ನಂಜನಗೂಡು :6 ಡಿಸೆಂಬರ್ 2021
ನಂದಿನಿ
ಬಡವರು ಜೀವನ ಸಾಗಿಸೋಕೆ ಒಂದಲ್ಲ ಒಂದು ಕೆಲಸ ಮಾಡುತ್ತಿರುತ್ತಾರೆ. ತಿಂಗಳ ಸಂಬಳವನ್ನೇ ನಂಬಿ ಬದುಕುತ್ತಿರ್ತ್ತಾರೆ.ಒಂದು ತಿಂಗಳು ,ಎರಡು ತಿಂಗಳು ಸಂಬಳ ಕೊಡಲಿ ಅಂದ್ರೇ ಸಹಿಸಿಕೊಳ್ಳಬಹುದು ಆದ್ರೇ ಕಳೆದ ನಾಲ್ಕು ತಿಂಗಳಿಂದ ಸಂಬಳವೂ ಸಿಗದೇ ಹಳ್ಳಿಯಿಂದ ಬಂದ ಸೆಕ್ಯೂರಿಟಿ ಗಾರ್ಡ್ ಕೃಷ್ಣೇ ಗೌಡ ಸೆಕ್ಯೂರಿಟಿ ಏಜೆನ್ಸಿಯಿಂದ ಮೋಸ ಹೋಗಿದ್ದಾರೆ.
ಹೌದು,ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದಿಂದ ಮೈಸೂರಿನ ಸೆಕ್ಯುರಿಟಿ ಏಜೆನ್ಸಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡ ಕೃಷ್ಣೆಗೌಡ ತದನಂತರ ಕುಟುಂಬ ಸಮೇತ ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ರು.
ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ತೆರಳಿದ ಕೃಷ್ಣೇಗೌಡ ಸತತ 4ತಿಂಗಳು ಕೆಲಸ ಮಾಡಿದ್ದಾರೆ.ಆದರೇ ಶ್ರೀ ಬಿಳಿಗಿರಿ ಸೆಕ್ಯುರಿಟಿ ಮತ್ತು ಮ್ಯಾನ್ ಪವರ್ ಏಜೆನ್ಸಿ ಯಿಂದ
ಕೃಷ್ಣಗೌಡ ಮೋಸಕ್ಕೊಳಗಾಗಿ ಕಣ್ಣೀರು ಹಾಕುತ್ತಿದ್ದಾರೆ.
ಸೆಕ್ಯುರಿಟಿ ಏಜೆನ್ಸಿ ಕಚೇರಿ ಮುಂದೆ ಕುಟುಂಬ ಸಮೇತ ಅಲೆದರು.ಸೆಕ್ಯುರಿಟಿ ಏಜೆನ್ಸಿ ಮಾಲೀಕ ಮತ್ತು ವ್ಯವಸ್ಥಾಪಕನಿಗೆ ದೂರವಾಣಿ ಕರೆ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ.
4ತಿಂಗಳುಗಳಿಂದ ಮನೆ ಬಾಡಿಗೆ ಕಟ್ಟಿಲ್ಲ ಮನೆಯ ಮಾಲೀಕರು ನಮ್ಮನ್ಬು ಹೊರದಬ್ಬಲು ಮುಂದಾಗಿದ್ದಾರೆ .ನಮ್ಮ ಎಷ್ಟೇ ಸಮಸ್ಯೆಯನ್ನು ಬಿಡಿಬಿಡಿಯಾಗಿ ಹೇಳಿದರು ಏಜೆನ್ಸಿ ಮಾಲೀಕರು ಮತ್ತು ವ್ಯವಸ್ಥಾಪಕರು ಕೇಳುವ ಸ್ಥಿತಿಯಲ್ಲಿಲ್ಲ .ರಾತ್ರಿ ಹಗಲು ದುಡಿದ ಸಂಬಳವನ್ನು ನೀಡದಿದ್ದ ಪಕ್ಷದಲ್ಲಿ ಸೆಕ್ಯುರಿಟಿ ಏಜೆನ್ಸಿ ಕಚೇರಿ ಮುಂದೆ ವಿಷ ಸೇವಿಸಲು ಮುಂದಾಗಬೇಕಾಗುತ್ತದೆ ಎಂದು ಕೃಷ್ಣೇಗೌಡ ಎಚ್ಚರಿಕೆ ನೀಡಿದ್ದಾರೆ.ಮೋಸಗೋಳಗಾದ ಕೃಷ್ಣೇಗೌಡ
ಒಟ್ಟಾರೆ ಹೇಳೋದಾದರೇ
ಕೆಟ್ಟು ಪಟ್ಟಣ ಸೇರು ಅನ್ನೋ ಗಾದೆ ಮಾತಿದೆ ಆದರೆ ಇಲ್ಲಿ ಪಟ್ಟಣ ಸೇರಿ ಕೆಟ್ಟಿದ್ದಾರೆ ನೋಡಿ.