ಶ್ರೀಕಂಠೇಶ್ವರ ದೇವಾಲಯದಲ್ಲಿ ಕಾಣಿಕೆ ಹುಂಡಿ ಎಣಿಕೆ, 111 ವಿದೇಶಿ ಕರೆನ್ಸಿ ಕಾಣಿಕೆ, ನಿಷೇಧಿತ ನೋಟು ಪತ್ತೆ

ನಂಜನಗೂಡು:9 ಮೇ 2022

ನಂದಿನಿ ‌ಮೈಸೂರು

ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯದಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿಗಳು ಹುಂಡಿ ಎಣಿಕೆ ಮಾಡಿದರು.

20 ಕ್ಕೂ ಹೆಚ್ಚು ಹುಂಡಿಗಳಿಂದ 2,49,07,052/- (ಎರಡು ಕೋಟಿ ನಲವತ್ತೊಂಭತ್ತು ಲಕ್ಷದ ಏಳು ಸಾವಿರದ ಐವತ್ತೆರಡು) ರೂ ಸಂಗ್ರಹವಾಗಿದೆ.ಕಳೆದ ಬಾರಿಗಿಂತ 45 ಲಕ್ಷ ಹೆಚ್ಚುವರಿಯಾಗಿ ಹಣ ಸಂಗ್ರಹವಾಗಿದೆ.ನಂಜನಗೂಡು ದೊಡ್ಡ ಜಾತ್ರೆ ಅಂಗವಾಗಿ ಹೆಚ್ಚಿನ ಮೊತ್ತ ಸಂಗ್ರಹವಾಗಿದೆ.ಈ ಬಾರಿಯೂ ನಿಷೇಧಿತ ನೋಟುಗನ್ನ ಭಕ್ತರು ಕಾಣಿಕೆಯಾಗಿ ಒಪ್ಪಿಸಿದ್ದಾರೆ.41 ಸಾವಿರ ಮೌಲ್ಯದ ನಿಷೇಧಿತ ನೋಟುಗಳು ಹುಂಡಿಯಲ್ಲಿ ಕಾಣಿಕೆಯಾಗಿ ಬಂದಿದೆ.ನಗದು ಜೊತೆಗೆ 220 ಗ್ರಾಂ ಚಿನ್ನ ಹಾಗೂ 6 ಕೆಜಿ 500 ಗ್ರಾಂ ಬೆಳ್ಳಿ ಸಹ ಸಂಗ್ರಹವಾಗಿದೆ.ಕಳೆದ ಬಾರಿ 28,500 ಮೌಲ್ಯದ ನಿಷೇಧಿತ ನೋಟುಗಳು ಸಂಗ್ರಹವಾಗಿತ್ತು.ಈ ಬಾರಿ 41 ಸಾವಿರ ಮೌಲ್ಯದ ನಿಷೇಧಿತ ನೋಟುಗಳು ಹುಂಡಿಯಲ್ಲಿ ಸಂಗ್ರಹವಾಗಿದೆ.ಜೊತೆಗೆ 111 ವಿದೇಶಿ ಕರೆನ್ಸಿಗಳು ಸಹ ಭಕ್ತರು ಕಾಣಿಕೆಯಾಗಿ ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *