ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ ಏಪ್ರಿಲ್ 2024ರ ಪ್ರವೇಶಕ್ಕಾಗಿ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರಕಟಿಸಿದೆ.

ನಂದಿನಿ ಮೈಸೂರು

ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ ಏಪ್ರಿಲ್ 2024ರ ಪ್ರವೇಶಕ್ಕಾಗಿ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರಕಟಿಸಿದೆ.

ಐಎಸಿಎಸ್ಟಿ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಫೌಂಡೇಶನ್ ಕೋರ್ಸ್‌ಗಳಿಗೆ ಶೇ.90ವರೆಗಿನ ವಿದ್ಯಾರ್ಥಿವೇತನವನ್ನು ನೀಡುತ್ತದೆ, ತ್ವರಿತ ಪ್ರವೇಶ ಮತ್ತು ವಿದ್ಯಾರ್ಥಿವೇತನ ಮೌಲ್ಯಮಾಪನವನ್ನು ಸಕ್ರಿಯಗೊಳಿಸುತ್ತದೆ
ಹುತಾತ್ಮರ ಮಕ್ಕಳಿಗೆ ಶೇ.100ರಷ್ಟು ಬೋಧನಾ ಶುಲ್ಕ ವಿನಾಯಿತಿ
ರಕ್ಷಣಾ ಸಿಬ್ಬಂದಿ, ಭದ್ರತಾ ಏಜೆನ್ಸಿಗಳು ಮತ್ತು ಭಯೋತ್ಪಾದನೆ-ಬಾಧಿತ ವ್ಯಕ್ತಿಗಳ ವಾರ್ಡ್‌ಗಳಿಗೆ ಶೇ.10ಕ್ಕಿಂತ ಹೆಚ್ಚು ವಿದ್ಯಾಥಿವೇತನ ನೀಡಲಾಗುವುದು.
2014ರಿಂದ ಇಲ್ಲಿಯವರೆಗೆ 75 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯೋಜನೆ ಪ್ರಯೋಜನ ಪಡೆದುಕೊಂಡಿದ್ದಾರೆ.

ಏಪ್ರಿಲ್ 05, 2024, ಮೈಸೂರು: ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ (AESL), ವೈದ್ಯರು ಮತ್ತು ಇಂಜಿನಿಯರ್‌ಗಳಾಗುವ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಲು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಏಪ್ರಿಲ್ 2024ರಲ್ಲಿ ಪ್ರಾರಂಭವಾಗಲಿರುವ ತನ್ನ ಹೊಸ ಅಧಿವೇಶನದ ಪ್ರಾರಂಭದ ಮೊದಲು ವಿವಿಧ ವಿದ್ಯಾರ್ಥಿವೇತನಗಳನ್ನು ಘೋಷಿಸಿದೆ.
ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಫೌಂಡೇಶನ್ ಕೋರ್ಸ್‌ಗಳಿಗೆ ಮೊದಲ ಸ್ಕಾಲರ್‌ಶಿಪ್ ಇನ್‌ಸ್ಟಂಟ್ ಅಡ್ಮಿಷನ್ ಕಮ್ ಸ್ಕಾಲರ್‌ಶಿಪ್ ಟೆಸ್ಟ್ (iACST) ಪ್ರವೇಶಕ್ಕಾಗಿ ಶೇ.90ರವರೆಗಿನ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಜತೆಗೆ ಹೆಚ್ಚುವರಿಯಾಗಿ, ಹುತಾತ್ಮರ ಮಕ್ಕಳು, ರಕ್ಷಣಾ ಸಿಬ್ಬಂದಿ ಮತ್ತು ಭಯೋತ್ಪಾದನೆ ಪೀಡಿತ ವ್ಯಕ್ತಿಗಳಿಗೆ ಆಕಾಶ್ ವಿಶೇಷ ರಿಯಾಯಿತಿಗಳನ್ನು ಒದಗಿಸುತ್ತದೆ

