ಸರಗೂರು :5 ಡಿಸೆಂಬರ್ 2021
ನಂದಿನಿ
ರಸ್ತೆಯಂತೆ ಇದೆ ಆದ್ರೇ ರಸ್ತೆಯಲ್ಲ.ಆ ಮುಖ್ಯ ರಸ್ತೆಗೆ ಎಂಟ್ರಿ ಕೊಟ್ರೇ ಸಾಕು ಊರುದ್ದಕ್ಕೂ ಬೃಹದಾಕಾರದ ಗುಂಡಿಗಳೇ ಸ್ವಾಗತಿಸುತ್ತದೆ.ರಸ್ತೆಯೂ ಗುಂಡಿಯೋಳಗೆ ಅವಿತುಕೊಂಡಿಂತಿದೆ ನೋಡಿ.
ಬೃಹದಾಕಾರದ ಗುಂಡಿಗೆ ಮಣ್ಣು ತುಂಬಿ ಜನರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ರಕ್ಷಣಾ ಸೇವಾ ಟ್ರಸ್ಟ್ ನ ಅಧ್ಯಕ್ಷೆ ಚಂದ್ರಿಕಾ ದೊರೆಸ್ವಾಮಿ ಹಾಗೂ ಎ ಎಸ್ ಐ ದೊರೆಸ್ವಾಮಿ.
ಸರಗೂರಿನ ಆಗತ್ತೂರು ಗ್ರಾಮದಿಂದ ಸಾಗರೆ ಗ್ರಾಮ, ಎನ್ ಬೇಗೂರು, ಬಿರಂಬಳ್ಳಿ ಗ್ರಾಮದವರೆಗೂ ರಸ್ತೆಯಲ್ಲಿರುವ ಗುಂಡಿ ಬಿದ್ದಿದ್ದವು ರಸ್ತೆಯಲ್ಲಿ ಗುಂಡಿ ಬಿದ್ದಿರುವ ಜಾಗಗಳಿಗೆ ಟಾಕ್ಟರ್ ಹಾಗೂ ಜೆಸಿಬಿ ಮೂಲಕ
ಮಣ್ಣು ಮುಚ್ಚಲಾಯಿತು. ಇದೇ ವೇಳೆ ಗ್ರಾಮದ ಸೃಷ್ಠಿ ಆರ್ಟ್ಸ್ ಕುಮಾರ್, ಸುನೀಲ್, ರಾಜೇಶ್ ಹಾಗೂ ಇನ್ನಿತರರು ಸಾಥ್ ನೀಡಿದರು.
ಬಳಿಕ ರಕ್ಷಣಾ ಸೇವಾ ಟ್ರಸ್ಟ್ ಅಧ್ಯಕ್ಷೆ ಚಂದ್ರಿಕಾ ಅವರು ಮಾತನಾಡಿ ಈ ರಸ್ತೆಯಲ್ಲಿರುವ ಸುತ್ತಾ ಮುತ್ತ ಗ್ರಾಮದ ಜನರು ಇದೇ ರಸ್ತೆಯನ್ನ ಅವಲಂಭಿಸಿದ್ದಾರೆ.ಪ್ರತಿ ನಿತ್ಯ ಸಂಚರಿಸುವ ವಾಹನ ಸವಾರರಿಗೆ ಗುಂಡಿ ಬಿದ್ದ ರಸ್ತೆಯಿಂದ ಕಿರಿಕಿರಿ ಉಂಟಾಗಿತ್ತು.
ಪತ್ರಿಕೆಯಲ್ಲಿ ವರದಿಯಾದ ಬಳಿಕ ರಸ್ತೆಯಲ್ಲಿ ಗುಂಡಿ ಬಿದ್ದಿರುವ ಜಾಗಗಳಿಗೆ ಮಣ್ಣು ಮುಚ್ಚುವ ಕೆಲಸಗಳನ್ನು ಮಾಡಲು ಟ್ರಸ್ಟ್ ಮುಂದಾಗಿದೆ.
ರಸ್ತೆಯಲ್ಲಿ ಗುಂಡಿಯಿರುವ ಪರಿಣಾಮ ತುಂಬಾ ಅನಾಹುತಗಳು ಸಂಭವಿಸುತ್ತಿವೆ. ಮತ್ತು ರಾತ್ರಿ ವೇಳೆ ವಾಹನ ಚಲಾಯಿಸಲು ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ಆಳಲು ತೊಡಿಕೊಂಡಿದ್ರು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೆಲಸ ಮಾಡಲು ಮುಂದಾಗಿದ್ದೇನೆ ಎಂದರು.
ಬಳಿಕ ಆಗತ್ತೂರು ಗ್ರಾಮಸ್ಥ ಮಾದೇವ ನಾಯಕ ಅವರು ಮಾತನಾಡಿ ಜನಪ್ರತಿನಿಧಿಗಳಿಗೆ ಇಂತಹ ಸಮಸ್ಯೆಗಳು ಕಣ್ಣಿಗೆ ಕಾಣದೆ ಇರುವುದು ಬಹಳ ಶೋಚನೀಯ.ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ರಕ್ಷಣಾ ಸೇವಾ ಟ್ರಸ್ಟ್ ಮಾಡುತ್ತಿರುವುದು ಬಹಳ ಸಂತಸದ ವಿಚಾರ.ಈ ಟ್ರಸ್ಟ್ ಇನ್ನೂ ಮುಂತಾದ ಸಮಾಜಮುಖಿ ಕೆಲಸ ಮಾಡಲು ಮುಂದಾಗಲಿ ಎಂದು ಆಶಿಸಿದ್ದರು.
ಮಳೆ ಬಿದ್ದ ನಂತರ ಅಧಿಕಾರಿಗಳ ರಸ್ತೆ ಕಾಮಗಾರಿಯ ಬಂಡವಾಳ ಬಯಲಾಗ್ತಿದೆ.
ಜನಪ್ರತಿನಿಧಿಗಳಿಗೆ ರಸ್ತೆ ಕಾಮಗಾರಿ ಕೈಗೊಳ್ಳಿ ಎಂದು ಗ್ರಾಮಸ್ಥರು ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನ ಮಾತ್ರ ಆಗಲಿಲ್ಲ.ಜನರ ಕಷ್ಟಕ್ಕೆ ಸ್ಪಂದಿಸಿದ್ದು ಚಂದ್ರಿಕಾ ದೊರೆಸ್ವಾಮಿ, ಎ ಎಸ್ ಐ ದೊರೆಸ್ವಾಮಿ ದಂಪತಿಗಳು.ಇವರ ಕಾರ್ಯ ವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.