ಮೈಸೂರು: 29 ಜೂನ್ 2022
ಸ್ಪೇಷಲ್ ಸ್ಟೋರಿ: ನಂದಿನಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಷಾಢ ಶುಕ್ರವಾರಕ್ಕೆ ಸಿಹಿತಿಂಡಿ ಸಿದ್ಧವಾಗಿದ್ದು ಬರೋಬ್ಬರಿ 35 ಸಾವಿರ ಆರ್ಲಿಕ್ಸ್ ಮೈಸೂರು ಪಾಕ್ ತಯಾರಿಸಲಾಗುತ್ತಿದೆ.
ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ನೂರಡಿ ರಸ್ತೆಯ ಸ್ನೇಹಿತರು ಕಳೆದ 17 ವರ್ಷಗಳಿಂದ ಸತತವಾಗಿ ಆಷಾಡ ಶುಕ್ರವಾರದಂದು ಸಿಹಿ ಹಂಚುತ್ತಾ ಬಂದಿದ್ದಾರೆ.ಈ ಹಿಂದೆ ಎರಡು ವರ್ಷಗಳು ಕೋವಿಡ್ ಸೋಂಕು ಇದ್ದ ಹಿನ್ನಲೆ ಪ್ರಸಾದ ವಿತರಣೆ ಸ್ಥಗಿತವಾಗಿತ್ತು.ಮತ್ತೆ ಪ್ರತಿವರ್ಷದಂತೆ ಈ ವರ್ಷವೂ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಲಡ್ಡು ಬದಲಾಗಿ 35 ಸಾವಿರ ಆರ್ಲಿಕ್ಸ್ ಮೈಸೂರ್ ಪಾಕ್ ವಿತರಿಸಲೂ ಮುಂದಾಗಿದ್ದೇವೆ ಎಂದು ಸಮಿತಿ ಸದಸ್ಯ ನಾಗೇಶ್,ಅರುಣ್ ಕುಮಾರ್ ಜೈನ್ ತಿಳಿಸಿದರು.

ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ನೂರಡಿ ರಸ್ತೆ ವತಿಯಿಂದ 18 ನೇ ವರ್ಷದ ಆಶಾಢ ಶುಕ್ರವಾರ ಪ್ರಯುಕ್ತ ಆರ್ಲಿಕ್ಸ್ ಮೈಸೂರು ಪಾಕ್ ತಯಾರಿಸುವಂತೆ ಹೇಳಿದ್ದರು.ಆತಿಥ್ಯ ಕ್ಯಾರ್ಟ್ರೀನ್ ನಿಂದ 30 ಜನ ಬಾಣಸಿಗರು 3 ದಿನಗಳಿಂದ ಸಿಹಿ ತಯಾರಿ ಮಾಡುತ್ತಿದ್ದಾರೆ.600 ಕೆಜಿ ಸಕ್ಕೆರೆ,
175 kg ಕಡಲೆಇಟ್ಟು,30 ಟಿನ್ ಆಯಲ್,16 ಟಿನ್ ನಂದಿನಿ ತುಪ್ಪ, 3 ಕೆಜಿ ಏಲಕ್ಕಿ ,30 ಕೆಜಿ ಆರ್ಲಿಕ್ಸ್ ಬಳಕೆ ಮಾತಲಾಗಿದೆ.ಈ ಸೇವಾ ಕಾರ್ಯ ಮಾಡೋ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎನ್ನುತ್ತಾರೆ ಆತಿಧ್ಯ ಕ್ಯಾಟರಿನ್ ರವಿ.

ಒಟ್ಟಾರೆ ಹೇಳೋದಾದರೇ ಕೊರೋನಾದಿಂದ ಎರಡು ವರ್ಷಗಳ ಕಾಲ ಸೇವಾ ಪ್ರಸಾದಕ್ಕೆ ಬ್ರೇಕ್ ಹಾಕಿದ್ದ ಜಿಲ್ಲಾಡಳಿತ ಈ ಬಾರಿ ಮುಕ್ತ ಅವಕಾಶ ಕಲ್ಪಿಸಿದ್ದು ಮೊದಲ ಆಶಾಢ ಶುಕ್ರವಾರಕ್ಕೆ 30 ಸಾವಿರ ಜನರಿಗೆ ಊಟ ,35 ಸಾವಿರ ಸಿಹಿ ವಿತರಣೆ ಮಾಡಲು ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಸಜ್ಜಾಗಿದೆ.