ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್ ಮೈಸೂರಿನಲ್ಲಿ ವಿಶ್ವದ ಟಾಪ್ ಫ್ರೀಸ್ಟೈಲ್ ಫುಟ್ಬಾಲರ್ ಜೇಮಿ ನೈಟ್

ನಂದಿನಿ ಮೈಸೂರು

*ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್ ಮೈಸೂರಿನಲ್ಲಿ ವಿಶ್ವದ ಟಾಪ್ ಫ್ರೀಸ್ಟೈಲ್ ಫುಟ್ಬಾಲರ್ ಜೇಮಿ ನೈಟ್*

ಮೈಸೂರಿನ ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ವಿಶ್ವದ ಅಗ್ರ 10 ಫ್ರೀಸ್ಟೈಲ್ ಫುಟ್ಬಾಲರ್ ಮತ್ತು ಹಲವು ವಿಶ್ವ ಗಿನ್ನೆಸ್ ದಾಖಲೆಗಳನ್ನು ಹೊಂದಿರುವ ಜೇಮಿ ನೈಟ್ ಅವರ ಮೈಸೂರಿನಲ್ಲಿ ಮೊದಲ ಭೇಟಿಯಲ್ಲಿ ಹೆಚ್ಚು ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗಲಿಲ್ಲ. ಜೇಮಿ ವಿಶ್ವದ ಅತ್ಯಂತ ಅನುಭವಿ ಮತ್ತು ಫ್ರೀಸ್ಟೈಲರ್ಗಳಲ್ಲಿ ಅತ್ಯಂತ ಬೇಡಿಕೆ ಇರುವ ಫುಟ್ಬಾಲ್ ಆಟಗಾರ. ಕ್ರೀಡೆಗಳ ಕುರಿತು ಹೆಚ್ಚಿನ ಗಮನಹರಿಸುವ ಮತ್ತು ಅಂತಾರಾಷ್ಟ್ರೀಯ ಆಟಗಾರರು, ತರಬೇತುದಾರರಿಂದ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವ ಪೋದಾರ್ ಎಜ್ಯುಕೇಷನ್ ನೆಟ್ವರ್ಕ್ನ ಉಪಕ್ರಮದ ಭಾಗವಾಗಿ ಜೇಮಿ ಭಾರತಕ್ಕೆ ಎರಡನೇ ಭೇಟಿ ನೀಡಿದ್ದರು.

ಜೇಮಿ ಅವರು ಫುಟ್ಬಾಲ್ನಲ್ಲಿ ಅದ್ಭುತ ನಿಯಂತ್ರಣದಿಂದಾಗಿ ಹೆಸರುವಾಸಿಯಾಗಿದ್ದಾರೆ ಮತ್ತು ಜಗತ್ತಿನಾದ್ಯಂತ ಪ್ರಯಾಣ ಮಾಡಿದ್ದಾರೆ ಹಾಗೂ ಪ್ರಸಿದ್ಧ ಜಾಗತಿಕ ಬ್ರಾಂಡ್ಗಳ ಜತೆ ಸಹಭಾಗಿತ್ವ ಹೊಂದಿದ್ದಾರೆ. ಅವರು ಯುರೊ 2020ಗಾಗಿ ವಿಶ್ವ ಮಾಸ್ಕಾಟ್ನ ಪಾತ್ರವನ್ನು ನಿರ್ವಹಿಸಿದ್ದಾರೆ ಹಾಗೂ 2017 ಮತ್ತು 2018ರ ಯುಇಎಫ್ಎ ಚಾಂಪಿಯನ್ಸ್ ಲೀಗ್ ಫೈನಲ್ಸ್ನಲ್ಲಿ ಪಿಚ್ನಲ್ಲಿ ಪ್ರದರ್ಶನ ನೀಡಿದ್ದಾರೆ. ಅವರ ಸ್ಥಿರತೆ ಮತ್ತು ನಿಖರವಾದ ಹೊಡೆತಗಳು ಅವರಿಗೆ ಜಗತ್ತಿನಾದ್ಯಂತ ಅಪಾರ ಪ್ರಮಾಣದ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ, ಅವರ ಕುರಿತು ವಿಶ್ವಖ್ಯಾತಿ ಪಡೆದಿರುವ ಫುಟ್ಬಾಲ್ ಆಟಗಾರರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಂತೆಯೇ ಪುಣೆಯಲ್ಲಿ ಸಹ ವಿದ್ಯಾರ್ಥಿಗಳು ಜೇಮಿ ಅವರು ಸಮತೋಲನದ ಚಟುವಟಿಕೆಗಳನ್ನು ಸಲೀಸಾಗಿ ನಡೆದಿಕೊಟ್ಟಿದ್ದನ್ನು ಕಂಡು ನಿಬ್ಬೆರಗಾದರು.

ಜೇಮಿ ಅವರು ಫ್ರೀಸ್ಟೈಲ್ ಫುಟ್ಬಾಲ್ ಆಟವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ, ಬೆಳವಣಿಗೆ ಹೊಂದಬೇಕೆಂಬ ಮನಸ್ಥಿತಿಯನ್ನು ವೃದ್ಧಿಸುತ್ತದೆ ಎಂದು ದೃಢವಾಗಿ ನಂಬಿದ್ದಾರೆ. ಇದು ಪೋದಾರ್ ಎಜ್ಯುಕೇಷನ್ ನೆಟ್ವರ್ಕ್ನ ಸಮಗ್ರ ಶಿಕ್ಷಣಕ್ಕೆ ಬಲವಾದ ಬೆಂಬಲವನ್ನು ನೀಡುತ್ತದೆ.

ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನದಿಂದ ಪುಳಕಿತರಾದ ಜೇಮಿ ನೈಟ್ ಅವರು ಹೇಳಿದರು, `ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ಇಷ್ಟೊಂದು ಉತ್ಸಾಹ, ಪ್ರತಿಭೆ ಮತ್ತು ಕ್ರೀಡೆಯ ಬಗ್ಗೆ ಪ್ರೇಮವನ್ನು ಹೊಂದಿರುವುದನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ. ಫುಟ್ಬಾಲ್ನಲ್ಲಿ ಭಾರತ ಜಾಗತಿಕ ಆಟಗಾರನಾಗದೇ ಇರಲು ಯಾವುದೇ ಕಾರಣವಿಲ್ಲ. ಶೀಘ್ರದಲ್ಲಿಯೇ ಭಾರತವು ಫುಟ್ಬಾಲ್ ವಿಶ್ವಕಪ್ನಲ್ಲಿ ಸ್ಪರ್ಧಿಸುವ ದಿನಗಳು ಬರಲಿವೆ. ನಾನು ಇಲ್ಲಿಗೆ ಆಗಮಿಸಿರುವುದಕ್ಕೆ ಖುಷಿಯಾಗಿದೆ ಹಾಗೂ ಶೀಘ್ರದಲ್ಲಿಯೇ ಮತ್ತೊಮ್ಮೆ ಆಗಮಿಸುವ ಭರವಸೆ ಇದೆ’.

ವಿದ್ಯಾರ್ಥಿಗಳಂತೆಯೇ ಶಕ್ತಿ ಮತ್ತು ಉತ್ಸಾಹ ತೋರಿಸಿದ ಶ್ರೀ ಹರ್ಷ ಪೋದಾರ್, ನಿರ್ದೇಶಕರು, ಪೋದಾರ್ ಎಜ್ಯುಕೇಷನ್ ನೆಟ್ವರ್ಕ್ ಅವರು ಹೆಳಿದರು, `ಜೇಮಿ ಅವರು ನಡೆಸಿಕೊಟ್ಟಂತಹ ಕಾರ್ಯಾಗಾರವು ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಗಮನವನ್ನು ಮರಳಿ ತರುತ್ತದೆ. `ಶ್ರೇಣಿಗಳಿಗಿಂತ ಹೆಚ್ಚು’ ಎಂಬ ನಮ್ಮ ನಂಬಿಕೆಗೆ ಅನುಗುಣವಾಗಿ, ನಮ್ಮ ವಿದ್ಯಾರ್ಥಿಗಳು ಶೈಕ್ಷಣಿಕ ಅಥವಾ ಶೈಕ್ಷಣಿಕವಲ್ಲದ ಯಾವುದೇ ಕಾರ್ಯಾಗಾರಗಳಲ್ಲಿ ಕಲಿಯುವುದನ್ನು ನಾವು ಬಯಸುತ್ತೇವೆ. ಇಂತಹ ಅವಕಾಶಗಳು ಮುಂದಿನ ದಿನಗಳಲ್ಲಿ ದೊಡ್ಡದೊಡ್ಡ ವೇದಿಕೆಗಳಲ್ಲಿ ದೇಶವನ್ನು ಪ್ರತಿನಿಧಿಸಲು ಸಹಾಯ ಮಾಡುತ್ತವೆ ಎಂಬುದಾಗಿ ನಾವು ಭಾವಿಸಿಕೊಂಡಿದ್ದೇವೆ’.

ಪೋದಾರ್ ಎಜ್ಯುಕೇಷನ್ ನೆಟ್ವರ್ಕ್ ದೇಶಾದ್ಯಂತ ವಾರ್ಷಿಕವಾಗಿ 2,30,000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಶ್ರೀ ಹರ್ಷ ಪೋದಾರ್ ಅವರು ಮುಂದುವರಿದು ಹೇಳಿದರು, `ಪೋದಾರ್ ಎಜ್ಯುಕೇಷನ್ ನೆಟ್ವರ್ಕ್ನ ನಮ್ಮ ಶಾಲೆಗಳಲ್ಲಿ ಅಂತಾರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದಿರುವ ಫುಟ್ಬಾಲ್ ಆಟಗಾರರಿಂದ ಇಂತಹ ಕಾರ್ಯಾಗಾರಗಳನ್ನು ಮುಂದುವರಿಸುತ್ತೇವೆ. ನಾವು ನಮ್ಮ ಶಾಲೆಗಳಲ್ಲಿ ಫುಟ್ಬಾಲ್ ತರಬೇತಿಗಾಗಿ ಪ್ರಸಿದ್ಧ ಯುರೋಪಿಯನ್ ಫುಟ್ಬಾಲ್ ಕ್ಲಬ್ಗಳ ಸಹಭಾಗಿತ್ವವನ್ನು ಎದುರು ನೋಡುತ್ತಿದ್ದೇವೆ’.

Leave a Reply

Your email address will not be published. Required fields are marked *