ಧ್ವಜದೊಂದಿಗೆ ಸಂವಿಧಾನ ಕೃತಿ ನೀಡಿ ಅಭಿಯಾನ

ಮೈಸೂರು:9 ಆಗಸ್ಟ್ 2022

ನಂದಿನಿ ಮೈಸೂರು

ಕೃಷ್ಣರಾಜ ಯುವ ಬಳಗ 75ನೇ ಅಮೃತ ಮಹೋತ್ಸವ ಅಂಗವಾಗಿ
ಧ್ವಜದೊಂದಿಗೆ ಸಂವಿಧಾನ ಕೃತಿ ನೀಡಿ ಎಂಬ ಅಭಿಯಾನ ಹಮ್ಮಿಕೊಂಡಿದ್ದು ಸಾರ್ವಜನಿಕರಿಗೆ ಧ್ವಜದೊಂದಿಗೆ ಸಂವಿಧಾನ ಪುಸ್ತಕ ನೀಡುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

ವಿದ್ಯಾರಣ್ಯಪುರಂನ ಸಾರ್ವಜನಿಕರ ಹಾಸ್ಟೆಲ್ ಹಿಂಭಾಗದಲ್ಲಿರುವ ಅಂಬೇಡ್ಕರ್ ಕಾಲೊನಿಯಲ್ಲಿ
ಮನೆ ಮನೆಗೆ ತೆರಳಿ 75ನೇ ಅಮೃತ ಮಹೋತ್ಸವ ಅಂಗವಾಗಿ ಭಾರತ ಧ್ವಜದೊಂದಿಗೆ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಅವರ ಭಾರತದ ಸಂವಿಧಾನದ ಬಗ್ಗೆ ಬರೆದಿರುವ ಜನಪ್ರಿಯ ಪುಸ್ತಕ ಸಂವಿಧಾನ ಓದು ಪ್ರತಿಯೊಂದನ್ನು ನೀಡಿ 75ನೇ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರತಿ ಮನೆ ಮನೆಗೆ ತೆರಳಿ ಸಂವಿಧಾನ ಓದು ಪ್ರತಿಯೊಂದನ್ನು ನೀಡಿ ಅರ್ಥಪೂರ್ಣ ಆಚರಿಸಲು ಈ ಅಭಿಯಾನ ಹಮ್ಮಿಕೊಂಡಿದ್ದು ಸಾರ್ವಜನಿಕರಿಗೆ ಧ್ವಜದೊಂದಿಗೆ ಸಂವಿಧಾನ ಪುಸ್ತಕ ನೀಡುವ ಮೂಲಕ ಕೃಷ್ಣರಾಜ ಯುವ ಬಳಗ ಹಮ್ಮಿಕೊಂಡಿರುವ ಅಭಿಯಾನಕ್ಕೆ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಗೂ ಭೇಟಿ ಕೊಟ್ಟು ಭಾರತದ ಧ್ವಜವನ್ನು ವಿತರಿಸುವ ಕಾರ್ಯಕ್ರಮ ಸರ್ಕಾರ ಈಗಾಗಲೇ ಹಾಮಿಕೊಂಡಿದ್ದು ದೇಶಪ್ರೇಮದ ಭಾವನಾತ್ಮಕ ಜಾಗೃತಿ ಮತ್ತು ಜನರಲ್ಲಿ ಏಕತೆ ಮೂಡಿಸುವ ಪ್ರಾಮಾಣಿಕ ಉದ್ದೇಶವನ್ನು ಈ ಕಾರ್ಯಕ್ರಮವು ಹೊಂದಿರುವುದಾದರೆ .ತ್ರಿವರ್ಣ ಧ್ವಜವನ್ನು ಜನರಿಗೆ ಕೊಡುವಾಗ
ಧ್ವಜದ ಜೊತೆ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಅವರು ಭಾರತದ ಸಂವಿಧಾನದ ಬಗ್ಗೆ ಬರೆದಿರುವ ಜನಪ್ರಿಯ ಪುಸ್ತಕ ಸಂವಿಧಾನ ಓದು ಪುಸ್ತಕವನ್ನು ತ್ರಿವರ್ಣ ಧ್ವಜದೊಂದಿಗೆ ಜನರಿಗೆ ಉಚಿತವಾಗಿ ಕೊಡುವುದರ ಮೂಲಕ 75ನೇ ಭಾರತದ ಸ್ವಾತಂತ್ರದ ಅಮೃತ ಮಹೋತ್ಸವಕ್ಕೆ ಅರ್ಥಗರ್ಭಿತ ವಾಗಿರುತ್ತದೆ ಎಂದು ಹೇಳಿದರು.

