ನೆಕ್ಸಸ್‌ ಸೆಂಟರ್‌ ಸಿಟಿ ಮಾಲ್‌ನಲ್ಲಿ ಸ್ಟಾಟಿಕ್‌ ಇವಿ ಚಾರ್ಜಿಂಗ್‌ ಘಟಕ

ನಂದಿನಿ ಮೈಸೂರು

ನೆಕ್ಸಸ್‌ ಸೆಂಟರ್‌ ಸಿಟಿ ಮಾಲ್‌ನಲ್ಲಿ ಸ್ಟಾಟಿಕ್‌ ಇವಿ ಚಾರ್ಜಿಂಗ್‌ ಘಟಕ

ಮೈಸೂರು, ಡಿಸೆಂಬರ್‌ 7- ಭಾರತದ ಮುಂಚೂಣಿಯ ಇವಿ ಚಾರ್ಜಿಂಗ್‌ ನೆಟ್‌ವರ್ಕ್‌ ಸ್ಟಾಟಿಕ್‌ ಮೈಸೂರಿನ ನೆಕ್ಸಸ್‌ ಸೆಂಟರ್‌ ಸಿಟಿ ಮಾಲ್‌ನಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಆರಂಭಿಸಿದೆ.

ಈ ಚಾರ್ಜಿಂಗ್‌ ಸ್ಟೇಷನ್‌ನಲ್ಲಿ ಎರಡು 60 ಕಿಲೋವ್ಯಾಟ್‌ ಸಿಂಗಲ್‌ ಗನ್‌ ಚಾರ್ಜರ್‌ಗಳಿದ್ದು, ಹಾಲಿ ಇರುವ ಮತ್ತು ಮುಂದೆ ಮಾರುಕಟ್ಟೆಗೆ ಬರಲಿರುವ ವಿದ್ಯುತ್‌ ಚಾಲಿತ ವಾಹನಗಳ ಚಾರ್ಜಿಂಗ್‌ಗೆ ಸೂಕ್ತವೆನಿಸಿವೆ. ಟಾಟಾ ನೆಕ್ಸನ್‌, ಎಂಜಿ ಇವಿಝಡ್‌ಎಸ್‌, ಟಾಟಾ ಟಿಯಾಗೋ ಇವಿ ಇತ್ಯಾದಿ ಕಾರುಗಳ ಚಾರ್ಜಿಂಗ್‌ ಮಾಡಬಹುದು. ವಿವಿಧ ರೀತಿಯ ಇವಿ ತಂತ್ರಜ್ಞಾನದ ಚತುಷ್ಚಕ್ರ ವಾಹನಗಳನ್ನು ಅತಿ ವೇಗದಲ್ಲಿ ಚಾರ್ಜಿಂಗ್‌ ಮಾಡಬಹುದು. ಒಂದು ಎಲೆಕ್ಟ್ರಿಕ್‌ ಕಾರಿನ ಶೇ 80ರಷ್ಟು ಚಾರ್ಜಿಂಗನ್ನು ಕೇವಲ 45 ನಿಮಿಷಗಳಲ್ಲಿ ಮಾಡಬಹುದಾಗಿದ್ದು, ಇಂದಿನ ಧಾವಂತದ ಜೀವನಕ್ಕೆ ಸೂಕ್ತವೆನಿಸಿದೆ. ಒಂದೇ ಸಮಯದಲ್ಲಿ ಎರಡು ವಾಹನಗಳ ಚಾರ್ಜಿಂಗ್‌ಗೆ ಅವಕಾಶ ಇರುವುದರಿಂದ ಅನುಕೂಲಕರವೂ ಆಗಿದೆ.