ಈ ಕುರಿತು ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್‌ನ ಮುಖ್ಯ ವ್ಯಾಪಾರ ಅಧಿಕಾರಿ ಶ್ರೀ. ಅನುಪ್ ಅಗರ್ವಾಲ್ ಮಾತನಾಡಿ, ‘’ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ಸುಲಭಸಾಧ್ಯವಾದ ಮತ್ತು ಪರಿಣಾಮಕಾರಿ ಶೈಕ್ಷಣಿಕ ಅವಕಾಶಗಳನ್ನು ಒದಗಿಸಲು ಶ್ರಮಿಸುತ್ತಿದ್ದೇವೆ. iACST ಮತ್ತು ನಮ್ಮ ವಿದ್ಯಾರ್ಥಿವೇತನ ಕಾರ್ಯಕ್ರಮಗಳ ಮೂಲಕ, ಅರ್ಹ ವಿದ್ಯಾರ್ಥಿಗಳಿಗೆ ತಮ್ಮ ಗುರಿ ಸಾಧಿಸಲು ಮಾರ್ಗದರ್ಶನ, ನೆರವು ನೀಡುತ್ತಿದ್ದೇವೆ. ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯ ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ನಮ್ಮ ಸಂಪ್ರದಾಯವನ್ನು ಮುಂದುವರಿಸಲು ನಾವು ಹೆಮ್ಮೆಪಡುತ್ತೇವೆ. ಜತೆಗೆ ಶಿಕ್ಷಣದಲ್ಲಿ ಶ್ರೇಷ್ಠತೆ ಮತ್ತು ಒಳಗೊಳ್ಳುವಿಕೆ ಬೆಳೆಸಲು ಬದ್ಧರಾಗಿದ್ದೇವೆ’’ ಎಂದು ತಿಳಿಸಿದ್ದಾರೆ.
ದಿ ಇನ್‌ಸ್ಟಂಟ್ ಅಡ್ಮಿಷನ್ ಕಮ್ ಸ್ಕಾಲರ್‌ಶಿಪ್ ಟೆಸ್ಟ್ (iACST) ವಿದ್ಯಾರ್ಥಿಗಳಿಗೆ ತಕ್ಷಣದ ಸ್ಕಾಲರ್‌ಶಿಪ್ ಪ್ರಶಸ್ತಿಗಳನ್ನು ಮತ್ತು ತ್ವರಿತ ಪ್ರವೇಶಕ್ಕೆ ಅವಕಾಶ ನೀಡುತ್ತದೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪರೀಕ್ಷೆ ತೆಗೆದುಕೊಳ್ಳಬಹುದು ಮತ್ತು ಅವರು ಗಳಿಸಿದ ವಿದ್ಯಾರ್ಥಿವೇತನದ ವಿವರಗಳನ್ನು ತಕ್ಷಣವೇ ಪಡೆಯಬಹುದು. ಇದು ಆಕಾಶ್ ಅಧ್ಯಾಪಕರ ಪರಿಣಿತ ಮಾರ್ಗದರ್ಶನದಲ್ಲಿ ತ್ವರಿತ ಪ್ರವೇಶ ಪಡೆಯಲು ಅನುವು ಮಾಡಿಕೊಡುತ್ತದೆ. ಆನ್‌ಲೈನ್ iACST, 60 ನಿಮಿಷಗಳ ಕಾಲ, ಗೊತ್ತುಪಡಿಸಿದ ಪರೀಕ್ಷೆಯ ದಿನಗಳಲ್ಲಿ ಬೆಳಗ್ಗೆ 10 ಗಂಟೆಗೆ ಮತ್ತು ರಾತ್ರಿ 8 ಗಂಟೆಯ ನಡುವೆ ಪರೀಕ್ಷೆ ತೆಗೆದುಕೊಳ್ಳಬಹುದು.
