ನಂದಿನಿ ಮೈಸೂರು
ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಭಾರತ್ ಚೋಡೋ ಸಭಾಂಗಣದಲ್ಲಿ ಇಂದು ಸಭೆ ಏರ್ಪಡಿಸಲಾಗಿತ್ತು. ಈ ಸಭೆಗೆ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ರಘುರಾಜೇ ಅರಸ್ ರವರ ನೇತೃತ್ವದಲ್ಲಿ ಸಭೆಯಲ್ಲಿ ಭಾಗವಹಿಸಿ ಹಾಗೂ ರಾಜ್ಯ ಅಧ್ಯಕ್ಷರಾದ ಎಂ.ಬಿ ಪಾಟೀಲ್ ರವರಿಗೆ ಹ್ಯಾಂಡಿಕ್ರಾಫ್ಟ್ ಮೈಸೂರು ಅರಮನೆ ಕೊಡುವ ಮೂಲಕ ಮತ್ತು ಮೈಸೂರು ಭಾಗದ ಸಹ ಅಧ್ಯಕ್ಷರಾದ ಡಾ. ಯತೀಂದ್ರ ಸಿದ್ದರಾಮಯ್ಯರವರಿಗೆ “ಸರಳತೆಯ ಸಾಕ್ಷಾ ರೂಪ” ಎಂಬ ಬಿರುದ ನೀಡುವ ಮೂಲಕ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ಜಿ.ಪದ್ಮನಾಭನ್ (ಗುಂಡ) ಲತಾ ರಂಗನಾಥ್, ಶ್ರೀನಿವಾಸ್ ಯಾದವ್,ಡಾ.ಸಹರಾ, ಕೆಪಿಸಿಸಿ ಸಂಯೋಜಕರು ಆಲನಹಳ್ಳಿ ಪುಟ್ಟಸ್ವಾಮಿ, ಕ್ಷೇತ್ರ ಅಧ್ಯಕ್ಷರುಗಳು ಆರ್ . ಜಗದೀಶ್ , ಯೋಗೇಶ್ ಕೆ.ವಿ ,ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ, ಮಹೇಶ್ ಕುಮಾರ್, ಉಮೇಶ್, ಶೋಭಾ ಗೌಡ, ತಾಸಿನ್ ಕೆಂಪರಾಜೇ ಅರಸ್ , ಚಂದ್ರಶೇಖರ್, ಅಭಿಷೇಕ್, ಇನ್ನು ಮುಂತಾದವರು ಭಾಗವಹಿಸಿದ್ದರು.