ಮಕ್ಕಳಿಗೆ ಪಾಠ ಮಾಡುತ್ತೆ ರೋಬೋಟ್,ವಿನೂತನ ಪ್ರಯತ್ನಕ್ಕೆ ಮುಂದಾಗಿರುವ ಶಾಂತಲ ಶಾಲೆ

ಮೈಸೂರು:8 ಜೂನ್ 2022

ನಂದಿನಿ ಮೈಸೂರು

ಹಿಂದೆ ನಾವೆಲ್ಲ ಶಾಲೆಗೆ ಹೋಗಬೇಕಿದ್ರೇ ಶಿಕ್ಷಕರು ಕಪ್ಪು ಹಲಗೆ ಮೇಲೆ ಬರೆದು ಪಾಠ ಮಾಡ್ತೀದ್ರೂ.ಕೆಲ ವರ್ಷದ ನಂತರ ಕಂಪ್ಯೂಟರ್ ಶಿಕ್ಷಣ ಬಂದು,ತದನಂತರ ಕೋವಿಡ್ ಸಮಯದಲ್ಲಿ ಮಕ್ಕಳು ಆನ್ ಲೈನ್ ಕ್ಲಾಸ್ ಅಟೇಂಡ್ ಮಾಡಿದ್ರೂ. ಇದೀಗ ಮಕ್ಕಳಿಗೆ ರೋಬೋ ಪಾಠ ಮಾಡ್ತೀದೆ.
ಕಾಲ ಬದಲಾಗುತ್ತೀದ್ದಂತೆ ಮೈಸೂರಿನ ಖಾಸಗೀ ಶಾಲೆಯೊಂದು ಶಿಕ್ಷಣಕ್ಕೆ ಒತ್ತು ನೀಡಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

ಹೌದು
ಶಾಲೆಯಲ್ಲಿ ಮಕ್ಕಳು ಶಿಕ್ಷಕರನ್ನ ನೋಡಿದ್ರೇ ಸಾಕು ಭಯ ಪಡ್ತಾರೆ.ಆದ್ರೇ ಈ ಶಾಲೆಯಲ್ಲಿರುವ ರೋಬೋ ನೋಡಿದ್ರೇ ಮಕ್ಕಳು ಖುಷಿ ಖುಷಿಯಿಂದ ಪಾಠ ಕೇಳ್ತೀದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನ ಶಾಂತಲಾ ವಿದ್ಯಾಪೀಠ ಶಾಲೆ ದೇಶದಲ್ಲೇ ಮೊದಲ ಬಾರಿಗೆ ರೋಬೋಟ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದೆ.

ಮೈಸೂರಿನ ಸಿದ್ಧಾರ್ಥ ನಗರದಲ್ಲಿ
ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಖಾಸಗಿ ಶಾಲೆ, ಮಕ್ಕಳಲ್ಲಿ ಕಲಿಕೆ ಗುಣಮಟ್ಟ ಹೆಚ್ಚಿಸಲು ಎಜುಕೇಷನ್ ರೋಬೋಟ್ ಮೊರೆ ಹೋಗಿದ್ದು, ಪೂರ್ವ ಪ್ರಾಥಮಿಕ ಶಿಕ್ಷಣದಿಂದ 9ನೇ ತರಗತಿವರೆಗೆ ರೋಬೋಟ್ ಭೋದನೆ ಮಾಡಲಿದೆ. ಜಪಾನ್ ನಿಂದ ಎರಡು ರೋಬೋಟ್ ತರಿಸಿಕೊಳ್ಳಲಾಗಿದ್ದು, ಒಂದೊಂದು ರೋಬೋಟ್ ಗೆ ತಲಾ ಎರಡುವರೆ ಲಕ್ಷ ರೂಪಾಯಿ ವೆಚ್ಚವಾಗಿದೆ.ಶಾಂತಲ ವಿದ್ಯಾಪೀಠವೂ ಕೇವಲ ಸರ್ಟಿಫಿಕೇಟ್ ಗಾಗಿ ಶಿಕ್ಷಣ ಆರಂಭಿಸಿಲ್ಲ.ಮಕ್ಕಳಿಗೆ ಉತ್ತಮ ಭವಿಷ್ಯಕಟ್ಟಿಕೊಡಲು ಈ ಸಂಸ್ಥೆ ಸ್ಥಾಪಿಸಿದ್ದೇವೆ.ಬೆಂಗಳೂರಿನ ಎಕ್ಸ್ ಪೋದಲ್ಲಿ ಈ ರೋಬೋ ನೋಡಿದ ನಂತರ ನಮ್ಮ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೊಸ ಪ್ರಯತ್ನ ಮಾಡಿದೆ.

 

ಈ ರೋಬೋಟ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯ ‌ನಿರ್ವಹಿಸಲಿದ್ದು, ಈ ಮೂಲಕ ಈ ಶಾಲೆ ದೇಶದಲ್ಲೇ ಮೊದಲ ರೋಬೋಟಿಕ್ ಲ್ಯಾಬ್ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಕ್ಕಳು ತುಂಬ ಖುಷಿಯಿಂದ ಲವಲವಿಕೆಯಿಂದ ಪಾಠ ಕೇಳುತ್ತಿದ್ದಾರೆ ಅಂತಾರೇ ಶಾಲೆಯ ಕಾರ್ಯದರ್ಶಿ ಸಂತೋಷ್.

ಜೊತೆಗೆ ಸೋಲರ್ ಬಳಕೆ ಬಗ್ಗೆ ವಿಶೇಷ ತರಗತಿ ನೀಡಲಾಗುತ್ತಿದೆ. ಸೋಲರ್ ಲೈಟ್,ಫ್ಯಾನ್,ವಾಹನ ತಯಾರಿಸಿದ್ದೇವೆ.ಮುಂದೆ ದೊಡ್ಡ ಸೋಲಾರ್ ವಾಹನ ತಯಾರಿಸುವ ಗುರಿ ಹೊಂದಿರುವುದಾಗಿ ವಿದ್ಯಾರ್ಥಿ ಸುವಂತ್ ಸಂಪ್ರೀತ್ ತಿಳಿಸಿದರು.

ಒಟ್ಟಾರೆ ಹೇಳೋದಾದರೇ
ಹೊಸ ಹೊಸ ತಂತ್ರಜ್ಞಾನದ ಬೆಳಕು ಚೆಲ್ಲುವ ಕಾರ್ಯವು ನಡೆಯುತ್ತಿದೆ. ರೋಬೋಟ್ ಕಂಡ
ಮಕ್ಕಳು ತುಂಬಾ ಆಸಕ್ತಿ ಯಿಂದ ಪಾಠ ಕಲಿಯುತ್ತಿದ್ದಾರೆ.
ಈ ರೀತಿಯ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವ ಶಾಂತಲಾ ವಿದ್ಯಾ ಪೀಠ ಶಾಲೆ ಇತರೆ ಶಾಲೆಗಳಿಗೆ ಮಾದರಿಯಾಗಿದೆ.

Leave a Reply

Your email address will not be published. Required fields are marked *