ಸಂತಾಪ:
ಮೈಸೂರಿನ ಪ್ರಾಚೀನ ಇತಿಹಾಸ, ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ, ಮಾಹಿತಿಯನ್ನೂ ಹೊಂದಿದ್ದ ಹಿರಿಯ ಪತ್ರಕರ್ತರಾಗಿದ್ದ ಈಚನೂರು ಕುಮಾರ್ ರವರ ನಿಧನಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡರವರು ಸಂತಾಪ ಸೂಚಿಸಿದ್ದಾರೆ.
ಈಚನೂರು ಕುಮಾರ್ ರವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಹಿರಿಯ ಕಾರ್ಯಕರ್ತರಾಗಿದ್ದರು. ಮೈಸೂರಿನ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ತುಂಬಾ ಆಳವಾದ ತಿಳುವಳಿಕೆಯನ್ನೂ ಹೊಂದಿದ್ದರು.. ಹಲವೂ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿ, ಯುವ ಪತ್ರಕರ್ತರಿಗೆ ಮಾರ್ಗದರ್ಶಿಯಾಗಿದ್ದರು..
ಅವರ ಆತ್ಮಕ್ಕೆ ಭಗವಂತನೂ ಶಾಂತಿಯನ್ನೂ ನೀಡಲಿ ಮತ್ತು ಅವರ ಕುಟುಂಬ ವರ್ಗದವರಿಗೆ ಸಾವಿನ ನೋವನ್ನೂ ಭರಿಸುವ ಶಕ್ತಿಯನ್ನೂ ನೀಡಲೇಂದೂ ಡಾ.ಈ.ಸಿ.ನಿಂಗರಾಜ್ ಗೌಡ ರವರು ಪ್ರಾರ್ಥಿಸಿದ್ದಾರೆ..