ಮೈಸೂರು:31 ಆಗಸ್ಟ್ 2022
ನಂದಿನಿ ಮೈಸೂರು
ನಾಡಿನೆಲ್ಲೆಡೆ ಗೌರಿ ಗಣೇಶ ಆಚರಿಸಲಾಗುತ್ತಿದ್ದು ಪ್ರಮುಖ ರಸ್ತೆಗಳಲ್ಲಿ ,ಮೈದಾನಗಳಲ್ಲಿ ದೊಡ್ಡ ದೊಡ್ಡವರು ಗಣೇಶನ ಪೂಜೆ ಮಾಡಿದ್ರೇ ದೊಡ್ಡವರಿಗೇನು ನಾವು ಕಡಿಮೆ ಇಲ್ಲ ಅಂತ ಪುಟ್ಟ ಪುಟ್ಟ ಮಕ್ಕಳು ಪುಟ್ಟ ಗಣಪತಿ ಆರಾಧನೆ ಮಾಡಿ ಸಂಭ್ರಮಿಸಿದರು.
ಮೈಸೂರಿನ ಟಿಕೆ ಲೇಔಟ್ ನಲ್ಲಿ
ಶ್ರೀ ವಿನಾಯಕ ಗೆಳೆಯರ ಬಳಗದಿಂದ ಇದೇ ಮೊದಲ ಬಾರಿ ಗಣಪತಿ ಕೂರಿಸಿದ್ದು ಸಂಪ್ರದಾಯದಿಂದ ಶ್ರದ್ದಾ ಭಕ್ತಿಯಿಂದ ಪೂಜಿಸಿದರು.
ಮುಂಜಾನೇಯೇ
ಬಡಾವಣೆಯ ಪುಟ್ಟ ಪುಟ್ಟ ಮಕ್ಕಳು ಒಟ್ಟಿಗೆ ಸೇರಿ ಪುಟಾಣಿ ಚಪ್ಪರ ಹಾಕಿ ಅದರೊಳಗೆ ಗಣೇಶ ಗೌರಿ ಮೂರ್ತಿ ಇಟ್ಟು ವಿವಿಧ ಪುಷ್ಪಗಳಿಂದ ಅಲಂಕರಿಸಿದರು.ಗಣೇಶನಿಗೆ ಪ್ರೀಯವಾಗಿರುವ ಮೋದಕ,ಕಡುಬು,ಸಿಹಿ ತಿಂಡಿಗಳನ್ನ ನೈವೇದ್ಯಕ್ಕೆ ಇಟ್ಟು
ಶುಭ ಘಳಿಗೆಯಲ್ಲಿ ಮಹಾಮಂಗಳಾರತಿ ಮೂಲಕ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಬಡಾವಣೆಯ ನಿವಾಸಿಗಳು ಮಕ್ಕಳ ಗಣಪತಿ ಪೂಜೆಗೆ ಸಾಥ್ ನೀಡಿದರಲ್ಲದೇ ಪುಟ್ಟ ಗಣೇಶನ ಜೊತೆ ಫೋಟೋ ಕ್ಲೀಕ್ಕಿಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂತು.
ಇದೇ ಸಂದರ್ಭದಲ್ಲಿ
ಗಿರೀಶ್,ಮಹೇಂದ್ರ,ಮಂಜುನಾಥ್, ಮಲ್ಲಿಕಾ,ಅರುಣ,ಅಕ್ಷಯ್ ,ಶ್ರೇಯಸ್,ರಾಜು,ದೀವಿತ್,ನಿತೀನ್,ಸೃಜನ್,ನಿತು,ಹರ್ಷ ಸೇರಿದಂತೆ ಬಡಾವಣೆಯ ಹಿರಿಯರು,ಕಿರಿಯರು ಭಾಗಿಯಾಗಿದ್ದರು.