ಮೈಸೂರು:23 ಜೂನ್ 2022
ನಂದಿನಿ ಮೈಸೂರು
ಯಾವುದೇ ಆಡಳಿತ ಪಕ್ಷ ವಿಚಾರದಿಂದ ದೇಶ ಆಳಬೇಕೇ ಹೊರೆತು ವಿವಾದದಿಂದ ಆಳಬಾರದು.
ಜನರ ಸಮಸ್ಯೆಗೆ ಸ್ಪಂದಿಸಿ ಅವರ ಏಳಿಗೆಗಾಗಿ ಶ್ರಮಿಸಲು ನಾವೊಂದು ಹೊಸ ಪಕ್ಷ ಕಟ್ಟುತ್ತಿದ್ದೇವೆ ಎಂದು ಗೋಪಾಲಕೃಷ್ಣ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ 3 ಪಕ್ಷ ಆಡಳಿತ ನಡೆಸಿದೆ ಆದರೇ ಭ್ರಷ್ಟಾಚಾರ ನಿರ್ಮೂಲನೆ ಮಾಡಿಲ್ಲ .ಕಾನೂನು ಸುವ್ಯವಸ್ಥೆ ಪಾಡೋದಕ್ಕೆ ಸಾಧ್ಯವಾಗಲಿಲ್ಲ.ಇವತ್ತಿಗೂ ಸಹ ಜನ ಸೋಶಿಯಲ್ ಮೀಡಿಯಾದಲ್ಲಿ ಅವರ ಭಾವನೆಯನ್ನ ಮಾತಾಡೋದಕ್ಕೆ ಭಯಪಟ್ಟು ಮಾತಾಡೋ ಸ್ಥಿತಿ ನಿರ್ಮಾಣವಾಗಿದೆ.ಹೊಸ ಪಕ್ಷ ಸ್ಥಾಪಿಸಿದ್ರೇ ಅದಕ್ಕೂ ಬೇರೆ ಬೇರೆ ರೀತಿ ಕಮೆಂಟ್ ಮಾಡೋ ಜನರಿದ್ದಾರೆ.ಆದರೇ ಅವರ ವಿರುದ್ದ ಪೋಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಯಾವ ದೂರ ತಗೋಬೇಕು ಯಾವುದು ತೆಗೆದುಕೊಳ್ಳಬಾರದು ಅಂತ ನಿರ್ದೇಶನ ಕೊಡುವಷ್ಟರ ಮಟ್ಟಿಗೆ ಸರ್ಕಾರ ಬಂದಿದೆ.ಅದರ ರೀತಿ ಪೋಲಿಸರು ನಡೆದುಕೊಳ್ಳುತ್ತಿದ್ದಾರೆ.ಆದ್ದರಿಂದ ಹೊಸ ಪಕ್ಷ ಸ್ಥಾಪಿಸಲು ನಿರ್ಧರಿಸಿದ್ದೇವೆ.ಇಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದು ಪಕ್ಷ ಸ್ಥಾಪಿಸಲು ಮುಂದಾಗಿದ್ದೇವೆ.ಪೂರ್ವಭಾವಿಯಾಗಿ ಒಂದು ಸಭೆ ನಡೆಸಿದ್ದೇವೆ.31 ಜಿಲ್ಲೆ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡಲಿದ್ದೇವೆ.
ಪ್ರಾದೇಶಿಕ ಪಕ್ಷದ ಹೆಸರು ಇನ್ನೂ ನಿರ್ಧಾರವಾಗಿಲ್ಲ.ಸಾಮಾಜಿಕ ಜಾಲತಾಣದಲ್ಲಿ ಹೊಸ ಪಕ್ಷಕ್ಕೆ ಹೆಸರು ಹೇಳುವಂತೆ ಮನವಿ ಮಾಡಿದ್ದೇವೆ. ಜನರಿಂದ ಆಯ್ಕೆಯಾದ ಹೆಸರನ್ನ ಪಕ್ಷಕ್ಕೆ ನಾಮಕರಣ ಮಾಡಲಿದ್ದೇವೆ ಎಂದರು.