ಅಪಾರ ಭಕ್ತ ಸಮೂಹ ಹೊಂದಿದ್ದ ಮಾಕನಹುಂಡಿ ಶನಿ ದೇವರ ಗುಡ್ಡಪ್ಪ ಪುಟ್ಟಸ್ವಾಮಿ ಇನ್ನಿಲ್ಲ

ಬಸವರಾಜು / ನಂದಿನಿ ಮೈಸೂರು

ಅಪಾರ ಭಕ್ತ ಸಮೂಹ ಹೊಂದಿದ್ದ ಮಾಕನಹುಂಡಿ ಶನಿ ದೇವರ ಗುಡ್ಡಪ್ಪ ಪುಟ್ಟಸ್ವಾಮಿ ಇನ್ನಿಲ್ಲ

ತಾಂಡವಪುರ- ಮಾರ್ಚ್ 20: ಅಪಾರ ಭಕ್ತ ಸಮೂಹ ಹೊಂದಿದ್ದ ಮೈಸೂರು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮಾಕನಹುಂಡಿ ಶನಿ ದೇವರ ಗುಡ್ಡಪ್ಪ ಪುಟ್ಟಸ್ವಾಮಿ ವಯಸ್ಸು 57 ಇವರು ವಿಧಿವಶರಾಗಿದ್ದಾರೆ.

ಗ್ರಾಮದ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ರಾತ್ರಿ 9:00ಯವರೆಗೂ ಬಂದಂತ ಭಕ್ತಾದಿಗಳಿಗೆ ಪ್ರವಚನ ನೀಡಿ ಆಶೀರ್ವಾದ ನೀಡುತ್ತಿದ್ದರು ಬಳಿಕ ಮನೆಗೆ ಬಂದು ಮನೆಯವರ ಜೊತೆ ಚೆನ್ನಾಗಿ ಮಾತನಾಡಿಕೊಂಡು ಇರುವಾಗಲೇ ಕುಸ್ತಿ ಬಿದ್ದು ಹೃದಯ ಗತಕ್ಕೆ ಒಳಗಾಗಿ ಪುಟ್ಟಸ್ವಾಮಿಯವರು ನಿಧನ ಹೊಂದಿದರು ಇವರಿಗೆ ಪತ್ನಿ ಪೂರ್ವ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಭಕ್ತ ಸಮೂಹವನ್ನು ಅಗಲಿದ್ದಾರೆ.

ಸುದ್ದಿ ತಿಳಿದ ಕೂಡಲೇ ಕ್ಷೇತ್ರದ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ ಮರಿಗೌಡ ,ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಸವರಾಜು, ಹೊಸ ಹುಂಡಿ ರಘು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಡಕೋಳ ಶ್ರೀಕಂಠ ತೊಂಡೆಗೌಡ ,ಹೆಬ್ಬಾಳೇಗೌಡ ,ನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಮುಖಂಡರಾದ ರಾಯನ ಹುಂಡಿ ಮಾದಪ್ಪ, ಕುಂಬರಳ್ಳಿ ಮಠ ಮಹಾದೇವ ಸೇರಿದಂತೆ ಅನೇಕ ಮುಖಂಡರುಗಳು ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

Leave a Reply

Your email address will not be published. Required fields are marked *