ಮನೆ ಬಾಗಿಲಿಗೆ ತೆರಳಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೃದಯಸ್ಪರ್ಶಿ ಸನ್ಮಾನ ಮಾಡಿದ ತಹಶಿಲ್ದಾರ್ ರೂಪ

*ಕೆ.ಆರ್.ಪೇಟೆ ತಾಲ್ಲೂಕು ಆಡಳಿತದ ವತಿಯಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ತಹಶೀಲ್ದಾರ್ ಎಂ. ವಿ.ರೂಪ ಅವರಿಂದ ಮನೆ ಬಾಗಿಲಿಗೆ ತೆರಳಿ ಹೃದಯಸ್ಪರ್ಶಿ ಸನ್ಮಾನ* 

ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದ ಎಂ.ಬಿ.ಹಾಳೇಗೌಡ ಮತ್ತು ಅಘಲಯ ಗ್ರಾಮದ ಸಿದ್ಧಲಿಂಗೇಗೌಡ ಅವರನ್ನು ಸನ್ಮಾನಿಸಿ ಗೌರವಿಸಿದ ತಹಶೀಲ್ದಾರ್ ಎಂ.ವಿ.ರೂಪ.

ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಹಾಳೇಗೌಡ ಹಾಗೂ ಅವರ ಸಂಗಡಿಗರು ಬ್ರಿಟೀಷರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಚಳವಳಿಯ ಹೋರಾಟದ ನೆನಪುಗಳನ್ನು ಸ್ಮರಣೆಮಾಡಿಕೊಂಡು ಭಾವುಕರಾದ ಮಡವಿನಕೋಡಿಯ ಹಾಳೇಗೌಡ..
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹಾಳೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡ ತಹಶೀಲ್ದಾರ್ ರೂಪ..

ಭಾರತ ಸ್ವಾತಂತ್ರ್ಯ. ಸುವರ್ಣ ಮಹೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಜಿಲ್ಲಾಡಳಿತದ ನಿರ್ದೇಶನದಂತೆ ಸ್ವಾತಂತ್ರ್ಯ ಹೋರಾಟಗಾರರು ವಾಸವಾಗಿರುವ ಅವರ ಗ್ರಾಮದಲ್ಲಿನ ಮನೆ ಬಾಗಿಲಿಗೆ ತೆರಳಿ ಅವರ ನೋವು ನಲಿಲುಗಳನ್ನು ಆಲಿಸಿ ರಾಷ್ಟ್ರಧ್ವಜ ನೀಡಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಿದ ತಹಶೀಲ್ದಾರ್ ಎಂ.ವಿ.ರೂಪ..

ಈ ಸಂದರ್ಭದಲ್ಲಿ ತಹಶೀಲ್ದಾರ್ ರೂಪ ಅವರೊಂದಿಗೆ ಉಪತಹಶೀಲ್ದಾರ್ ಲಕ್ಷ್ಮೀಕಾಂತ್, ಗೌರಮ್ಮ, ರಾಜಶ್ವನಿರೀಕ್ಷಕರಾದ ರಾಜಮೂರ್ತಿ, ಗ್ರಾಮಲೆಕ್ಕಾಧಿಕಾರಿ ಜಗಧೀಶ್, ಪ್ರವೀಣ್, ಟಿಎಪಿಸಿಎಂಎಸ್ ಮಾಜಿಅಧ್ಯಕ್ಷ ಎ.ಎಸ್.ಶ್ರೀಧರ್, ಮುಖಂಡರಾದ ಗಣೇಶ್, ಪ್ರವೀಣ್, ದೇವರಾಜು, ಗಂಗಾಧರ, ಅಘಲಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಹೇಮಾವತಿ ಲೋಕೇಶ್, ಮಾಜಿಅಧ್ಯಕ್ಷ ಜಗಧೀಶ್, ಭಾಸ್ಕರ್, ಮಹಡಿಮನೆ ಮಂಜೇಗೌಡ, ಮತ್ತಿತರರು ಉಪಸ್ಥಿತರಿದ್ದರು.

*ವರದಿ.ಡಾ.ಕೆ.ಆರ್.ನೀಲಕಂಠ* .
*ಕೃಷ್ಣರಾಜಪೇಟೆ* , *ಮಂಡ್ಯ* .

Leave a Reply

Your email address will not be published. Required fields are marked *