ಈ ಕುರಿತು ಮಾತನಾಡಿದ ಸ್ಟಾಟಿಕ್‌ನ ಸಹ ಸ್ಥಾಪಕ ಮತ್ತು ಸಿಇಒ ಅಕ್ಷಿತ್‌ ಬನ್ಸಲ್‌ ಅವರು “ನೆಕ್ಸಸ್‌ ಸೆಂಟರ್‌ ಸಿಟಿ ಮಾಲ್‌ನಲ್ಲಿ ನಮ್ಮ ಹೊಸ ಚಾರ್ಜಿಂಗ್‌ ಘಟಕ ಆರಂಭಿಸಲು ಖುಷಿಯಾಗುತ್ತಿದೆ. ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಚಾರ್ಜಿಂಗ್‌ ಮೂಲಸೌಕರ್ಯಕ್ಕೂ ಬೇಡಿಕೆ ಇದೆ. ಸ್ಟಾಟಿಕ್‌ ಭಾರತದಲ್ಲಿ ಇವಿ ಇಕೋಸಿಸ್ಟಮ್‌ ವಿಸ್ತಾರಗೊಳ್ಳಲು ಸಾಧ್ಯವಾಗುವಂತೆ ಅತ್ಯಾಧುನಿಕ ತಂತ್ರಜ್ಞಾನದ ಚಾರ್ಜಿಂಗ್‌ ಘಟಕಗಳನ್ನು ಸ್ಥಾಪಿಸುತ್ತಿದೆ. ಅಧಿಕ ಸಂಚಾರ ದಟ್ಟಣೆಯ ಸ್ಥಳಗಳಲ್ಲಿ ನಮ್ಮ ಚಾರ್ಜಿಂಗ್‌ ಘಟಕಗಳಿರುವುದರಿಂದ ವಾಹನ ಮಾಲೀಕರಿಗೂ ಇದು ಅನುಕೂಲಕರವಾಗಿದ್ದು, ಇವಿ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡಿದಂತಾಗಿದೆ” ಎಂದರು.

ನೆಕ್ಸಸ್‌ ಸೆಂಟರ್‌ ಸಿಟಿಯ ಸೆಂಟರ್‌ ಹೆಡ್‌ ಶ್ರೀಕುಮಾರ್‌ ಮೋಹನನ್‌ ಮಾತನಾಡಿ “ಸ್ಟಾಟಿಕ್‌ ಸಂಸ್ಥೆ ನಮ್ಮಲ್ಲಿ ಅತ್ಯಾಧುನಿಕ ಇವಿ ಚಾರ್ಜಿಂಗ್‌ ಘಟಕ ಸ್ಥಾಪಿಸುತ್ತಿರುವುದು ಗ್ರಾಹಕರಿಗೆ ಅನುಕೂಲಕರವಾಗಲಿದೆ. ಗ್ರಾಹಕರಿಗೆ ಮನೋರಂಜನೆ ಮತ್ತು ಶಾಪ್ಪಿಂಗ್‌ ಅನುಭವದ ಜೊತೆಗೆ ಅತ್ಯಾಧುನಿಕ ಸೌಲಭ್ಯಗಳನ್ನೂ ಒದಗಿಸುವ ನಮ್ಮ ಬದ್ಧತೆಗೆ ಇದು ಪೂರಕವಾಗಿದೆ” ಎಂದರು.

ನೆಕ್ಸಸ್‌ ಸೆಂಟರ್‌ ಸಿಟಿ ಮೈಸೂರಿನ ಪ್ರಮುಖ ಮಾಲ್‌ ಆಗಿದ್ದು ನಗರದ ಮತ್ತು ನೆರೆಹೊರೆಯ ಪ್ರದೇಶಗಳ ಜನರೂ ಭೇಟಿ ಕೊಡುತ್ತಾರೆ. ಇವಿ ವಾಹನ ಬಳಕೆದಾರರಿಗೆ ಹೊಸ ಚಾರ್ಜಿಂಗ್‌ ಘಟಕ ಅನುಕೂಲರವಾಗಲಿದೆ. ಇದು ಸ್ಟಾಟಿಕ್‌ನ ತಂತ್ರಜ್ಞಾನ ವಿಸ್ತರಣೆ ಮಾತ್ರವಲ್ಲ, ಆಧುನಿಕ ಶಾಪ್ಪಿಂಗ್‌ ಅನುಭವದೊಂದಿಗೆ ಹೊಸತನದ ಇಂಧನ ಪರಿಹಾರಗಳನ್ನು ಗ್ರಾಹಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

Leave a Reply

Your email address will not be published. Required fields are marked *