ಪಡುವಾರಹಳ್ಳಿಯಲ್ಲಿ ನಾಗೇಂದ್ರ ರವರು ಬಿರುಸಿನ ಚುನಾವಣಾ ಪ್ರಚಾರ

ನಂದಿನಿ ಮೈಸೂರು

*ಪಡುವಾರಹಳ್ಳಿಯಲ್ಲಿ ನಾಗೇಂದ್ರ ರವರು ಬಿರುಸಿನ ಚುನಾವಣಾ ಪ್ರಚಾರ*

ಇಂದು ನಗರದ ವಾರ್ಡ್ ನಂ 22 ಪಡುವಾರಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಎಲ್.ನಾಗೇಂದ್ರ ರವರು ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು
ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು.ರಸ್ತೆಯ ದಾರಿಯುದ್ದಕ್ಕೂ ಪುಷ್ಪವೃಷ್ಠಿ ಮಾಡಿ ಸ್ವಾಗತಿಸಿದರು.

ಶಾಸಕರಾದ ಎಲ್.ನಾಗೇಂದ್ರ ಮಾತನಾಡಿ ಪಡುವಾರಹಳ್ಳಿಯ ಸಮಗ್ರ ಅಭಿವೃದ್ಧಿಗೆ ಸುಮಾರು70 ಕೋಟಿ ಅನುದಾನದಲ್ಲಿ
ರಸ್ತೆಯ ಡಾಂಬರೀಕರಣ,ಯು.ಜಿ.ಡಿ.
ಒಳಚರಂಡಿ, ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕ, ಬಯಲು ರಂಗಮಂದಿರದ ಹಾಗೂ ಕಲ್ಯಾಣ ಮಂಟಪ ಅಭಿವೃದ್ಧಿ
ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳು,ಪ.ಜಾತಿ/ಪಂಗಡದ ಸಮುದಾಯ ಭವನದ ನಿರ್ಮಾಣ,ಆಟೋ ನಿಲ್ದಾಣದ ನಿರ್ಮಾಣ ಹೀಗೆ ನನ್ನ ಅವಧಿಯಲ್ಲಿ ನಾಗರೀಕರ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪಡುವಾರಹಳ್ಳಿಯ ಸಮಗ್ರ ಅಭಿವೃದ್ಧಿ ಮಾಡಿರುತ್ತೇನೆ ಇನ್ನೂ ಹೆಚ್ಚಿನ ಪ್ರಮಾಣದ ಕೆಲಸಗಳು ಮಾಡ ಬೇಕಾಗಿದ್ದು ಮತ್ತೊಮ್ಮೆ ನನಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಕೈ ಬಲಪಡಿಸಲು ಮನವಿ ಮಾಡಿದರು.

ಈ ಸಂಧರ್ಭದಲ್ಲಿ
ಪಡುವಾರಹಳ್ಳಿಯ ಗ್ರಾಮಾಭ್ಯುದಯ ಟ್ರಸ್ಟ್ ಅದ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಎಂ.ಭೈರಪ್ಪ, ರಾಮಣ್ಣ,ಲೋಕೇಶ್ವರ,ಸೋಮಣ್ಣ,
ವಾರ್ಡ್ ಅದ್ಯಕ್ಷ ಮಂಜು,ಎಂ.ಚಿಕ್ಕವೆಂಕಟು,ಎಸ್.ಬಿ.ಶಿವು, ಸಿ.ಡಿ.ಕುಮಾರ್, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ ರಾಮಕೃಷ್ಣ,,ಈ.ಬಸವರಾಜು,ವಿ.ಭೈರವ,ಅರುಣ್,
ಎನ್.ಯೋಗಾನಂದ್,ಸಿ.ಸಂತೋಷ್,ಆಟೋ
ಕಾಂತಾ,ಆಟೋ ಪ್ರಕಾಶ್,ಚಾಮ,
ವೇಣು,ಗೋಪಾಲ,ಗುರುದತ್ತ,ಹೇಮಾ,
ಛಾಯಾ ಪ್ರಸಾದ್,ಗಿರೀಶ್ ಮತ್ತಿತರಿದ್ದರು.

Leave a Reply

Your email address will not be published. Required fields are marked *