ನಂದಿನಿ ಮೈಸೂರು
ಮಂಜಾನೆಯೇ ಭಾರೀ ಮಳೆ ಮಳೆಯ ನಡುವೆ ದಟ್ಟವಾದ ಹಿಮ.ಶ್ರೀ ಚಾಮುಂಡಿ ಬೆಟ್ಟದ ಗೋಪುರ ಸಂಪೂರ್ಣ ಹಿಮದಿಂದ ಆವರಿಸಿತ್ತು.ಮಳೆಯನ್ನೂ ಲೆಕ್ಕಿಸದೇ ಒಂದು ಕಡೆ ಸಹಸ್ರಾರು ಭಕ್ತರು ಛತ್ರಿ ಹಿಡಿದು ಬಂದರೇ ಇನ್ನೊಂದು ಕಡೆ ಮಳೆಯಲ್ಲಿ ನೆನೆದು ಕೊಂಡು ಚಾಮುಂಡಿ ತಾಯಿ ದರ್ಶನ ಪಡೆದರು.
![](https://bharathnewstv.in/wp-content/uploads/2025/01/OPENING-TODAY.jpg)
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಹಿನ್ನೆಲೆ ಶ್ರೀ ಚಾಮುಂಡೇಶ್ವರಿ ತಾಯಿಗೆ ಉತ್ಸವ ಮೂರ್ತಿ ಅಲಂಕಾರ ಮಾಡಲಾಗಿತ್ತು.
ದೇವರ ಗರ್ಭಗುಡಿ ಬಾಗಿಲಿನಲ್ಲಿ ಹಣ್ಣಿನಿಂದ ಅಲಂಕಾರ ಹಾಗೂ ಹೊರಾಂಗಣದಲ್ಲಿ ನಿಂಬೆಹಣ್ಣು, ಮಂಗಳೂರು ಸೌತೆಕಾಯಿ, ಬದನೆಕಾಯಿ ಸೇರಿದಂತೆ ನಾನಾ ತರದ ತರಕಾರಿಗಳಿಂದ ಅಲಂಕರಿಸಲಾಗಿತ್ತು.
ಮುಂಜಾನೆಯಿಂದಲೇ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷೀತ್ ನೇತೃತ್ವದಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷವಾಗಿ ಅಭಿಷೇಕ ,ಅರ್ಚನೆ,ಮಹಾಮಂಗಳಾರತಿ ನೆರವೇರಿಸಲಾಯಿತು.
ಕರ್ನಾಟಕ,ತಮಿಳುನಾಡು,ಕೇರಳ,ಆಂದ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ನಾಡಿನ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು.
ಮೈಸೂರು ಜಿಲ್ಲಾಡಳಿತದಿಂದ
ಭಕ್ತಾದಿಗಳಿಗೆ ಸರತಿ ಸಾಲಿನಲ್ಲಿ ದರ್ಶನಕ್ಕೆ ಹೋಗುವ ಭಕ್ತರಿಗೆ ನೆರಳಿನ ವ್ಯವಸ್ಥೆ,
ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿತ್ತು.ಹರಕೆ
ಹೊತ್ತ ಭಕ್ತರು ಊಟ ವ್ಯವಸ್ಥೆ ಮಾಡಿದ್ದರು. ನೂಕುನುಗ್ಗಲು ಉಂಟಾಗಬಾರದು ಎಂದು ಬ್ಯಾರಿಕೇಡ್ ವ್ಯವಸ್ಥೆ. ಸಿಸಿಟಿವಿ ಅಳವಡಿಕೆ, ಅಶ್ವದಳ ಪೋಲಿಸ್ ಸಿಬ್ಬಂದಿ,
ದೇವಸ್ಥಾನ ಸುತ್ತ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.
ಚಾಮುಂಡಿ ಬೆಟ್ಟಕ್ಕೆ ಖಾಸಗೀ ವಾಹನಗಳಿಗೆ ನಿರ್ಬಂಧ ಏರಲಾಗಿದ್ದು,ಮೈಸೂರಿನ ಹೆಲಿಪ್ಯಾಡ್ ನಿಂದ ಭಕ್ತರಿಗಾಗಿ ಉಚಿತವಾಗಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.