ಮೇ ೧೩ ರಂದು ಕ್ರಿಟಿಕಲ್ ಕೀರ್ತನೆಗಳು ಚಿತ್ರ ಬಿಡುಗಡೆ

90 Views

ಮೈಸೂರು:11 ಮೇ 2022

ನಂದಿನಿ ‌ಮೈಸೂರು

ಮೇ ೧೩ ರಂದು ಕ್ರಿಟಿಕಲ್ ಕೀರ್ತನೆಗಳು ಚಿತ್ರ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ನಿರ್ದೇಶಕ ಕುಮಾರ್ ತಿಳಿಸಿದರು.

 ಕೆಮಿಸ್ಟ್ರಿ ಆಫ್ ಕರಿಯಪ್ಪ,ಕೇಸರಿ ಫಿಲಂ ಕ್ಯಾಪ್ಟರ್ ಲಾಂಛನದಲ್ಲಿ ತಮ್ಮ ಸ್ನೇಹಿತರ ಜೊತೆ ನಿರ್ಮಾಣ ಮಾಡಿದ ಚಿತ್ರ ಕ್ರಿಟಿಕಲ್ ಕೀರ್ತನೆಗಳು.ಕ್ರಿಕೆಟ್ ಬೆಟ್ಟಿಂಗ್‌ನ ಸುತ್ತ ನಡೆಯುವ ಘಟನೆಗಳನ್ನಿಟ್ಟುಕೊಂಡು ಈ ಚಿತ್ರ ಹೆಣೆಯಲಾಗಿದೆ .ಚಿತ್ರದಲ್ಲಿ 3 ಹಾಡುಗಳಿವೆ. ಈ ಚಿತ್ರಕ್ಕಾಗಿ ನವೀನ್ ಸಜ್ಜು ಹಾಡಿರುವ ಐಪಿಎಲ್ಲು ನಮ್ಮೆಲ್ಲರ ಬಾಳು ಜೂಜಲ್ಲಿಬಿದ್ರೆ ಬಾಳೆಲ್ಲ ಗೋಳು ಎಂಬ ಹಾಡು ಈಗಾಗಲೇ ಮಿಲಿಯನ್ ವೈರಲ್ ಆಗಿದೆ.


ಈ ಚಿತ್ರದ ಛಾಯಾಗ್ರಹಣವನ್ನು ಶಿವಸೇನ ಮತ್ತು ಶಿವಶಂಕರ್ ನಿರ್ವ ಹಿಸಿದ್ದಾರೆ . ಇನ್ನು ಈ ಚಿತ್ರದ ಕಥೆ ಬೆಂಗಳೂರು , ಕುಂದಾಪುರ , ಮಂಡ್ಯ , ಬೆಳಗಾವಿ ಹೀಗೆ ಈ ಸ್ಥಳಗಳಲ್ಲಿ ನಡೆದಿದೆ . ಈ ನಾಲ್ಕೂ ಕಥೆಗಳಲ್ಲಿ ಬೇರೆ ಬೇರೆ ಕಲಾವಿದರು ಅಭಿನಯಿಸಿದ್ದಾರೆ ,. ಐಪಿಎಲ್ ಬೆಟ್ಟಿಂಗ್ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರಕ್ಕೆ ನೈಜ ಘಟನೆಗಳ ಪ್ರೇರಣೆ , ಸಂಪೂರ್ಣ ಹಾಸ್ಯಮಯ ನಿರೂಪಣೆ ಹೊಂದಿದ ಈ ಚಿತ್ರದ ಪ್ರಮುಖ ಕಾರಾಗಣದಲ್ಲಿ ತಬಲಾನಾಣಿ , ಸುಚೇಂದ್ರ ಪ್ರಸಾದ್ , ರಾಜೇಶ್ ನಟರಂಗ , ತರಂಗವಿಶ್ವ , ಅಪೂರ್ವ , ದೀಪಾ ಜಗದೀಶ್ , ಅಪೂರ್ವ ಭಾರದ್ವಾಜ್ ಅರುಣ ಬಾಲ್‌ರಾಜ್ , ಧರ್ಮ , ದಿನೇಶ್ ಮಂಗಳೂರು , ಈ ಪಾಂಡೇಶ್ವರ , ಯಶಸ್ ಅಭಿ ಗುರುರಾಜ ಹೊಸಕೋಟೆ , ಮಾ.ಮಹೇಂದ್ರ , ಮಾ.ಪುಟ್ಟರಾಜು , ಯಶ್ವಂತ್ ಶೆಟ್ಟಿ ಅಭಿನಯಿಸಿದ್ದಾರೆ ಎಂದರು.

Leave a Reply

Your email address will not be published.