ಸಂತ್ರಸ್ತೆ ಕೋಪರೇಟ್ ಮಾಡುತ್ತಿಲ್ಲ:ಎಸ್ ಟಿ ಎಸ್

43 Views

 

 

ಸುತ್ತೂರು:27 ಆಗಸ್ಟ್ 2021

ನ@ದಿನಿ

ಸಂತ್ರಸ್ತೆ ಕೋಪರೇಟ್ ಮಾಡಬೇಕು.ಆಕೆ ಸರಿಯಾಗಿ ಯಾರಿಗೂ ಕೋಪರೇಟ್ ಮಾಡುತ್ತಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದರು.

ಮೈಸೂರಿಗೆ ಸರ್ಕಾರ ಪ್ರತಾಪ್ ರೆಡ್ಡಿ ಅಧಿಕಾರಿಯನ್ನ  ನೇಮಕ ಮಾಡಿದೆ.ಈಗಾಗಲೇ ಪ್ರಕರಣದ ತನಿಖೆ ಆರಂಭಿಸಿದ್ದಾರೆ.ಗೃಹ ಸಚಿವ ಆರಗ ಜ್ಞಾನೇಂದ್ರ ರವರು ನೆನ್ನೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.ಇಂದು ಉನ್ನತ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ.ಸಂತ್ರಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸಂತ್ರಸ್ಥೆ ಚಿಕಿತ್ಸೆ, ರಕ್ಷಣೆ ನಮ್ಮದಾಗಿದೆ.ಆರೋಪಿಗಳ ಸುಳಿವು ಸಿಕ್ಕಿಲ್ಲ.ಸಂತ್ರಸ್ಥೆಯ ಭೇಟಿಗೆ ಯಾರಿಗೂ ಅವಕಾಶ ಮಾಡಿಕೊಟ್ಟಿಲ್ಲ.ನೇರವಾಗಿ ಯಾರ ಬಳಿ ಕೂಡ ಮಾತಾಡಲ್ಲ.ಯಾರನ್ನು ಭೇಟಿ ಮಾಡಲ್ಲ ಅಂತ ಪೋಷಕರು ರೈಟಿಂಗ್ ನಲ್ಲಿ ಬರೆದು ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ.ಪೋಲಿಸ್ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ.ತಪ್ಪಿತಸ್ಥರು ಯಾರೇ ಆಗಿರಲಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

 

Leave a Reply

Your email address will not be published.