ಮೈಸೂರು:30 ಜೂನ್ 2022
ನಂದಿನಿ ಮೈಸೂರು
ಸ್ನೇಹ ಜೀವಿ ಟೈಲರ್ ಕ್ಷೇಮಾಭಿವೃದ್ಧಿ ಸಂಘ ಬೋಗಾದಿ ಕೆ ಎಸ್ ಟಿ ಎ ವಲಯ ಸಮಿತಿಯಿಂದ ಕನ್ನಯ್ಯ ಲಾಲ್ ರವರಿಗೆ ಭಾವ ಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕನ್ನಯ್ಯ ಲಾಲ್ ರವರ ಭಾವಚಿತ್ರ ಇರಿಸಿ ಮೇಣದ ಬತ್ತಿ ಹಿಡಿದು ನಮನ ಸಲ್ಲಿಸಿದರು.
ಉದಯಪುರದ ಒಬ್ಬ ಹಿಂದೂ ಟೈಲರ್ ಕನ್ನಯ್ಯ ಲಾಲ್ ರವರ ಕತ್ತನ್ನು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿದೆ.ಈ ಘಟನೆಯಿಂದ ಟೈಲರ್ ಗಳು ಭಯಪಟ್ಟಿದ್ದಾರೆ.ಟೈಲರ್ ಗಳಿಗೆ ರಕ್ಷಣೆ ಇಲ್ಲದಂತಾಗಿದೆ.ಕೃತ್ಯಗೈದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.ಸರ್ಕಾರ ಪರಿಹಾರ ನೀಡಬೇಕು ಎಂದು ಸಮಿತಿ ಒಕ್ಕೊರಳಾಗಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸಿದ್ದೇಗೌಡ,ದೇವರಾಜ್,ಉಪಾಧ್ಯಕ್ಷ ಚಂದ್ರು,ಕಮಲ,ಪದಾಧಿಕಾರಿ
ಗಳಾದ ಪ್ರದೀಪ್, ಜಗದೀಶ್, ಬಾಬು,ಕಿರಣ್,ಸುಚಿತ್ರ,ಜ್ಯೋತಿ, ಬಸವರಾಜ್,ವಲಯ ಸಮಿತಿ ಅಧ್ಯಕ್ಷ ಚೆನ್ನನಾಯಕ,,ಉಪಾಧ್ಯಕ್ಷ ತಾರಾ ಇದ್ದರು.