ಜ.10ರಂದು ರೋಟರಿ ಅಂತಾರಾಷ್ಟ್ರೀಯ 2023ನೇ ರಾಜ್ಯ ಸೇವಾ ರತ್ನ ಪ್ರಶಸ್ತಿ ಸಮಾರಂಭ

ನಂದಿನಿ ಮೈಸೂರು

ರೋಟರಿ ಅಂತಾರಾಷ್ಟ್ರೀಯ 2023ನೇ ರಾಜ್ಯ ಸೇವಾ ರತ್ನ ಪ್ರಶಸ್ತಿ ಸಮಾರಂಭ

          ಜ. 10ರಂದು ರವಿ ಸಂತು ಬಳಗದ ಸಹಯೋಗದೊಂದಿಗೆ 2023 ನೇ ಸಾಲಿನ ರೋಟರಿ ಅಂತರಾಷ್ಟ್ರೀಯ ಸಂಸ್ಥೆಯ ವತಿಯಿಂದ ರಾಜ್ಯಸೇವರತ್ನ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರವಿಸಂತು ತಿಳಿಸಿದರು.

             ಮೈಸೂರಿನ ಕಲಾಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ಜರುಗಲಿರುವ ಕಾರ್ಯಕ್ರಮ ಉದ್ಘಾಟನೆಗೆ ನಿವೃತ್ತ ಡಿಜಿಪಿ
ಭಾಸ್ಕರ್ ರಾವ್ ,ನಟಿ ಭವ್ಯ
ನಾಗರ ನಾವಿಲೆ ರಾಜ್ಯಧ್ಯಕ್ಷರು ಕೆ ಪಿ ಸಿ ಸಿ ಡಾ. ಶಿವಕುಮಾರ್ .ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಸುದರ್ಶನ್ ಸೇರಿದಂತೆ ಹಲವಾರು ದಿಗ್ಗಜರು ಕೈ ಜೋಡಿಸಲಿದ್ದಾರೆ.
ದಕ್ಷಿಣ ಭಾರತದ 100 ಕನ್ನಡ ಚಲನಚಿತ್ರ ನಿರ್ದೇಶನ ಮಾಡಿದ ಓಂ ಸಾಯಿ ಪ್ರಕಾಶ್ ರವರಿಗೆ “ನಿರ್ದೇಶಕ ಸಾರ್ವಭೌಮ” ಪ್ರಶಸ್ತಿ ,ಗ್ರಾಮೀಣ ಭಾಗದ ಕಲಾವಿದರಿಗೆ , ವಾದ್ಯಗೋಷ್ಠಿ ಕಲಾವಿದರಿಗೆ ಸುಮಾರು 87 ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

          ರೋಟರಿ ಸಂಸ್ಥೆ ಚಂದ್ರಶೇಖರ್ ಟಿ ಡಿ ರವರು, ಮಾನಸ ಹೊಳ್ಳ, ರೇಖಾ ರೆಮೋ, ಓಂಕಾರ್ ಆನಂದ್ ರವರು, ಇನ್ನು ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಪ್ರಶಸ್ತಿ ಸಮಾರಂಭ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.

ಇದೇ ಸಂದರ್ಭದಲ್ಲಿ ರವಿ,ನಟಿ ಸಿಂಚನ,ಓಂಕಾರ್ ಆನಂದ್,ನವೀನ್,ಶ್ರೀಕಂಠು ಸೇರಿದಂತೆ ಬಳಗದ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *