ಪ್ರೀಮಿಯರ್ ಲೀಗ್ ಕಪ್ ಕ್ರಿಕೆಟ್ ಕಾಂಪಿಟಿಷನ್

ನಂದಿನಿ ಮೈಸೂರು

24ಮನೆ ತೆಲುಗು ಶೆಟ್ಟಿ ಜನಾಂಗದ ವತಿಯಿಂದ ದಿನಾಂಕ 04-02-2023 & 05-02-2023 ರಂದು ಕ್ರೇಝಿ ಸ್ಟಾರ್ ಯುವಕರ ಬಳಗ ಹೆಬ್ಬಲಗುಪ್ಪೆ ಮತ್ತು ಹೆಬ್ಬಲಗುಪ್ಪೆ ಗ್ರಾಮಸ್ತರು ,ಹೆಚ್.ಡಿ.ಕೋಟೆ ತಾಲೂಕು ಮೈಸೂರು ಜಿಲ್ಲೆ ರವರು ಆಯೋಜಿಸಿದ್ದ H P L ಕಪ್ ,ಹೆಬ್ಬಲಗುಪ್ಪೆ,ಪ್ರೀಮಿಯರ್ ಲೀಗ್ ಕಪ್ ಕ್ರಿಕೆಟ್ ಕಾಂಪಿಟಿಷನ್ ನಲ್ಲಿ _24 ಮನೆ ತೆಲುಗುಶೆಟ್ಟಿ ಯುವಕರ 16 ತಂಡಗಳು ಭಾಗವಹಿಸಿದ್ದವು.

ಅದರಲ್ಲಿ ಆರ್.ಮಧುಸೂಧನ್ s/o ಲೇ. ವಿ.ರಂಗಪ್ಪ ರವರ ನಾಯಕತ್ವದ ಪಾಂಚಜನ್ಯ ತಂಡ,ಕೆಂಗೇರಿ,ಬೆಂಗಳೂರು.ತಂಡವು ಪ್ರಥಮ ಬಹುಮಾನ ಗೆದ್ದು ಶೀಲ್ಡ್ ಹಾಗೂ 30,000/- ರೂ.ನಗದು ಬಹುಮಾನ ಗಳಿಸಿರುತ್ತಾರೆ.ತಂಡದ ಸ್ಪರ್ಧಿಗಳು,:ಕಿರಣ್,ರಾಘವೇಂದ್ರ,ಬಾಲು,ಮನೋಜ್,ಚಂದನ್,ಸಚಿನ್,ಜಗದೀಶ,ಚೇತನ, ನಿತಿನ್,ಸೇಟು,ಜಗ್ಗ,ಹಾಗೂ ಶರತ್ ಭಾಗವಹಿಸಿದ್ದರು. ದ್ವಿತೀಯ ಸ್ಥಾನಕ್ಕೆ ಶಾರದಾದೇವಿ ನಗರ,ಮೈಸೂರಿನ ಸ್ಪಾರ್ಕರ್ಸ ತಂಡ ಭಾಜನವಾಯಿತು. ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದ ಹೆಬ್ಬಲಗುಪ್ಪೆ ಗ್ರಾಮಸ್ಥರು ಹಾಗೂ ಕ್ರೇಜಿ ಸ್ಟಾರ್ ಯುವಕರ ಬಳಗಕ್ಕೆ ಪಾಂಚಜನ್ಯ ,ಬೆಂಗಳೂರು ತಂಡವು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತದೆ. ಶುಭಕೋರುವವರು:ಆರ್.ಕೋಮಲ,ಹಿರಿಯ ಪಶುವೈದ್ಯ ಪರಿಕ್ಷಕರು,ಮೈಸೂರು,ಹಾಗೂ ವಿ.ಯೋಗೀಂದ್ರ, ದೈಹಿಕ ಶಿಕ್ಷಕರು,ಮೈಸೂರು.

Leave a Reply

Your email address will not be published. Required fields are marked *