ನಂದಿನಿ ಮೈಸೂರು
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆಯಲ್ಲಿ ನಡೆಯಲಿರುವ ಶರನ್ನವರಾತ್ರಿ ಉತ್ಸವದ ವೇಳಾಪಟ್ಟಿಯನ್ನು ರಾಜವಂಶಸ್ಥ ಪ್ರಮೋದಾ ಒಡೆಯರ್ ಅವರು ಬಿಡುಗಡೆ ಮಾಡಿದ್ದಾರೆ.
ಅ.9 ರಿಂದ ನವೆಂಬರ್ 8 ರವರೆಗೆ ಖಾಸಗಿ ದರ್ಬಾರ್ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ.
ಅ.9 ರಂದು ಬೆಳಗ್ಗೆ 7.15ಕ್ಕೆ ನವಗ್ರಹ ಹೋಮ ಮತ್ತು ಇತರೆ ಶಾಂತಿ ಪೂಜೆಗಳ ನಡೆಯಲಿವೆ. ನಂತರ ಬೆಳಗ್ಗೆ 10:05 ರಿಂದ 10:35 ರವರೆಗೆ ಅಂಬಾವಿಲಾಸ ದರ್ಬಾರ್ ಹಾಲ್ ನಲ್ಲಿ ಸಿಂಹಾಸನ ಜೋಡಣೆ ಮತ್ತು ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 11ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಅಶ್ವ, ಮತ್ತು ಗಜವನ್ನು ಗೋಶಾಲೆಗೆ ಕರೆತರಲಾಗುವುದು.
ಅ. 15 ರಂದು ಬೆಳಗ್ಗೆ 6.05 ರಿಂದ 6:25 ವರೆಗೆ ಸಿಂಹಾಸನ ಜೋಡಣೆ, 7.05 ರಿಂದ 7.45 ರವರೆಗೆ ವಾಣಿವಿಲಾಸ ದೇವರ ಮನೆಯಿಂದ ಚಾಮುಂಡಿತೊಟ್ಟಿಗೆ ಆಗಮಿಸಿ, ಕಂಕಣ ಧಾರಣೆ, 9:45 ಕ್ಕೆ ಸಾವರ್ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಮತ್ತು ಪಟ್ಟದ ಹಸು ಆಗಮನ. 10.15ಕ್ಕೆ ಕಳಶ ಪೂಜೆ ಮತ್ತು ಸಿಂಹಾಸನ ಪೂಜೆ ಆರಂಭ. ಮಧ್ಯಾಹ್ನ 1.45 ರಿಂದ 2.05 ವರೆಗೆ ತಾಯಿ ಚಾಮುಂಡೇಶ್ವರಿ ಅಮ್ಮನವರನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಕರೆತರಲಾಗುವುದು.
ಅ. 20ರಂದು ಬೆಳಗ್ಗೆ 10:05ರಿಂದ 10.25ರವರೆಗೆ ಸರಸ್ವತಿ ಪೂಜೆ.
ಆಗಸ್ಟ್ 21ರಂದು ಸಂಜೆ ದರ್ಬಾರ್ ನಂತರ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ,
ಅ. 22ರಂದು ದುರ್ಗಾಷ್ಟಮಿ, ಅ. 23ರ ಮಹಾನವಮಿಯಂದು ಬೆಳಗ್ಗೆ 5.30ಕ್ಕೆ ಚಂಡಿಹೋಮ ಆರಂಭ, ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮನ. 6.05 ರಿಂದ 6.15ರವರೆಗೆ ಆನೆಬಾಗಿಲು ಮೂಲಕ ಶ್ರೀಕೋಡಿ ಸೋಮೇಶ್ವರಸ್ವಾಮಿ ದೇವಸ್ಥಾನಕ್ಕೆ ಖಾಸ ಆಯಧಗಳನ್ನು ಕೊಂಡೊಯ್ಯುವುದು, 7.15ಕ್ಕೆ ಶ್ರೀ ಕೋಡಿ ಸೋಮೇಶ್ವರಸ್ವಾಮಿ ದೇವಸ್ಥಾನದಿಂದ ಆನೆ ಬಾಗಿಲು ಮೂಲಕ ಕಲ್ಯಾಣಮಂಟಪ ಖಾಸ ಆಯುಧಗಳನ್ನು ವಾಪಸ್ಸು ತರುವುದು, 9:30ಕ್ಕೆ ಚಂಡಿ ಹೋಮದ ಪೂರ್ಣಾಹುತಿ, 11.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮನ. 12.20 ರಿಂದ 12:45 ರವರೆಗೆ ಕಲ್ಯಾಣ ಮಂಟಪದಲ್ಲಿ ಆಯುಧಪೂಜೆ ಆರಂಭ. ಸಂಜೆ ದರ್ಬಾರ್ ಮತ್ತು ಸಿಂಹ ವಿಸರ್ಜನೆ, ಕಂಕಣ ವಿಸರ್ಜನೆಯು ಖಾಸಾ ದೇವರ ಮನೆ ಹಾಗೂ ವಾಣಿವಿಲಾಸ ದೇವರ ಮನೆಯಲ್ಲಿ ನಡೆಯುವುದು.
ಅ. 24ರ ವಿಜಯದಶಮಿಯಂದು ಬೆಳಗ್ಗೆ 9.45ಕ್ಕೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮನ, ಕಲ್ಯಾಣ ಮಂಟಪದಲ್ಲಿ ಖಾಸ ಆಯುಧಗಳಿಗೆ ಉತ್ತರಪೂಜೆ. 11.10 ರಿಂದ 11:45 ರವರೆಗೆ ವಿಜಯಯಾತ್ರೆ ಮತ್ತು ಶಮಿಪೂಜೆ, ನ. 8ರಂದು ಬೆಳಗ್ಗೆ 10.15ರಿಂದ 10.45ರ ವರೆಗೆ ತೋರಣವನ್ನು ತೋರಣ ಕೊಠಡಿಗೆ ಸೇರಿಸಲಾಗುವುದು.