ಬಸವರಾಜು / ನಂದಿನಿ ಮೈಸೂರು
ಮಾಕನಹುಂಡಿ ಶನಿ ದೇವರ ಆರಾಧನಾ ಮಹೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
ಶನಿ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ
ತಾಂಡವಪುರ ಫೆಬ್ರವರಿ 24:- ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮಾಕನಹುಂಡಿ ಗ್ರಾಮದಲ್ಲಿರುವ ಶನಿ ದೇವರ ದೇವಾಲಯದಲ್ಲಿ ಆರಾಧನ ಮಹೋತ್ಸವ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಗಳ ಭಕ್ತ ಸಾಗರವೇ ಹರಿದು ಬಂದು ದೇವರಿಗೆ ಪೂಜೆ ಸಲ್ಲಿಸಿದರು ಇದೇ ವೇಳೆ ಕ್ಷೇತ್ರದ ಶಾಸಕರಾದ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರು ದೇವಾಲಯಕ್ಕೆ ಬೇಡಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಇದೆ ವೇಳೆ ದೇವಾಲಯದ ಶನಿ ದೇವರ ಗುಡ್ಡಪ್ಪ ಪುಟ್ಟಸ್ವಾಮಿಯವರು ಸುದ್ದಿಗಾರರೊಂದಿಗೆ ಮಾತನಾಡಿ ಗ್ರಾಮದಲ್ಲಿ ದೇವಾಲಯ ನಿರ್ಮಿಸಿ ಸುಮಾರು 50 ವರ್ಷಕ್ಕೂ ಹೆಚ್ಚು ಕಾಲವಾಗಿದ್ದು ಮೊದಲು ನಮ್ಮ ತಂದೆ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು ನಮ್ಮ ತಂದೆ ನಿಧನ ಹೊಂದಿದ ಬಳಿಕ ನಾನು ದೇವರಿಗೆ ಪೂಜೆ ಸಲ್ಲಿಸಿ ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸುತ್ತಾ ಬಂದಿದ್ದೇನೆ ಈ ದೇವಾಲಯಕ್ಕೆ ಬರುವಂತಹ ಭಕ್ತಾದಿಗಳಿಗೆ ದೇವರ ಕೃಪೆ ಸದಾ ಲಭಿಸುತ್ತಿದ್ದು ಇದರಿಂದ ನಮ್ಮ ಸುತ್ತಮುತ್ತ ಇರುವ ಗ್ರಾಮಗಳಾದ ಮರೆಸೆ ಕೂಡನಹಳ್ಳಿ ಚಿಕ್ಕೇಗೌಡನ ಹುಂಡಿ ಉತ್ತನಹಳ್ಳಿ ತಾಂಡವಪುರ ಮಂಡಕಳ್ಳಿ ಮರಳೂರು ಬಿದರಗೂಡು ಬಂಚಳ್ಳಿ ಹುಂಡಿ ಅಡಕನಹಳ್ಳಿ ಹುಂಡಿ ಕೋಚನಹಳ್ಳಿ ಕಡಕೋಳ ರಾಯನ ಹುಂಡಿ ದೇವಲಾಪುರ ಕೆಂಪಿಸಿದ್ದನ ಹುಂಡಿ ಸೋಮೇಶ್ವರಪುರ ಸೇರಿದಂತೆ ಮೈಸೂರು ಬೆಂಗಳೂರಿನಿಂದ ಸಹ ಭಕ್ತಾದಿಗಳು ದೇವಾಲಯಕ್ಕೆ ಬಂದು ತಮ್ಮ ತನು ಮನ ಧನವನ್ನು ದೇವರಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಂದು ಶನಿ ದೇವರ ಗುಡ್ಡಪ್ಪ ಪುಟ್ಟಸ್ವಾಮಿ ಅವರು ತಿಳಿಸಿದರು.
ಇದೆ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ಮರಿಗೌಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಟೇಲ್ ಜವರೇಗೌಡ ಪುರಸಭೆ ಅಧ್ಯಕ್ಷ ನಂಜುಂಡಸ್ವಾಮಿ ಮರಯ್ಯ ಸಕಳ್ಳಿ ಬಸವರಾಜು ರಾಯನ ಹುಂಡಿ ಮಾದಪ್ಪ ಪಾಪಣ್ಣ ಗ್ರಾಮದ ಮುಖಂಡರಾದ ಗೌಡಿಕೆ ಕೆ ಪುಟ್ಟಸ್ವಾಮಿ ಚಂದ್ರು ರವಿ ರಾಮು ಹಾಲಿನ ಶಿವಣ್ಣ ಶಿವರಾಮು ಸೇರಿದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸಿದರು ಬಂದಂತ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.