆ ನೀಡುವಲ್ಲಿ ಕಾರ್ಯಕ್ಷಮತೆಯೊಂದಿಗೆ ದುಡಿದ ನನ್ನ ತಂಡವನ್ನು ಕೂಡ ನಾನು ಅಭಿನಂದಿಸುತ್ತೇನೆ. ಮಗುವಿನ ಸ್ಥಿತಿ ಪದೇ ಪದೇ ಬದಲಾಗುತ್ತಿದ್ದರಿಂದ ಅಗತ್ಯವಾದ ಚಿಕಿತ್ಸೆ ಪೂರೈಸುವುದು ಸವಾಲಿನ ವಿಷಯವಾಗಿತ್ತು. ಶಿಶುವಿನ ಜೀವ ಉಳಿಸುವುದು ಮತ್ತು ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿರುವಂತೆ ಮಾಡುವುದು ನಮ್ಮ ಆದ್ಯತೆಯಾಗಿತ್ತು’’ ಎಂದರು.
ಶಿಶುವಿನ ತಂದೆ ಮಹೇಶ್ ಅವರು ತಮ್ಮ ಕೃತಜ್ಞತೆಗಳನ್ನು ಅಭಿವ್ಯಕ್ತಿಸಿ, ಮಾತನಾಡಿ, “ನಾನು ನನ್ನ ಪತ್ನಿ ಪೋಷಕರಾಗಲು ಹಂಬಲಿಸುತ್ತಿದ್ದೆವು. ನಮ್ಮ ವಿವಾಹವಾಗಿ 15 ವರ್ಷಗಳ ನಂತರ ನಮಗೆ ಅವಳಿ ಶಿಶುಗಳ ವರ ಲಭಿಸಿತ್ತು. ಇವುಗಳಲ್ಲಿ ಒಂದು ಶಿಶು ಸೋಂಕುಗಳಿಗೆ ಬಲಿಯಾದಾಗ ನಮಗೆ ಎದೆ ಒಡೆದಂತಾಗಿತ್ತು. ಉಳಿದುಕೊಂಡ ಮಗಳ ಆರೋಗ್ಯ ಕೂಡ ಹದಗೆಟ್ಟಾಗ ನಾವು ಕುಸಿದುಹೋಗಿದ್ದೆವು. ನಮ್ಮ ಏಕೈಕ ಶಿಶುವನ್ನು ಉಳಿಸಿಕೊಳ್ಳಲು ನಮ್ಮ ಗ್ರಾಮದಿಂದ ಇಷ್ಟು ದೂರ ಬಂದು ತಮಗೆ ಕೈಲಾದುದ್ದೆಲ್ಲವನ್ನು ಮಾಡಲು ನಾನು ಮತ್ತು ನನ್ನ ಪತ್ನಿ ಪ್ರಯತ್ನಿಸಿದ್ದೆವು. ನಮ್ಮ ಮಗಳನ್ನು ಉಳಿಸಿಕೊಟ್ಟಿದ್ದಕ್ಕಾಗಿ ಅಲ್ಲದೆ, ಪೋಷಕರಾಗಿ ಆನಂದ ಅನುಭವಿಸುವ ಅವಕಾಶವನ್ನು ನಮಗೆ ನೀಡಿದ್ದಕ್ಕಾಗಿ ಮದರ್‍ಹುಡ್ ಹಾಸ್ಪಿಟಲ್ಸ್‍ನ ತಂಡಕ್ಕೆ ನಾವು ಮತ್ತು ನಮ್ಮ ಕುಟುಂಬ ಕೃತಜ್ಞರಾಗಿದ್ದೇವೆ. ಮೈಸೂರಿನ ಮದರ್‍ಹುಡ್ ಹಾಸ್ಪಿಟಲ್‍ಗೆ ಆಕೆಯನ್ನು ಕರೆತಂದಾಗ ಇಲ್ಲಿನ ವೈದ್ಯರು ಮತ್ತು ದಾದಿಯರು ನಮಗೆ ಪುನರ್ ಭರವಸೆಯ ಭಾವನೆಯನ್ನು ನೀಡಿದರು. ಚಿಕಿತ್ಸೆಗಾಗಿ ಹಣಕಾಸು ಬೆಂಬಲ ಪೂರೈಸಿದ ನಿಯೋನೇಟ್ಸ್ ಫೌಂಡೇಷನ್ ಆಫ್ ಇಂಡಿಯಾಗೂ ಕೂಡ ನಾವು ಕೃತಜ್ಞರಾಗಿದ್ದೇವೆ’’ ಎಂದರು.
ಸ್ಥಿರವಾದ ಆರೋಗ್ಯ ಸ್ಥಿತಿಯಲ್ಲಿ 55ದಿನಗಳ ಎನ್‍ಐಸಿಯು ವಾಸ್ತವ್ಯದ ನಂತರ ಸ್ಥಿರವಾದ ಆರೋಗ್ಯ ಸ್ಥಿತಿಯೊಂದಿಗೆ ಶಿಶುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಮೈಸೂರಿನ ಮದರ್‍ಹುಡ್ ಹಾಸ್ಪಿಟಲ್‍ನ ಸೌಲಭ್ಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ.ಜೆ. ಅವರು ಹೇಳಿದರು.
ಮದರ್‍ಹುಡ್ ಹಾಸ್ಪಿಟಲ್ಸ್ ಕುರಿತು :-
ಮದರ್‍ಹುಡ್ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯ ಜಾಲವು ಭಾರತದ ಮುಂಚೂಣಿಯ ಏಕ ವಿಶೇಷತೆಯ ಆಸ್ಪತ್ರೆ ಸರಣಿಯಾಗಿದ್ದು, 10 ನಗರಗಳಲ್ಲಿ 20 ಆಸ್ಪತ್ರೆಗಳನ್ನು ಹೊಂದಿದೆ. ಜೊತೆಗೆ 1000ಕ್ಕೂ ಹೆಚ್ಚಿನ ಮುಂಚೂಣಿಯ ಸ್ತ್ರೀರೋಗ ತಜ್ಞರು, ಮಕ್ಕಳ ರೋಗತಜ್ಞರು, ನವಜಾತ ಶಿಶು ತಜ್ಞರ ಸಹಯೋಗವನ್ನು ತನ್ನ ಆಸ್ಪತ್ರೆಯ ರಾಷ್ಟ್ರವ್ಯಾಪಿ ಜಾಲದಲ್ಲಿ ಹೊಂದಿದೆ. ತಮ್ಮ ವರ್ಗದಲ್ಲಿನ ಅತ್ಯುತ್ತಮ ವೈದ್ಯಕೀಯ ಪರಿಣತಿ ಮತ್ತು ಸಮಗ್ರವಾದ ಮಹಿಳಾ ಮತ್ತು ಮಕ್ಕಳ ಆರೈಕೆ ಸೇವೆಗಳಿಗೆ ಮಾನ್ಯತೆ ಪಡೆದಿರುವ ಈ ಮುಂಚೂಣಿಯ ಆರೋಗ್ಯ ಸೇವಾ ಸರಣಿ ಉನ್ನತ ಅಪಾಯದ ಗರ್ಭಾವಸ್ಥೆಗಳು, ಸಂಕೀರ್ಣ ಮಹಿಳಾ ಶಸ್ತ್ರಚಿಕಿತ್ಸೆಗಳನ್ನು ನಿಭಾಯಿಸುವಲ್ಲಿ ಆದ್ಯಪ್ರವರ್ತಕ ಸಾಧನೆ ಹೊಂದಿದೆ. ಸಂಕೀರ್ಣ ಮಹಿಳಾ ಶಸ್ತ್ರಚಿಕಿತ್ಸೆಗಳಲ್ಲಿ ಫರ್ಟಿಲಿಟಿ ವಿಸ್ತರಣೆ ಅಥವಾ ಯುರೊ-ಗೈನೇ ಶಸ್ತ್ರಚಿಕಿತ್ಸೆಗಳು ಸೇರಿರುತ್ತದೆ. ಜೊತೆಗೆ ಗಂಭೀರ ಸ್ಥಿತಿ ಹೊಂದಿರುವ ಹಾಗೂ ಜನನ ಸಮಯದಲ್ಲಿ ಅತ್ಯಂತ ಕಡಿಮೆ ತೂಕ ಹೊಂದಿರುವ ನವಜಾತ ಶಿಶುಗಳ ನಿರ್ವಹಣೆಯಲ್ಲಿ ಆಸ್ಪತ್ರೆ ಪರಿಣತಿ ಹೊಂದಿದೆ. ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ 300ಕ್ಕೂ ಹೆಚ್ಚಿನ ನವಜಾತ ಶಿಶು ತೀವ್ರ ನಿಗಾ ಘಟಕ(ಎನ್‍ಐಸಿಯು) ಹಾಸಿಗೆಗಳ ಜಾಲವನ್ನು ಹೊಂದಿರುವ ಆಸ್ಪತ್ರೆಯಾದ ಮದರ್‍ಹುಡ್ ಹಾಸ್ಪಿಟಲ್ಸ್ ನಿಗದಿತ ಅವಧಿಗೂ ಮುನ್ನ ಜನಿಸಿದ ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿರುವ ಮಕ್ಕಳನ್ನು ನಿಭಾಯಿಸುವಲ್ಲಿ ಭಾರತದಲ್ಲಿ ಶಿಫಾರಸ್ಸು ಮಾಡಲಾಗುವ ಅತ್ಯುತ್ತಮ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

Leave a Reply

Your email address will not be published. Required fields are marked *