ನಂದಿನಿ ಮೈಸೂರು
*ಐವರು ಸಾಧಕರಿಗೆ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದಿಂದ ಸನ್ಮಾನ*
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರನ್ನು ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದಿಂದ ಸನ್ಮಾನಿಸಲಾಯಿತು.
ಕೃಷ್ಣಮೂರ್ತಿ ಪುರಂ ನಲ್ಲಿರುವ ಹೋಟೆಲ್ ಮಾಲಿಕರ ಸಂಘದ ಜಗನ್ನಾಥ ಶೆಣೈ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ತಿನ ಸಂಘದ ರಜತ ಮಹೋತ್ಸವದ ಅಂಗವಾಗಿ ಸಹಕಾರ ಕ್ಷೇತ್ರದಿಂದ ಕೆ.ಜಿ.ಶಂಕರನಾರಾಯಣ್ ಶಾಸ್ತ್ರೀ,
ಸಾಂಸ್ಕೃತಿಕ ಕ್ಷೇತ್ರದಿಂದ ಕೆ.ರಾಮಮೂರ್ತಿ, ಮಾದ್ಯಮ ಕ್ಷೇತ್ರದಿಂದ ಲೋಹಿತ್ ಹನುಮಂತಪ್ಪ , ಸಮಾಜಸೇವೆಯಲ್ಲಿ ಆಯೂಬ್ ಖಾನ್‌ರನ್ನು ಮತ್ತು ಸಮಾಜ ಸೇವಕ ಮಹದೇವು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಾಸು, ವಂಗೀಪುರಮಠದ ಇಳೈ ಆಳ್ವಾರ್ ಸ್ವಾಮಿಗಳು, ಎಸ್ .ಎನ್ ಹೆಗಡೆ, ನಾರಾಯಣ ಹೆಗಡೆ , ನಾರಾಯಣ ಗೌಡ, ವಿ.ಎಸ್ ರವಿ ಶಾಸ್ತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.