ನಂದಿನಿ ಮೈಸೂರು
ಸಿಗ್ಮಾ ಆಸ್ಪತ್ರೆಯಲ್ಲಿ ಉಚಿತ ಕಿಡ್ನಿ ಆರೋಗ್ಯ ತಪಾಸಣಾ ಶಿಬಿರ
ವಿಶ್ವ ಆರೋಗ್ಯ ದಿನ ಮತ್ತು ವಿಶ್ವ ಕಿಡ್ನಿ ದಿನದ ಪ್ರಯುಕ್ತ ಉಚಿತ ಕಿಡ್ನಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಯಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಶಾಕಿರಣ ಟ್ರಸ್ಟ್ನ ಚರ್ಮನ್ ಮತ್ತು ರಾಜ್ಯ ಐ ಎ ಪಿ ಅಧ್ಯಕ್ಷರಾದ ಡಾ.ಎಸ್.ಎನ್ ಮೋತಿ, ಆಸ್ಪತ್ರೆಯ ಕಿಡ್ನಿ ಕಸಿತಜ್ಞರಾದ ಡಾ. ಕೆ.ಎಂ. ಮಾದಪ್ಪ, ನೆಪ್ರೊಲೊಜಿಸ್ಟ್ ಡಾ. ಅನಿಕೇತ್ ಪ್ರಭಾಕರ್, ಮೂತ್ರ ಶಾಸ್ತ್ರಜ್ಞರಾದ ಡಾ.ಕೆ.ಎನ್ ಸೋಮಣ್ಣ, ಆಸ್ಪತ್ರೆ ಯ ನಿರ್ದೇಶಕರಾದ ಡಾ. ರಾಜೇಶ್ವರಿ ಮಾದಪ್ಪ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಜ್ಞಾನಶಂಕರ್ ಮತ್ತು ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾದವರು ದೀಪ ಬೆಳಗಿಸುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ.ಎಸ್.ಎನ್ ಮೋತಿ ರವರು ಕಾಲಕಾಲಕ ಸಮಯಕ್ಕೆ ಸರಿಯಾಗಿ ಕಿಡ್ನಿ ಸಂಬಂಧಿತ ತಪಾಸಣೆ ಪರೀಕ್ಷೆಗಳನ್ನು ಮಾಡಿಸಿಕೊಂಡರೆ ಶಸ್ತ್ರ ಚಿಕಿತ್ಸೆ ಯಿಂದ ತಪ್ಪಿಸಿಕೊಳ್ಳಬಹುದು, ಡಾ. ಮಾದಪ್ಪ ರವರನ್ನು ಸುಮಾರು ವರ್ಷಗಳಿಂದ ನೋಡಿದ್ದೇನ ಮೈಸೂರಿನಲ್ಲಿ ಮೊದಲ ಬಾರಿಗೆ ಕಿಡ್ನಿ ಕಸಿ ಚಿಕಿತ್ಸೆಯನ್ನು ಮಾಡಿದವರು ಇವರೇ ಸುಮಾರು 32 ವರ್ಷಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಚಿಕಿತ್ಸೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಮುಂದೆಯೂ ಕೂಡ ಈ ತರಹದ ಸೇವೆಯನ್ನು ಹೆಚ್ಚು ಹೆಚ್ಚು ಮಾಡಲಿ ಎಂದರು.
ನಂತರ ಮಾತನಾಡಿದ ಡಾ. ಕೆ.ಎಂ ಮಾದಪ್ಪ ರವರು ನಾವು ಪ್ರತಿ ವರ್ಷ ಕಿಡ್ನಿ ತವಾಸಣಾ ಶಿಬಿರವನ್ನು ಮಾಡಿಕೊಂಡು ಬಂದ್ದಿದ್ದೇವೆ ಇದರಿಂದ ಆರಂಭದಲ್ಲೇ ತಪಾಸಣೆ ಮಾಡಿ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಒದಗಿಸಿದರೆ ಕಿಡ್ನಿ ವೈಫಲ್ಯ ವಾಗುವಂತದ್ದನ್ನು ತಪ್ಪಿಸಬಹುದು. ನಾವು ಸೂಕ್ಷ್ಮ ರಂಧ್ರ ಲ್ಯಾಪ್ರೋಸ್ಕೋಪಿಕ್ ಮೂಲಕ ಶಸ್ತ್ರ ಚಿಕಿತ್ಸೆಗಳನ್ನು
ಮಾಡುತ್ತಿದ್ದೇವೆ .ಈಗ ಅತಿ ಹೆಚ್ಚು ಕಿಡ್ನಿ ಸ್ಟೋನ್ ಆಗುವಂಥದ್ದು, ಡಯಾಲಿಸಿಸ್, ಕಿಡ್ನಿ ಕಸಿ ಚಿಕಿತ್ಸೆಗಳು ಹೆಚ್ಚು ನಮ್ಮ ಆಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆಯಿಂದ ಉಚಿತವಾಗಿ ಮಾಡುತ್ತಿದ್ದೇವೆ. ಇದರಿಂದ ಬಡವರಿಗೆ ಅನುಕೂಲವಾಗುತ್ತದೆ, ಈವರೆಗೆ ಸರಿಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮತ್ತು ಈವರೆಗೆ 50 ಹೆಚ್ಚು ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗಳನ್ನು ನಮ್ಮ ವಿಭಾಗದಿಂದ ಮಾಡಿದ್ದೇವೆ, ಇದಕ್ಕೆ ಸಹಕರಿಸಿದ ಸಹ ವೈದ್ಯರಿಗೆ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಜ್ಞಾನಶಂಕರ ರವರು ನಾವು 2000ನೇ ಇಸವಿಯಿಂದ ಮೈಸೂರ್ ಕಿಡ್ನಿ ಕ್ಲಿನಿಕ್ ನ್ನು ಪ್ರಾರಂಭಿಸಿ ನಂತರ ಸಿಗ್ನ ಆಸ್ಪತ್ರೆ ಸ್ಥಾಪಿಸಿ ಪ್ರತಿ ವರ್ಷ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದೇವೆ, ಈ ಶಿಬಿರಕ್ಕೆ ಕಾರಣಕರ್ತರು ಡಾ. ಮಾದಪ್ಪ ರವರು ಅವರ ಶ್ರಮ ಮತ್ತು ಅವರ ತಂಡದಿಂದ ಜನರಿಗೆ ಬೇಕಾಗುವಂತಹ ತನಾಸಣೆ, ರಕ್ತ ಪರೀಕ್ಷೆಗಳು, ಕಿಡ್ನಿ ಸ್ಕ್ಯಾನಿಂಗ್ ಮಾಡುವಂತದ್ದು ಜನರಿಗೆ ಅನುಕೂಲವಾಗುತ್ತದೆ, ಹೆಚ್ಚು ಹೆಚ್ಚು ಸಾರ್ವಜನಿಕರು ಇದರ ಉಪಯೋಗ ಪಡೆಯಲಿ ಎಂದರು,
ಶಿಬಿರದಲ್ಲಿ ನಿರ್ದೇಶಕರಾದ ಡಾ.ರಾಜೇಶ್ವರಿ ಮಾದಪ್ಪ ನವೋಲಜಿಸ್ಟ್ ಡಾ. ಅನಿಕೇತ್ ಪ್ರಭಾಕರ್, ಮೂತ್ರಶಾಸ್ತ್ರಜ್ಞ ಡಾ.ಕೆ.ಎನ್ ಸೋಮಣ್ಣ ಮುಂತಾದವರು ಹಾಜರಿದ್ದರು.