ಸಿದ್ದರಾಯಮ್ಯರವರ ವಿರುದ್ದ ಅಶ್ವಥ್ ನಾರಾಯಣ್ ಪ್ರಚೋದನಕಾರಿ ಹೇಳಿಕೆಗೆ ಗ್ರಾಮ ಪಂಚಾಯತ್ ಸದಸ್ಯರ ಆಕ್ರೋಶ

ಬಸವರಾಜು / ನಂದಿನಿ ಮೈಸೂರು

ಟಿಪ್ಪು ಸುಲ್ತಾನ್ ಒಡೆದು ಹಾಕಿದ ಹಾಗೆ ಸಿದ್ದರಾಮಯ್ಯನವರನ್ನು ಹೊಡೆದು ಹಾಕಿ ಎಂಬ ಸಚಿವ ಅಶ್ವಥ್ ನಾರಾಯಣ್ ಪ್ರಚೋದನಕಾರಿ ಹೇಳಿಕೆಗೆ ಗ್ರಾಮ ಪಂಚಾಯತ್ ಸದಸ್ಯರ ಆಕ್ರೋಶ

 

ತಾಂಡವಪುರ ಫೆಬ್ರುವರಿ 18 :-ಮೊನ್ನೆ ಬಹಿರಂಗ ಸಭೆ ಒಂದರಲ್ಲಿ ಬಿಜೆಪಿ ಸರ್ಕಾರದ ಸಚಿವ ಅಶ್ವತ್ ನಾರಾಯಣ್ ರವರು ಮಾತನಾಡುವಾಗ ಟಿಪ್ಪು ಸುಲ್ತಾನ್ ಒಡೆದು ಹಾಕಿದ ಹಾಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಹೊಡೆದುಹಾಕಿ ಎಂದು ಹೇಳಿರುವುದಕ್ಕೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರದ ಕೆಂಪಿಸಿದ್ದನ ಹುಂಡಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರುಗಳು ಇಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಅವರು ಇಂದು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ನಂಜಯ್ಯ ತೊರೆಮಾವು ಗಿರೀಶ್ ಹೆಜ್ಜಿಗೆ ಪದ್ಮ ಪಾಣಿ ಕೆಂಪಿಸಿದನುಂಡಿ ಗ್ರಾಮದ ಶೃತಿ ಬೀರಯ್ಯ ರವಿರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ಪಕ್ಷದ ನಾಯಕರುಗಳಾದ ಅಶ್ವಥ್ ನಾರಾಯಣ್ ಸಿ ಟಿ ರವಿ ನಳಿನ್ ಕುಮಾರ್ ಕಟೀಲ್ ಪ್ರಹ್ಲಾದ್ ಜೋಶಿ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರುಗಳು ಕಾಂಗ್ರೆಸ್ ಪಕ್ಷದ ಹಾಗೂ ನಮ್ಮ ನಾಯಕರ ವಿರುದ್ಧ ಪ್ರಚೋದರಕಾರಿ ಹೇಳಿಕೆಗಳ ನೀಡುವುದು ಅಪಪ್ರಚಾರವನ್ನು ಮಾಡುವುದು ಗುಂಡ ವರ್ತನೆಯ ಹೇಳಿಕೆಗಳನ್ನು ನೀಡುವ ಮೂಲಕ ಕೋಮುವಾದ ಸೃಷ್ಟಿ ಮಾಡಿ ನಮ್ಮ ನಮ್ಮಲ್ಲಿ ಎತ್ತು ಕಟ್ಟಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಈ ಚುನಾವಣಾ ಸಮಯದಲ್ಲಿ ಮಾಡ್ತಿದ್ದಾರೆ ಇದೆಲ್ಲಾ ನಡೆಯುವುದಿಲ್ಲ ನಿಜವಾದ ಹಿಂದುಗಳು ಕಾಂಗ್ರೆಸ್ ಪಕ್ಷದವರು ಹಿಂದು ವಿರೋಧಿಗಳು ಬಿಜೆಪಿಗರು ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಶಾಂತಿಯ ತೋಟ ಇದ್ದಂತೆ ಬಿಜೆಪಿ ಪಕ್ಷ ಸರ್ವ ಜನಾಂಗವನ್ನು ವಿಭಜನೆ ಮಾಡುವ ಪಕ್ಷವಾಗಿದ್ದು ಇವರ ವಿರುದ್ಧ ನಿರಂತರವಾಗಿ ನಾವು ಹೋರಾಟವನ್ನು ಮಾಡುತ್ತೇವೆ ಇನ್ನು ಮುಂದೆ ಇಂತಹ ಪ್ರಚೋದರಕಾರಿ ಗುಂಡಾವರ್ತನೆಯ ಹೇಳಿಕೆಗಳನ್ನು ನೀಡಿ ಅಶಾಂತಿ ಉಂಟು ಮಾಡುವುದನ್ನು ನಿಲ್ಲಿಸದಿದ್ದರೆ ಬಿಜೆಪಿ ಪಕ್ಷದ ನಾಯಕರಗಳ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಗ್ರಾಮ ಪಂಚಾಯತಿ ಸದಸ್ಯರುಗಳು ಸಿದ್ದರಾಮಯ್ಯನವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಅಶ್ವತ್ ನಾರಾಯಣ್ ರವರನ್ನು ಅವರ ಸ್ಥಾನದಿಂದ ವಜಾ ಗೊಳಿಸಬೇಕು ಎಂದು ಪಕ್ಷದ ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕಗಳನ್ನು ಆಗ್ರಹಿಸಿದರು .

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ನಂಜಯ್ಯ ದಲಿತ ಮುಖಂಡರಾದ ತೊರೆಮಾವ ಗಿರೀಶ್ ಹೆಜ್ಜಿಗೆ ಪದ್ಮ ಪಾಣಿ ಶೃತಿ ಬಿರಯ್ಯ ರವಿ ಬಸವನಪುರದ ಗಂಗಾಧರಪ್ಪ ಸುರೇಶ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

 

Leave a Reply

Your email address will not be published. Required fields are marked *