ನಂದಿನಿ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022.
ದಸರಾ ಗಜಪಡೆಯ ಎರಡನೇ ತಂಡ ಇಂದು ಮೈಸೂರಿಗೆ ಆಗಮನವಾಗಿದೆ.
ಎರಡನೇ ತಂಡದಲ್ಲಿ ಐದು ಆನೆಗಳು ಲಾರಿ ಮೂಲಕ ಮೈಸೂರು ಅರಮನೆಯಲ್ಲಿ ಬಂದಿಳಿದಿದೆ.
ಐದರ ಪೈಕಿ ಒಂದು ಆನೆ ಮಧ್ಯಾಹ್ನದ ವೇಳೆಗೆ ಆಗಮಿಸಿತ್ತು..ಉಳಿದ ನಾಲ್ಕು ಆನೆಗಳು ಸಂಜೆಯ ವೇಳೆಗೆ ಆಗಮನವಾಗಿತ್ತು.
ಪಾರ್ಥಸಾರಥಿಯ (18) ಜೊತೆಗೆ ವಿಜಯ (63), ಗೋಪಿ (40), ಶ್ರೀರಾಮ (40), ಸುಗ್ರೀವ (40) ಎರಡನೇ ತಂಡದಲ್ಲಿ ಮೈಸೂರಿಗೆ ಆಗಮಿಸಿದ ಇತರ ಆನೆಗಳು.
ಪಾರ್ಥಸಾರಥಿ ಬಂಡೀಪುರ ಅಭಯಾರಣ್ಯದ ರಾಂಪುರ ಆನೆ ಶಿಬಿರದಿಂದ ಆಗಮಿಸಿದರೆ, ಉಳಿದ ನಾಲ್ಕು ಆನೆಗಳು ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಿಂದ ಮೈಸೂರಿಗೆ ಆಗಮನ.
ಪಾರ್ಥಸಾರಥಿ, ಶ್ರೀರಾಮ, ಸುಗ್ರೀವ ಇದೇ ಮೊದಲ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮನ.
ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಹಠಾತ್ ನಿಧನರಾದ ಹಿನ್ನೆಲೆಯಲ್ಲಿ ದಸರಾ ಗಜಪಡೆಯ 2ನೇ ತಂಡದ ಆನೆಗಳ ಸ್ವಾಗತ ಕಾರ್ಯಕ್ರಮ ರದ್ದು.
ಹಾಗಾಗಿ ಯಾವುದೇ ಸ್ವಾಗತವಿಲ್ಲದೇ ಲಾರಿಗಳ ಮೂಲಕ ನೇರವಾಗಿ ಅರಮನೆ ಆವರಣಕ್ಕೆ ಬಂದಿಳಿದ ಆನೆಗಳು.
ಪ್ರತಿವರ್ಷದ ದಸರಾ ಮಹೋತ್ಸವದಲ್ಲಿ ಎರಡನೇ ತಂಡದ ಆನೆಗಳಿಗೂ ಸಂಪ್ರದಾಯಬದ್ದವಾಗಿ ವಿಶೇಷ ಪೂಜೆ ಸಲ್ಲಿಸಿ ಅರಮನೆ ಆವರಣಕ್ಕೆ ಬರಮಾಡಿಕೊಳ್ಳಲಾಗುತ್ತಿತ್ತು.
ಕಳೆದೆರಡು ವರ್ಷ ಕೊರೊನಾ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆಯಾಗಿತ್ತು.
ಕಳೆದೆರಡು ವರ್ಷ ಎರಡನೇ ತಂಡದ ಆನೆಗಳು ಬಂದಿರಲಿಲ್ಲ.
ಎರಡು ವರ್ಷಗಳ ಬಳಿಕ ಆಗಮಿಸಿದ ಎರಡನೇ ತಂಡದ ಆನೆಗಳಿಗೆ ಈ ಬಾರಿ ಸಿಗಲಿಲ್ಲ ಸ್ವಾಗತ.