ನಂದಿನಿ ಮೈಸೂರು
ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ಹುಟ್ಟುಹಬ್ಬದ ಪ್ರಯುಕ್ತ ಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ, ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ, ಗರಡಿಕೇರಿಯ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸ್ಪರ್ಶ ಆರೋಗ್ಯ ಮತ್ತು ಕಣ್ಣಿನ ಆಸ್ಪತ್ರೆ ಮತ್ತು ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ.ಶಿವಣ್ಣ ನೇತೃತ್ವದಲ್ಲಿ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಸಮಿತಿ ಶ್ರೀ ಆದಿಪೂಜಿತ ಗೆಳೆಯರ ಬಳಗ, ಗರಡಿಕೇರಿ, ಸಿದ್ಧಿವಿನಾಯಕ ಯುವಕರ ಸೇವಾ ಸಂಘ.ಕೆ.ಆರ್.ಆಸ್ಪತ್ರೆ ರಸ್ತೆ, ಮೈಸೂರು. ಶ್ರೀ ಪಂಚಮುಖಿ ಗಣಪತಿ ಯುವಕರ ಸಂಘ, ಕುರುಬಗೇರಿ, ಮೈಸೂರು, ಸಿಂಹಾದ್ರಿ ಗ್ರೂಪ್ ಲಷ್ಕರ್‌ಮೊಹಲ್ಲಾದ ಗರಡಿಕೇರಿಯ ಶ್ರೀ ಮಹದೇಶ್ವರ ಭವನದಲ್ಲಿ ಆಯೋಜಿಸಿದ ಆರೋಗ್ಯ ಶಿಬಿರಕ್ಕೆ ಶಾಸಕ ಹರೀಶ್ ಗೌಡ ,ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ,ಮಾಜಿ ಶಾಸಕ ಎಂಕೆ ಸೋಮಶೇಖರ್ ,ಮರಿಗೌಡ ಸೇರಿದಂತೆ ಗಣ್ಯರು ಚಾಲನೆ ನೀಡಿದರು. ನೂರಾರು ಜನರು ಆಗಮಿಸಿ ಶಿಬಿರವನ್ನು ಸದುಪಯೋಗಪಡಿಸಿಕೊಂಡರು.
ಮಧ್ಯಾಹ್ನ ಮೈಸೂರು ನಗರ ಕಿವುಡ ಮತ್ತು ಮೂಕರ ಪಾಠಶಾಲೆಯಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಆರ್,ಮೂರ್ತಿ,ಚಂದ್ರಮೌಳಿ ,ಪುಷ್ಪಲತಾ ಚಿಕ್ಕಣ್ಣ,ಕೆ.ಎಸ್.ಶಿವರಾಮು,ಶಾಂತಕುಮಾರಿ,ಮೋದಾಮಣಿ,ಮಾದೇಶ,ಕೃಷ್ಣ,ನಟರಾಜು,ಜೆಜೆ ಆನಂದ್, ಲಯನ್ಸ್
ಸುರೇಶ್ ಗೋಲ್ಡ್ , ಶ್ರೀಪಾಲ್,ರವಿಕುಮಾರ್ ನಾಯಕ್,ಪ್ರಮೀಳಾ ಬ್ಲಾಕ್ ಅಧ್ಯಕ್ಷರು ,ಮುಂಚೂಣಿ ಘಟಕದ ಅಧ್ಯಕ್ಷರು,ಕಾಂಗ್ರೆಸ್ ಮುಖಂಡರು,ಮಹಿಳಾ ಸೇರಿದಂತೆ ಮೊಹಲ್ಲಾದ ನಿವಾಸಿಗಳು ಭಾಗಿಯಾಗಿದ್ದರು.