ಮೈಸೂರು:11 ಮೇ 2022
ನಂದಿನಿ ಮೈಸೂರು
ಹಸ್ತಶಿಲ್ಪಿ ವತಿಯಿಂದ ಸಿಲ್ಕ್ ಇಂಡಿಯಾ 2022 ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.
ಮೈಸೂರಿನ ಸದರನ್ ಸ್ಟಾರ್ ಹೋಟೆಲ್ನಲ್ಲಿ 6 ದಿನಗಳ ಕಾಲ ನಡೆಯುವ ವಸ್ತ್ರ ಮೇಳಕ್ಕೆ ನಮ್ಮ ಹುಡುಗರು ಚಿತ್ರ ನಟಿ ರಾಧ್ಯ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು
ಸಿಲ್ಕ್ ಇಂಡಿಯಾ ಮೇಳ ಇಂದಿನಿಂದ 6 ದಿನಗಳ ಕಾಲ ನಡೆಯಲಿದೆ.ಪ್ರತಿಯೊಂದು ಸ್ಟಾಲ್ ನಲ್ಲಿ ವಿಭಿನ್ನವಾದ ಸೀರೆಗಳು ಕಣ್ಮನ ಸೆಳೆಯುತ್ತಿದೆ. ಎಲ್ಲಾ ರಾಜ್ಯದ ಬಟ್ಟೆಗಳು,ಸೀರೆಗಳನ್ನ ಒಂದೇ ಸೂರಿನಡಿ ಕೊಳ್ಳಬಹುದು.ಪ್ರವೇಶ ಉಚಿತವಾಗಿದ್ದು ಮೈಸೂರಿನ ಗ್ರಾಹಕರು ಒಮ್ಮೆ ಭೇಟಿ ನೀಡುವಂತೆ ಮೇಳಕ್ಕೆ ಆಹ್ವಾನಿಸಿದರು.
ನಂತರ ವ್ಯವಸ್ಥಾಪಕ ನಿರ್ದೇಶಕ ಟಿ.ಅಭಿನಂದನ್ ಮಾತನಾಡಿ ಹಸ್ತಶಿಲ್ಪಿ ವತಿಯಿಂದ ಮೈಸೂರಿನಲ್ಲಿ ಕಳೆದ 8 ವರ್ಷಗಳಿಂದ ರೇಷ್ಮೆ ಸೀರೆ ಮೇಳ ಆಯೋಜಿಸುತ್ತಾ ಬಂದಿದ್ದೇವೆ.ಇಂದಿನಿಂದ 6 ದಿನ ಮೇಳ ಆಯೋಜನೆಗೊಂಡಿದೆ.
ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿರವರಿಗಿನ ರೇಷ್ಮೆ ಸೀರೆ ಉತ್ಪಾದಕರು , ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು – ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಜನತೆಯ ಮುಂದೆ ಪ್ರತಿದಿನ ರಾತ್ರಿ 8.30 ರವರೆಗೆ ಪ್ರದರ್ಶಿಸಲಿದ್ದಾರೆ.ಪ್ರವೇಶ
ಉಚಿತವಾಗಿದ್ದು ಗ್ರಾಹಕರು ಆಗಮಿಸುವಂತೆ ಮನವಿ ಮಾಡಿದರು.