ಕೈಗಾರಿಕಾ ಉತ್ಪಾದನೆಯಲ್ಲಿ ಗ್ರಾಹಕ-ಕೇಂದ್ರಿತ ಬೆಳವಣಿಗೆಯನ್ನು ವೇಗಗೊಳಿಸಲು ತ್ರಿವೇಣಿ ಪವರ್‌ ಟ್ರಾನ್ಸ್‌ ಮಿಷನ್‌ ಲಿಮಿಟೆಡ್‌, ಸೇಲ್ಸ್‌ ಫೋರ್ಸ್‌ ಜೊತೆ ಸಹಕರಿಸಿದೆ

ನಂದಿನಿ ಮನುಪ್ರಸಾದ್ ನಾಯಕ್

 

ಕೈಗಾರಿಕಾ ಉತ್ಪಾದನೆಯಲ್ಲಿ ಗ್ರಾಹಕ-ಕೇಂದ್ರಿತ ಬೆಳವಣಿಗೆಯನ್ನು ವೇಗಗೊಳಿಸಲು ತ್ರಿವೇಣಿ ಪವರ್‌ ಟ್ರಾನ್ಸ್‌ ಮಿಷನ್‌ ಲಿಮಿಟೆಡ್‌, ಸೇಲ್ಸ್‌ ಫೋರ್ಸ್‌ ಜೊತೆ ಸಹಕರಿಸಿದೆ


 

ಬೆಂಗಳೂರು, ಭಾರತ, ಜುಲೈ 9, 2026 – ಹೆಚ್ಚಿನ ವೇಗದ ಗಿಯರ್‌ಬಾಕ್ಸ್‌ಗಳು ಮತ್ತು ಎಂಜಿನಿಯರ್ಡ್ ಪವರ್ ಟ್ರಾನ್ಸ್‌ಮಿಷನ್ ಪರಿಹಾರಗಳನ್ನು ತಯಾರಿಸುವ ಪ್ರಮುಖ ಸಂಸ್ಥೆಯಾದ ತ್ರಿವೇಣಿ ಪವರ್ ಟ್ರಾನ್ಸ್ ಮಿಷನ್ ಲಿಮಿಟೆಡ್ (TPTL/ ತ್ರಿವೇಣಿ ಪವರ್) ಇಂದು ಜಗತ್ತಿನ ನಂ.1 AI CRM* ಆಗಿರುವ

ಸೇಲ್ಸ್‌ ಫೋರ್ಸ್‌ ಜೊತೆ ಸಹಕಾರ ಆರಂಭಿಸಿರುವುದಾಗಿ ಘೋಷಿಸಿದೆ. ಗ್ರಾಹಕರೊಂದಿಗೆ ಉತ್ತಮ ಸಂಪರ್ಕವನ್ನು ಬಲಪಡಿಸುವುದು, ವ್ಯವಹಾರದ ದೃಶ್ಯತೆಯನ್ನು ಹೆಚ್ಚಿಸುವುದು ಮತ್ತು ದೀರ್ಘಕಾಲಿಕ ಬೆಳವಣಿಗೆಯನ್ನು ಸಾಧ್ಯವಾಗಿಸುವ ಉದ್ದೇಶದಿಂದ ರೂಪಿಸಿರುವ ತನ್ನ ವ್ಯಾಪಕ ಡಿಜಿಟಲ್ ಪರಿವರ್ತನೆ ತಂತ್ರದ ಭಾಗವಾಗಿ ಈ ಸಹಕಾರ ಕೈಗೊಳ್ಳಲಾಗಿದೆ.

 

ಈ ಸಹಕಾರವು TPTL ಸಂಸ್ಥೆಯು ಹೆಚ್ಚು ಸಂಪರ್ಕಿತ, ಡೇಟಾ ಆಧಾರಿತ ಮತ್ತು ಗ್ರಾಹಕ-ಕೇಂದ್ರಿತ ಸಂಸ್ಥೆಯಾಗುವತ್ತ ಸಾಗುತ್ತಿರುವ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಏಜೆಂಟ್‌ ಫೋರ್ಸ್‌ ಸೇಲ್ಸ್‌ ಮತ್ತು ಏಜೆಂಟ್‌ ಫೋರ್ಸ್‌ ಸರ್ವೀಸ್‌ , ಅನ್ನು ಬಳಸುವ ಮೂಲಕ, TPTL ಗ್ರಾಹಕರ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು, ಮುನ್ಸೂಚನೆಗಳನ್ನು ಹೆಚ್ಚು ನಿಖರಗೊಳಿಸುವುದು ಮತ್ತು ಪ್ರಮುಖ ವ್ಯವಹಾರ ಕಾರ್ಯಗಳ ನಡುವೆ ಉತ್ತಮ ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಅನುಷ್ಠಾನದ ಮೂಲಕ, TPTL ಒಂದೇ ಸಮಗ್ರ ವೇದಿಕೆಯನ್ನು ಸ್ಥಾಪಿಸಲಿದೆ. ಇದರಿಂದ ತಂಡಗಳು ರಿಯಲ್-ಟೈಮ್ ಗ್ರಾಹಕ ಮಾಹಿತಿ ಪಡೆಯಲು, ಅವಕಾಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಸರಿಸಲು ಮತ್ತು ಡೇಟಾ ಆಧಾರಿತ ನಿರ್ಧಾರಗಳನ್ನು ವೇಗವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ.

 

ಈ ಉಪಕ್ರಮದ ಮೂಲಕ TPTL ಕಂಪನಿಯ ವ್ಯವಹಾರದ ದೃಶ್ಯತೆ, ಕಾರ್ಯನಿರ್ವಹಣೆಯ ಪರಿಣಾಮಕಾರಿತ್ವ ಮತ್ತು ಗ್ರಾಹಕರಿಗೆ ವೇಗವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಮಾರಾಟ, ಟೆಂಡರ್ ಮತ್ತು ಬಿಡ್ ನಿರ್ವಹಣೆ, ವ್ಯವಹಾರ ಮುನ್ಸೂಚನೆ, ಗ್ರಾಹಕರ ಅಗತ್ಯಗಳು ಮತ್ತು ಸೇವಾ ಆದ್ಯತೆಗಳನ್ನು ಒಂದೇ ಡಿಜಿಟಲ್ ವೇದಿಕೆಗೆ ತರುವ ಮೂಲಕ ಈ ಗುರಿಯನ್ನು ಸಾಧಿಸಲಾಗುತ್ತದೆ. ಗ್ರಾಹಕರೊಂದಿಗೆ ನಡೆಯುವ ಸಂವಹನವನ್ನು ಉತ್ಪಾದನೆ, ವಿತರಣೆ, ಇನ್ವಾಯ್ಸಿಂಗ್ ಮತ್ತು ಸೇವೆಯಂತಹ ನಂತರದ ಪ್ರಕ್ರಿಯೆಗಳೊಂದಿಗೆ ಸಂಪರ್ಕಿಸುವ ಮೂಲಕ, TPTL ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಆರಂಭದಿಂದ ಅಂತ್ಯದವರೆಗೆ ಸ್ಪಷ್ಟ ದೃಶ್ಯತೆಯನ್ನು ಪಡೆಯಲು ಉದ್ದೇಶಿಸಿದೆ. ಇದಲ್ಲದೆ, ಸುಧಾರಿತ ವಿಶ್ಲೇಷಣೆ ಮತ್ತು AI ಆಧಾರಿತ ಮಾಹಿತಿಗಳು ಬೆಳವಣಿಗೆಯ ಅವಕಾಶಗಳನ್ನು ಗುರುತಿಸಲು, ಮಾರುಕಟ್ಟೆ ಪ್ರವೃತ್ತಿಗಳನ್ನು ಮುಂಚಿತವಾಗಿ ಅಂದಾಜಿಸಲು ಮತ್ತು ವ್ಯವಹಾರ ಸಂಬಂಧಿತ ಅಪಾಯಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಲು ನಾಯಕತ್ವಕ್ಕೆ ಸಹಾಯ ಮಾಡಲಿವೆ.

 

ಸುದ್ದಿಯ ಕುರಿತು ಅಭಿಪ್ರಾಯಗಳು:
ಈ ಸಹಭಾಗಿತ್ವದ ಕುರಿತು ಮಾತನಾಡಿದ ತ್ರಿವೇಣಿ ಪವರ್ ಟ್ರಾನ್ಸ್ಮಿಷನ್ ಲಿಮಿಟೆಡ್ ನ ನಿರ್ದೇಶಕರಾದ ತರುಣ್ ಸಾಹ್ನಿ ಅವರು, “TPTL ತನ್ನ ಬೆಳವಣಿಗೆಯ ಮುಂದಿನ ಹಂತಕ್ಕೆ ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ, ಕಾರ್ಯಾಚರಣೆಯಲ್ಲಿ ಸ್ಥಿರವಾಗಿರುವ ಮತ್ತು ಶಿಸ್ತಿನಿಂದ ವಿಸ್ತರಿಸಬಹುದಾದ ಸಂಸ್ಥೆಯನ್ನು ನಿರ್ಮಿಸುವುದರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ. ಈ ಪ್ರಯಾಣದಲ್ಲಿ ಡಿಜಿಟಲ್ ಪರಿವರ್ತನೆ ಒಂದು ಪ್ರಮುಖ ತಂತ್ರಾತ್ಮಕ ಆದ್ಯತೆಯಾಗಿದೆ. ಇದು ಕೇವಲ ನಮ್ಮ ವ್ಯವಸ್ಥೆಗಳು ಮತ್ತು ಆಡಳಿತವನ್ನು ಬಲಪಡಿಸುವುದಷ್ಟೇ ಅಲ್ಲ, ಹೆಚ್ಚು ಚುರುಕಾದ ಹಾಗೂ ಒಳನೋಟ ಆಧಾರಿತ ಸಂಸ್ಥೆಯನ್ನು ನಿರ್ಮಿಸಲು ಸಹ ಸಹಾಯ ಮಾಡುತ್ತದೆ, ಸೇಲ್ಸ್‌ ಫೊರ್ಸ್‌ ಜೊತೆಗಿನ ನಮ್ಮ ಸಹಕಾರವು ದೀರ್ಘಕಾಲಿಕ ಸ್ಪರ್ಧಾತ್ಮಕತೆ, ಸ್ಥಿರ ಬೆಳವಣಿಗೆ ಮತ್ತು ಎಲ್ಲಾ ಹಿತಾಸಕ್ತಿದಾರರಿಗೆ ಹೆಚ್ಚು ಮೌಲ್ಯ ಸೃಷ್ಟಿಸುವುದಕ್ಕೆ ನೆರವಾಗುವ ವೇದಿಕೆಗಳಲ್ಲಿ ಹೂಡಿಕೆ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

 

ತ್ರಿವೇಣಿ ಪವರ್ ಟ್ರಾನ್ಸ್ ಮಿಷನ್ ಲಿಮಿಟೆಡ್ ನ ಸಿಇಒ ರಾಜೀವ್‌ ರಾಜ್‌ಪಾಲ್‌ ಮಾತನಾಡಿ, “TPTLಗೆ ಗ್ರಾಹಕ-ಕೇಂದ್ರಿತ ದೃಷ್ಟಿಕೋನವು ನಮ್ಮ ಬೆಳವಣಿಗೆ ಮತ್ತು ವಿವಿಧ ಮಾರುಕಟ್ಟೆಗಳಲ್ಲಿ ಸ್ಪರ್ಧಿಸುವ ವಿಧಾನಕ್ಕೆ ಅತ್ಯಂತ ಮುಖ್ಯವಾಗಿದೆ, ನಾವು ವಿವಿಧ ಕೈಗಾರಿಕೆಗಳು ಮತ್ತು ಭೌಗೋಳಿಕ ಪ್ರದೇಶಗಳಲ್ಲಿನ ಗ್ರಾಹಕರೊಂದಿಗೆ ನಮ್ಮ ಸಂಪರ್ಕವನ್ನು ವಿಸ್ತರಿಸುತ್ತಿರುವಂತೆ, ಸೇಲ್ಸ್‌ ಫೋರ್ಸ್‌ ನಮಗೆ ಅವಕಾಶಗಳನ್ನು ಗುರುತಿಸುವುದು, ಟೆಂಡರ್ ಪ್ರಕ್ರಿಯೆ, ಯೋಜನೆ ಅನುಷ್ಠಾನ ಮತ್ತು ಮಾರಾಟದ ನಂತರದ ಬೆಂಬಲ ಸೇರಿದಂತೆ ಸಂಪೂರ್ಣ ಗ್ರಾಹಕ ಜೀವನಚಕ್ರದಾದ್ಯಂತ ಹೆಚ್ಚು ಸ್ಪಷ್ಟತೆ, ಸ್ಥಿರತೆ ಮತ್ತು ವೇಗವಾದ ಪ್ರತಿಕ್ರಿಯೆಯನ್ನು ತರಲು ಸಹಾಯ ಮಾಡುತ್ತದೆ, ಇದರ ಮೂಲಕ ನಾವು ಗ್ರಾಹಕರೊಂದಿಗೆ ನಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಲು, ವ್ಯವಹಾರದ ಮುನ್ಸೂಚನೆ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಗ್ರಾಹಕರಿಗೆ ಹೆಚ್ಚು ನಿರಂತರ ಹಾಗೂ ಸುಗಮ ಅನುಭವವನ್ನು ಒದಗಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

 

ಸೇಲ್ಸ್ ಫೋರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನ್‌ ಕಿರಣ್ ಚೌಹಾಣ್ ಮಾತನಾಡಿ, “ತಂತ್ರಜ್ಞಾನವು ಕೈಗಾರಿಕಾ ಸಂಸ್ಥೆಗಳು ಮೌಲ್ಯವನ್ನು ಸೃಷ್ಟಿಸುವ ವಿಧಾನವನ್ನು ಬದಲಾಯಿಸುತ್ತಿದೆ. ಇದು ಗ್ರಾಹಕರಿಗೆ ಹೆಚ್ಚು ಸಮೃದ್ಧ ಅನುಭವಗಳನ್ನು ನೀಡುವುದಲ್ಲದೆ, ಬೆಳವಣಿಗೆಗೆ ಹೊಸ ಅವಕಾಶಗಳನ್ನು ಕೂಡ ಒದಗಿಸುತ್ತಿದೆ, ಗ್ರಾಹಕ ಜೀವನಚಕ್ರದ ವಿವಿಧ ಹಂತಗಳಲ್ಲಿ ಡೇಟಾ, ಬುದ್ಧಿವಂತಿಕೆ ಮತ್ತು ಗ್ರಾಹಕ ಸಂಪರ್ಕವನ್ನು ಒಂದಾಗಿಸುವ ಮೂಲಕ, ತ್ರಿವೇಣಿ ಪವರ್‌ ಮುಂತಾದ ಸಂಸ್ಥೆಗಳು ಗ್ರಾಹಕ-ಕೇಂದ್ರಿತ ನವೀನತೆಗೆ ಹೊಸ ಮಾನದಂಡವನ್ನು ಸ್ಥಾಪಿಸುತ್ತಿವೆ, ತ್ರಿವೇಣಿ ಪವರ್‌ ಸಂಸ್ಥೆಯು ಗ್ರಾಹಕರ ಅನುಭವವನ್ನು ಉತ್ತಮಗೊಳಿಸಿ ಹೊಸ ಬೆಳವಣಿಗೆ ಅವಕಾಶಗಳನ್ನು ಅನಾವರಣಗೊಳಿಸುತ್ತಿರುವ ಈ ಪ್ರಯಾಣದಲ್ಲಿ ಅವರೊಂದಿಗೆ ಸಹಭಾಗಿಯಾಗಿರುವುದಕ್ಕೆ ನಾವು ಸಂತೋಷಪಡುತ್ತೇವೆ” ಎಂದು ಹೇಳಿದರು.

 

ಸೇಲ್ಸ್‌ ಫೋರ್ಸ್‌ ಭವಿಷ್ಯದ AI ಆಧಾರಿತ ಮಾರಾಟ ಮತ್ತು ಗ್ರಾಹಕ ಬುದ್ಧಿವಂತಿಕೆ ಸಾಮರ್ಥ್ಯಗಳಿಗೆ ಬಲವಾದ ಅಡಿಪಾಯವನ್ನು ನಿರ್ಮಿಸಲು ಸಹ ಸಹಾಯ ಮಾಡಲಿದೆ. ಇದು TPTL ಸಂಸ್ಥೆಯು ಹೆಚ್ಚು ಬುದ್ಧಿವಂತ, ಚುರುಕಾದ ಮತ್ತು ನವೀನತೆಯ ಚಾಲನೆಯಿಂದ ಮುನ್ನಡೆಯುವ ಸಂಸ್ಥೆಯಾಗುವ ದೃಷ್ಟಿಯನ್ನು ಸಾಧಿಸಲು ಬೆಂಬಲ ನೀಡಲಿದೆ.

Leave a Reply

Your email address will not be published. Required fields are marked *