ನಂದಿನಿ ಮೈಸೂರು
ಇಂದಿನಿಂದ ಮಾರ್ಚ್ 5 ರವರಗೆ ಆಯೋಜಿಸಿರುವ
ಅಭಿವೃದ್ಧಿ ಸಿಲ್ಕ್ ಇಂಡಿಯಾ 2023 ಪ್ರದರ್ಶನ ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು.
ಮೈಸೂರಿನ ವಿನೋಭಾ ರಸ್ತೆಯಲ್ಲಿರುವ ಹೋಟೆಲ್ ಸರ್ದನ್ ಸ್ಟಾರ್ ನಲ್ಲಿ ಸಿಲ್ಕ್ ಮೇಳಕ್ಕೆ ಫಿಲಂ ಆ್ಯಕ್ಟರ್ Diana Mary ಹಾಗೂ ಮಿಸ್ ಗ್ಲಾಮರ್ಸ್ ಕ್ವೀನ್ ಆಫ್ ಇಂಡಿಯಾ 2021 ಮಾಡೆಲ್ ತನಿಷ್ಕ ಮೂರ್ತಿ ಒಟ್ಟುಗೂಡಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮದುವೆ ಸಮಾರಂಭಗಳು ಆರಂಭವಾಗುತ್ತಿದೆ. ಮೈಸೂರು ಸಿಲ್ಕ್ ದೇಶದಲ್ಲೇ ಹೆಸರು ಮಾಡಿದೆ.ಅಂತಹ ಮೈಸೂರಿನಲ್ಲಿ ಒಂದೇ ಸೂರಿನಡಿ ದೇಶದ ನಾನಾ ಭಾಗದ ಪ್ರಮುಖ ಸೀರೆಗಳನ್ನು ಕೊಳ್ಳಲು ಸಿಲ್ಕ್ ಇಂಡಿಯಾ ಉತ್ತಮ ಅವಕಾಶ ನೀಡಿದೆ. ಹೆಚ್ಚಾಗಿ ನಗರ ಭಾಗದ ಯುವತಿಯರ ಹಾಗೂ ಮಹಿಳೆಯರ ಆಕರ್ಷಕ ಸೀರೆ ಹಾಗೂ ವಸ್ತ್ರಗಳ ಪ್ರದರ್ಶನ, ಮಾರಾಟವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಸಿಲ್ಕ್ ಇಂಡಿಯಾ ಮೇಳದ
ವ್ಯವಸ್ಥಾಪಕ ಅಭಿನಂದನ್ ಮಾತನಾಡಿ ಕಳೆದ 15 ವರ್ಷಗಳಿಂದ ಸಿಲ್ಕ್ ಇಂಡಿಯಾ ಮೇಳವನ್ನ ಮೈಸೂರಿನಲ್ಲಿ ಆಯೋಜಿಸುತ್ತಾ ಬಂದಿದ್ದೇನೆ.ಸುಮಾರು ಎರಡು ಲಕ್ಷದವರೆಗೂ ಎಲ್ಲಾ ರೀತಿಯ ಸೀರೆಗಳು ಮಾರಾಟವಾಗುತ್ತಿದೆ.ಗ್ರಾಹಕರು ಸಿಲ್ಕ್ ಮೇಳಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯದ ಮಾರಾಟಗಾರರು ಇದೇ ವೇಳೆ ಹಾಜರಿದ್ದರು.