8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ, ವೈದ್ಯಕೀಯ ಅಥವಾ ಎಂಜಿನಿಯರಿಂಗ್‌ನಲ್ಲಿ ತಮ್ಮ ವೃತ್ತಿಜೀವನದ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆಯಾಗಿ ಆಕಾಶ್ ಕಾರ್ಯನಿರ್ವಹಿಸುತ್ತದೆ. ಆಕಾಶ್ ಮೂಲಕ ನೀಡಲಾಗುವ ವಿದ್ಯಾರ್ಥಿವೇತನಗಳು ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಫೌಂಡೇಶನ್ ತರಗತಿಯ ಕೋರ್ಸ್‌ಗಳ ಪ್ರವೇಶಕ್ಕೆ ಅನ್ವಯಿಸುತ್ತವೆ. ಪರೀಕ್ಷೆಯನ್ನು ಕಂಪ್ಯೂಟರ್-ಬೇಸ್ಡ್ ಟೆಸ್ಟ್ (CBT) ಪ್ಲಾಟ್‌ಫಾರ್ಮ್ ಮೂಲಕ ನಡೆಸಲಾಗುತ್ತದೆ. ಜೊತೆಗೆ ಆಕಾಶ್ ವೆಬ್‌ಸೈಟ್ ಮತ್ತು ಆಂಡ್ರಾಯ್ಡ್ ಮತ್ತು ಆಪಲ್ ಪ್ಲಾಟ್‌ಫಾರ್ಮ್‌ಗಳಿಗೆ ಮೀಸಲಾದ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕವೂ ನಡೆಸಲಾಗುತ್ತದೆ.
ತನ್ನ ಸ್ಕಾಲರ್‌ಶಿಪ್ ಉಪಕ್ರಮಗಳ ಜೊತೆಗೆ, ರಕ್ಷಣಾ ಸಿಬ್ಬಂದಿಯ ವಾರ್ಡ್‌ಗಳ ಶಿಕ್ಷಣವನ್ನು ಬೆಂಬಲಿಸುವ ಮೂಲಕ AESL ಸಾಮಾಜಿಕ ಜವಾಬ್ದಾರಿಗೆ ಬದ್ಧವಾಗಿದೆ. ಜತೆಗೆ ಆಕಾಶ್ ಹುತಾತ್ಮರ ಮಕ್ಕಳಿಗೆ ಶೇ.100ರಷ್ಟು ಬೋಧನಾ ಶುಲ್ಕ ವಿನಾಯಿತಿ ನೀಡುತ್ತದೆ. ಅಂತೆಯೇ, ರಕ್ಷಣಾ ಸಿಬ್ಬಂದಿ ಮತ್ತು ಭಯೋತ್ಪಾದನೆ-ಪೀಡಿತ ವ್ಯಕ್ತಿಗಳ ಮಕ್ಕಳಿಗೆ ಅವರ iACST ಸ್ಕೋರ್‌ಗಳ ಮೇಲೆ ಮತ್ತು ಅದಕ್ಕಿಂತ ಹೆಚ್ಚಿನ ಶೇ.10 ರಷ್ಟು ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ.
ಈ ಕಾರ್ಯಕ್ರಮದಡಿಯಲ್ಲಿ 2014ರಿಂದ ಇಲ್ಲಿಯವರೆಗೆ ಸುಮಾರು 75 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.
ಇತ್ತೀಚಿನ ಜೆಇಇ ಮೇನ್ಸ್ 2024ರಲ್ಲಿ ಆಕಾಶ್ ಅತ್ಯುತ್ತಮ ಯಶಸ್ಸುಗಳಿಸಿದೆ. 41,263 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಗಮನಾರ್ಹ ಸಾಧನೆ ಎಂದರೆ 4,198 ವಿದ್ಯಾರ್ಥಿಗಳು 95 ಮತ್ತು ಅದಕ್ಕಿಂತ ಹೆಚ್ಚಿನ ಶೇಕಡಾವಾರು ಅಂಕ ಪಡೆದಿದ್ದಾರೆ. 939 ವಿದ್ಯಾರ್ಥಿಗಳು 99 ಮತ್ತು ಅದಕ್ಕಿಂತ ಹೆಚ್ಚಿನ ಶೇಕಡಾವಾರು ಅಂಕ ಗಳಿಸಿದ್ದು, ಹೈದರಾಬಾದ್‌ನ ರಿಷಿ ಶೇಖರ್ ಶುಕ್ಲಾ ಶೇ,100 ಅಂಕ ಗಳಿಸಿದ್ದಾರೆ. ಕರ್ನಾಲ್‌ನ ಅಭಿರಾಜ್ ಸಿಂಗ್, ತ್ರಿನೂಲ್ವೇಲಿಯ ಶ್ರೀ ರಾಮ್.ಎ ಮತ್ತು ಹೈದರಾಬಾದ್‌ನ ವಿಶ್ವನಾಥ್.ಕೆ.ಎಸ್ ಶೇ.99.99 ಅಂಕಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ನಮ್ಮ ತರಗತಿಗೆ ಹಾಜರಾದ ವಿದ್ಯಾರ್ಥಿಗಳ ಹೊರತಾಗಿ, ಆಕಾಶ್‌ನ ಡಿಜಿಟಲ್ ಕಾರ್ಯಕ್ರಮದ ವಿದ್ಯಾರ್ಥಿಗಳು ಜೆಇಇ ಮೇನ್ಸ್ 2024 (ಸೆಷನ್-01) ನಲ್ಲಿ ಅತ್ಯದ್ಭುತ ಅಂಕ ಪಡೆದುಕೊಂಡಿದ್ದಾರೆ. ರಿತಮ್ ಬ್ಯಾನರ್ಜಿ ಸೇರಿದಂತೆ ಟಾಪರ್‌ಗಳು ಗಣಿತದಲ್ಲಿ 100ಕ್ಕೆ ಶೇ.99.96 ಅಂಕಗಳನ್ನು ಗಳಿಸಿದ್ದಾರೆ. ಸಾಹೂ ರಸಾಯನಶಾಸ್ತ್ರದಲ್ಲಿ 100ಕ್ಕೆ ಶೇ.99.91, ಧೃತಿಷ್ಮಾನ್ ದತ್ತಾ ಶೇ.99.87, ಹರೀಶ್ ಕುಮಾರ್ ಶೇ.99.86, ರಸಾಯನಶಾಸ್ತ್ರದಲ್ಲಿ ಈಶ್ವರಂತ್ ಶೇ.99.86, ಇಶಾಂತ್ ಪಟೇಲ್ ಶೇ.99.85, ಸಯಾನ್ ಮಂಡಲ್ ಶೇ.99.82, ಜೇನ್ ಜೋನ್ಸ್ ಶೇ.99.78 ಸ್ರಜನ್ ಗುಪ್ತಾ ಶೇ.99.74, ದಿಲೀಪ್‌ಕುಮಾರ್.ಎ ಶೇ.99.70, ರಕ್ಷಿತ್ ಮೋದಿ ಶೇ.99.67 ಅಂಕ ಗಳಿಸಿದ್ದಾರೆ. ಜತೆಗೆ 26 ವಿದ್ಯಾರ್ಥಿಗಳು ಶೇ.99 ಎನ್ಟಿಎ NTA ಅಂಕಗಳನ್ನು ಗಳಿಸಿದ್ದಾರೆ. ಅಲ್ಲದೆ ಜೆಇಇ (Adv) 2023 ರಲ್ಲಿ, ಆಕಾಶ್ ಡಿಜಿಟಲ್ ಕಾರ್ಯಕ್ರಮದ ವಿದ್ಯಾರ್ಥಿ ಮೇನಾಕ್ ಸೋನಿ ಎಐಆರ್-26 (OBC ವರ್ಗದ ಶ್ರೇಣಿ 2) ಗಳಿಸಿದ್ದಾರೆ, ಉನ್ನತ ಶ್ರೇಣಿಯೊಂದಿಗೆ ಭಾರತದ ಕಠಿಣ ಪರೀಕ್ಷೆಗಳನ್ನು ಭೇದಿಸಲು ಡಿಜಿಟಲ್ ಕಲಿಕೆಯ ವಿಧಾನ ಉತ್ತಮ ಪರಿಹಾರವಾಗಿದೆ ಎಂದು ಆಕಾಶ್ ಸಾಬೀತುಪಡಿಸಿದೆ.
2023ರಲ್ಲಿ ನಡೆದ ನೀಟ್ ಯುಜಿ ಪರೀಕ್ಷೆಯಲ್ಲಿ ಆಕಾಶ್‌ನ 1,06,870 ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಜತೆಗೆ 17 ರಾಜ್ಯ/ಯುಟಿ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಕೌಸ್ತವ್ ಬೌರಿ ಎಐಆರ್ 3, ಧ್ರುವ್ ಅಡ್ವಾಣಿ ಎಐಆರ್ 5, ಸೂರ್ಯ ಸಿದ್ಧಾರ್ಥ್ ನಾಗರಾಜನ್ ಎಐಆರ್ 6, ಸ್ವಯಂ ಶಕ್ತಿ ತ್ರಿಪಾಠಿ ಎಐಆರ್ 8 ಮತ್ತು ಪಾರ್ಥ್ ಖಂಡೇಲ್ವಾಲ್ ಎಐಆರ್ ನಲ್ಲಿ 10ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ ಬಗ್ಗೆ (ಎಇಎಸ್ಎಲ್)

ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ (AESL) ಭಾರತದ ಪ್ರಮುಖ ಪರೀಕ್ಷಾ ಪೂರ್ವಸಿದ್ಧತಾ ಸಂಸ್ಥೆಯಾಗಿದ್ದು, ಉನ್ನತ ಮಟ್ಟದ ವೈದ್ಯಕೀಯ (NEET) ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ (JEE), ಶಾಲೆ, ಬೋರ್ಡ್ ಪರೀಕ್ಷೆಗಳು ಮತ್ತು NTSE ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಮಗ್ರ ಮತ್ತು ಪರಿಣಾಮಕಾರಿ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಜತೆಗೆ ಒಲಂಪಿಯಾಡ್‌ಗಳಲ್ಲೂ ಮುಂದಿದೆ.

ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ ದೇಶದಾದ್ಯಂತ ನೆಟ್‌ವರ್ಕ್ ಹೊಂದಿದ್ದು, ಪ್ರಸ್ತುತ 400,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ದಾಖಲಾಗಿದ್ದಾರೆ. ಕಳೆದ 35 ವರ್ಷಗಳಲ್ಲಿ ಉತ್ತಮ ಸ್ಥಾನ ಮತ್ತು ಬ್ರಾಂಡ್ ಮೌಲ್ಯವನ್ನು ಆಕಾಶ್ ಸ್ಥಾಪಿಸಿದೆ. ವಿದ್ಯಾರ್ಥಿಗಳ ನಿಜವಾದ ಸಾಮರ್ಥ್ಯವನ್ನು ಹೊರೆತೆಗೆದು ಅವರ ಶೈಕ್ಷಣಿಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸಲು ಅತ್ಯುನ್ನತ ಗುಣಮಟ್ಟದ ಪರೀಕ್ಷಾ ತಯಾರಿ ಸೇವೆಗಳನ್ನು ಒದಗಿಸಲು ಆಕಾಶ್ ಬದ್ಧವಾಗಿದೆ.
ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ ಪರೀಕ್ಷಾ ತಯಾರಿಗೆ ವಿದ್ಯಾರ್ಥಿ-ಕೇಂದ್ರಿತ ವಿಧಾನ ಅನುಸರಿಸುತ್ತಿದ್ದು, ಪ್ರತಿ ವಿದ್ಯಾರ್ಥಿಯೂ ಅನನ್ಯ ಮತ್ತು ವೈಯಕ್ತಿಕ ಅಗತ್ಯಗಳನ್ನು ಹೊಂದಿರುತ್ತಾರೆ ಎಂಬುದನ್ನು ಮನಗಂಡಿದೆ. ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಲು ಅರ್ಹ ಮತ್ತು ಅನುಭವಿ ಬೋಧಕರ ತಂಡವನ್ನು ಹೊಂದಿದೆ. ಬೋಧಕರು ವಿದ್ಯಾರ್ಥಿಗಳ ಕನಸನ್ನು ನನಸು ಮಾಡಲು ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ನೂತನ ಬೋಧನಾ ವಿಧಾನ ಹಾಗೂ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಉತ್ತಮ ಫಲಿತಾಂಶ ಬರುತ್ತಿದೆ.

AESL ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ.
www.aakash.ac.in

Leave a Reply

Your email address will not be published. Required fields are marked *