ನಿರ್ದೇಶಕ ಮಂಜು ಕವಿ ಹೇಳಿದ ಕಥೆ ಇಷ್ಟ ಆಯ್ತು:ನಟ ರಾಘವೇಂದ್ರ ರಾಜ್ ಕುಮಾರ್

ಮೈಸೂರು:25 ಜೂನ್ 2022

ನಂದಿನಿ ಮೈಸೂರು

ಸಂಸಾರ ಸಾಗರ ಇದು ರಾಘಣ್ಣ ಸಿನಿಮಾ ಅಲ್ಲ .ಈ ಸಿನಿಮಾದಲ್ಲಿ ರಾಘಣ್ಣ ಇದ್ದಾರೆ.ಸಿನಿಮಾ ಬಗ್ಗೆ ನಾನು ಮಾತಾಡಬಾರದು ಸಿನಿಮಾ ತೆರೆಗೆ ಬಂದ ಮೇಲೆ ಜನ ಮಾತಾಡಬೇಕು ಎಂದು ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಎಂದರು.

ಮೈಸೂರಿನ ಹೊರವಲಯದ ಚಿಕ್ಕಹಳ್ಳಿಯಲ್ಲಿರುವ ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದೆ.ನನಗೆ ನಿರ್ದೇಶಕ ಮಂಜು ಹೇಳಿದ ಕಥೆ ಇಷ್ಟ ಆಯ್ತು.ಮಂಜು ಕವಿ ನಿರ್ದೇಶನದ ಎರಡನೇ ಚಿತ್ರ ‘ಸಂಸಾರ ಸಾಗರ’ . ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಿದೆ.ಮೈಸೂರು ಶೂಟಿಂಗ್ ಅಂತ ಹೇಳಿದ ತಕ್ಷಣ ಓಕೆ ಎಂದೇ.ಮೈಸೂರು ಅಂದ್ರೇ ತುಂಬ ಇಷ್ಟ..ರಾಜ ಮಹಾರಾಜರ ಕೊಡುಗೆ ಅಪಾರ.ಪ್ರಕೃತಿ,ಸೌಂದರ್ಯ, ವಾತಾವರಣ ಚನ್ನಾಗಿರುತ್ತದೆ.ಚಿತ್ರೀಕರಣಕ್ಕೆ ಒಳ್ಳೆಯ ಜಾಗ.ರಾಜ್ ಕುಮಾರ್ ಕುಟುಂಬದ ನೂರಾರು ಚಿತ್ರಗಳು ಇಲ್ಲಿಯೇ ಚಿತ್ರೀಕರಣ ಆಗಿದೆ.ಸಂಸಾರ ಸಾಗರ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ.ನಾನು ಹಿರಿಯ ನಟ ಅಲ್ಲ ನಾನು ಕಲಿಯೋದು ತುಂಬ ಇದೆ.ನಾನಿನ್ನು ಕಿರಿಯ ನಟ ಅಂತ ಭಾವಿಸಿಕೊಳ್ಳುತ್ತೇನೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿದ್ದೇನೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜಕುಮಾರ್ ಹಾರೈಸಿದರು.

ನಿರ್ದೇಶಕ ಮಂಜು ಕವಿ ಮಾತನಾಡಿ ನಟರಾಜ್ ಹಾಗೂ ಕೋಮಲ ನಟರಾಜ್
ಸಂಸಾರ ಸಾಗರ ಸಿನಿಮಾದ ನಿರ್ಮಾಪಕರು. ದೀಕ್ಷಿತ್ ಧನುಷ್ ಹಾಗೂ ಆನಂದ್ ಆರ್ಯ ಈ ಚಿತ್ರದ ನಾಯಕರು. ರಕ್ಷ, ಭೂಮಿಕ ಹಾಗೂ ಲಕ್ಷ ಶೆಟ್ಟಿ ನಾಯಕಿಯರಿದ್ದಾರೆ.
‘ಮೂವರು ಸಾಫ್ಟ್‌ವೇರ್‌ ಇಂಜಿನಿಯರ್‌ಗಳು ಪ್ರೀತಿಸಿ ಮದುವೆಯಾದ ಬಳಿಕ ನಡೆಯುವ ಸಂಸಾರದ ಕಲಹವನ್ನಿಟ್ಟು ಸಿನಿಮಾ ಮಾಡಲಾಗಿದೆ.
ಎಸ್ ನಾರಾಯಣ್, ಟೆನ್ನಿಸ್ ಕೃಷ್ಣ,ಮೂಗ್ ನಾಗೇಶ್, ರೇಖಾದಾಸ್,ಆನಂದ್ ಸೇರಿದಂತೆ ಹಿರಿಯ ಕಲಾವಿದರ ದಂಡು ಈ ಚಿತ್ರದಲ್ಲಿದ್ದಾರೆ ಎಂದು ಚಿತ್ರೀಕರಣ ಬಗ್ಗೆ ಮಾಹಿತಿ ನೀಡಿದರು. 

 

Leave a Reply

Your email address will not be published. Required fields are marked *