ನಂದಿನಿ ಮೈಸೂರು
ಉದ್ಯಮಿ ಹಾಗೂ ಕರಾವಳಿಸಿ ಫುಡ್ ರೆಸ್ಟೋರೆಂಟ್ ಮಾಲೀಕರಾದ ಜಿ ಮಂಜುಗೌಡ ರ 51ನೇ ಹುಟ್ಟುಹಬ್ಬದ ಅಂಗವಾಗಿ ಅರ್ಥಪೂರ್ಣ ಆಚರಣೆ ಮಾಡಲಾಯಿತು.
ಅಶ್ವಿನಿ ಗೋಲ್ಡ್ ಕಂಪನಿ ಕಚೇರಿ ಮುಂಭಾಗ 52ನೇ ವಾರ್ಡ್ ನ ಎಲ್ಲ ಪೌರಕಾರ್ಮಿಕರಿಗೆ ಸೀರೆ, ಬಟ್ಟೆ ಮತ್ತು ಸಿಹಿ ವಿತರಿಸಲಾಯಿತು ಹಾಗೂ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಕರ್ತವ್ಯ ನಿರ್ವಹಿಸುವ ಭದ್ರತಾ ಸಿಂಬದಿಗಳಿಗೆ,ತೋಟಗಾರಿಕೆ ಸಿಬ್ಬಂದಿಗಳಿಗೆ, ಪೌರಕಾರ್ಮಿಕರಿಗೆ ಬಟ್ಟೆ, ಸೀರೆ ಮತ್ತು ಸಿಹಿ ವಿತರಸಲಾಯಿತು.
ಪುಟ್ಟಿರಮ್ಮ ವಿಶೇಷ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಅಗತ್ಯವಿರುವ ಆಟಿಕೆ ವಸ್ತುಗಳು ಹಾಗೂ ಇನ್ನಿತರ ವಸ್ತುಗಳನ್ನು ಮತ್ತು ಸಿಹಿ ವಿತರಿಸಲಾಯಿತು ಸಾಯಿ ರಂಗ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡರು.