ನಂದಿನಿ ಮೈಸೂರು
ನಟ ಸುದೀಪ್ (Kichcha Sudeep) ಅವರು ಸಿನಿಮಾದಲ್ಲಿ ಸಕ್ರಿಯವಾಗಿರುವುದು ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಾರೆ. ಅದಕ್ಕೆ ಈಗಾಗಲೇ ಅನೇಕ ಉದಾಹರಣೆಗಳು ಸಿಕ್ಕಿವೆ.
ಕ್ಯಾನ್ಸರ್ನಿಂದ (Cancer) ಬಳಲುತ್ತಿರುವ ಸಾಕ್ಷಿ ಎಂಬ ಬಾಲಕಿಯನ್ನು ಸುದೀಪ್ ಅವರು ಭೇಟಿ ಮಾಡಿದ್ದಾರೆ. ಆಕೆಯ ಆರೋಗ್ಯ ವಿಚಾರಿಸಿದ್ದಾರೆ. ಉಡುಗೊರೆ ಮತ್ತು ಆಟೋಗ್ರಾಫ್ ನೀಡುವ ಮೂಲಕ ಆ ಪುಟ್ಟ ಅಭಿಮಾನಿಯ (Sudeep Fan Sakshi) ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ . ಈ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.ಸುದೀಪ್ ರವರ ಈ ಕಾರ್ಯವೈಖರಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.