ನಂತರ ಮಾತನಾಡಿದ ಸಮಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ ದೇಶದ ಏಕತೆ ಅಖಂಡತೆ
ಮತ್ತು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ಭೂಮಿಯ ಮೇಲೆ ಮಾನವ ಎಲ್ಲಿಯವರೆಗೂ ಇರುತ್ತಾನೆ ಅಲ್ಲಿಯವರೆಗೂ ಸಂವಿಧಾನ ಅಮರವಾಗಿರಬೇಕು ಎನ್ನುವುದು ನಮ್ಮ ಸಂಕಲ್ಪವಾಗಿದೆ ಆದ್ದರಿಂದ ಈ ಕಾರ್ಯಕ್ರಮ ಐತಿಹಾಸಿಕ ಹಾಗೂ ಮಾದರಿ ಕಾರ್ಯಕ್ರಮ ಆಗಬೇಕು ಎನ್ನುವುದು ನಮ್ಮ
ಆಶಯವಾಗಿದು ಮುಂದಿನ ದಿನಗಳ ಕೃಷ್ಣರಾಜ ಕ್ಷೇತ್ರದಲ್ಲಿ ಪ್ರತಿಯೊಂದು ಮನೆಗೆ ತೆರಳಿ ತ್ರಿವರ್ಣ ಧ್ವಜದೊಂದಿಗೆ ಸಂವಿಧಾನ ಓದು ಪ್ರತಿಯೊಂದನ್ನು ವಿತರಿಸಿ
ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ನಂತರ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್
‘ಸ್ಪನ್ ಮತ್ತು ಪಾಲಿಯೆಸ್ಟರ್ ಬಟ್ಟೆಯ ರಾಷ್ಟ್ರಧ್ವಜ ಬಳಸಬೇಕೆಂಬ ಜಪ ಮಾಡುತ್ತಿರುವ ಬಿಜೆಪಿಯು ದೇಶದ ಧ್ವಜ ಅಸ್ಮಿತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ’
‘ಖಾದಿ ಚಳವಳಿಯ ಮೂಲಕ ಸ್ವಾತಂತ್ರ್ಯ ಹೋರಾಟಗಾರರು ದೇಶವನ್ನು ಏಕತೆ ಕಡೆಗೆ ತಂದಿದ್ದರು. ಅವರು ನಮ್ಮತನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಈ ಕಸುಬು ನಂಬಿ ಸಾವಿರಾರು ಕುಟುಂಬಗಳು ಈಗಲೂ ಬದುಕುತ್ತಿವೆ. ಆದರೆ, ಕೇಂದ್ರ ಸರ್ಕಾರದ ಈಗಿನ ಕ್ರಮ ಖಂಡನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಿದೇಶಿ ಬಂಡವಾಳಶಾಹಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಸನ್ನಿವೇಶ ನಿರ್ಮಾಣ ಮಾಡಲಾಗಿ ಇದೆ. ರಾಷ್ಟ್ರಧ್ವಜ ಪ್ರತಿಯೊಬ್ಬ ಭಾರತೀಯನ ಅಭಿಮಾನದ ಸಂಕೇತ’ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ,ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್ ,ಪ್ರದೀಪ್ ಕುಮಾರ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ , ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ,ನಗರಪಾಲಿಕೆ ಸದಸ್ಯರಾದ ಶೋಭಾ ಸುನಿಲ್ ,
ಮಾಜಿ ಕಾರ್ಪೊರೇಟರ್ ಸುನಿಲ್,
ಜೋಗಿ ಮಹೇಶ್, ರಾಜೇಶ್,ಶಂಕರ್ ,ನಾಗರತ್ನ, ಮಂಜುನಾಥ್ ,ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *