ಮೈಸೂರಿನಲ್ಲಿ ವಾರಾಂತ್ಯ ಕರ್ಫೂ ವ್ಯಾಪಾರಕ್ಕೆ ತಣ್ಣಿರೆರಚಿದ ಕೊರೋನಾ

43 Views

 

ಮೈಸೂರು: 21 ಆಗಸ್ಟ್ 2021

ಸ್ಪೇಷಲ್ ಸ್ಟೋರಿ:ನ@ದಿನಿ

                ದಾರಕ್ಕೆ ಸಾವಿರ ಸೆಳೆತ,ಮನಸ್ಸು ಹಲವು, ಭಾವ ಮಾತ್ರ ಒಂದು.ಸಹೋದರ- ಸಹೋದರಿಯರ ನಡುವಿನ ಕರುಳ ಬಳ್ಳಿಯ ಸಂಬಂಧವನ್ನು ಗಟ್ಟಿಗೊಳಿಸುವ, ಮಧುರ ಬಾಂಧವ್ಯವನ್ನು ಬೆಸೆಯುವ, ಮನಸ್ಸು ಅರಳಿಸುವ ರಕ್ಷಾ ಬಂಧನ ಹಬ್ಬ ಬಂದೇ ಬಿಟ್ಟಿದೆ.ಆದರೆ ಮೈಸೂರಿನಲ್ಲಿ ವಾರಾಂತ್ಯದ ಕೊರೋನಾ ಕರ್ಫೂ ವ್ಯಾಪಾರಕ್ಕೆ ತಣ್ಣಿರೆರಚಿದೆ.

              ಹೌದು ,ಶ್ರಾವಣ ಮಾಸದ ಹುಣ್ಣಿಮೆಯಂದು ಬರುವ ಅಣ್ಣ- ತಂಗಿಯರ ಸಂಬಂಧ ಗಟ್ಟಿಗೊಳಿಸುವ ರಕ್ಷಾಬಂಧನ (ರಾಖಿ ಹಬ್ಬ) ಸಂಭ್ರಮ .ಪ್ರತೀ ವರ್ಷ ರಕ್ಷಾ ಬಂಧನ ವೇಳೆ ಯುವತಿಯರು, ಮಹಿಳೆಯರು ತಮ್ಮ ಒಡಹುಟ್ಟಿದ ಸಹೋದರನಿಗೆ, ಸಹೋದರ ಸಮಾನ ಯುವಕರಿಗೆ ರಾಖಿ ಕಟ್ಟುವುದು ಸಂಪ್ರದಾಯ. ರಾಖಿಗಳನ್ನು ಖರೀದಿಸಿ, ಕಟ್ಟುವುದು ವಾಡಿಕೆ. ಆದರೆ ಈ ಬಾರಿ ರಾಖಿ ಮಾರಾಟದ ಅಂಗಡಿಗಳಿಗೆ ಜನ ಬರದೇ ರಾಖಿ ವ್ಯಾಪಾರ ಕುಸಿತ ಕಂಡಿದೆ.

              ಸಾವಿರಾರು ರೂ. ಬಂಡವಾಳ ಹಾಕಿ ನಾನಾ ಬಣ್ಣದ, ವಿವಿಧ ಮಾದರಿಯ ರಾಖಿಗಳನ್ನು ತರಿಸಿದ್ದೇವೆ. 2 ರೂ.ನಿಂದ 600 ರೂ.ವರೆಗಿನ ರಾಖಿ ಗಳು ನಮ್ಮಲ್ಲಿವೆ. ದೆಹಲಿ, ಮುಂಬೈ, ಗುಜ ರಾತ್, ಅಹಮದಾಬಾದ್ ಇನ್ನಿತರೆ ಕಡೆ ಗಳಿಂದ ಮಣಿ, ಜರಿ, ಉಲ್ಲನ್, ರೇಷ್ಮೆ ಇನ್ನಿತರ ವಿವಿಧ ಆಕರ್ಷಣೀಯ ರಾಖಿ ಗಳ ತರಿಸಿದ್ದೆವು. ಮಹಾರಾಣಿ ಕಾಲೇಜು ಸೇರಿದಂತೆ ಇನ್ನಿತರ ಕಾಲೇಜುಗಳ ಯುವತಿಯರು ರಾಖಿ ಖರೀದಿಸುತ್ತಿದ್ದರು. ಈ ವರ್ಷ ಶೇ.10 ರಷ್ಟು ಮಾತ್ರ ವ್ಯಾಪರವಾಗಿದೆ.90 % ವ್ಯಾಪರ ಆಗಿಲ್ಲ.ತಂದ ರಾಖಿಯನ್ನ ಅರ್ಧ ಬೆಲೆಗೆ ಮಾರಾಟ ಮಾಡ್ತಿದ್ದೇವೆ.
ಆದರೆ ಕೊಳ್ಳುವವರೇ ಬರಲಿಲ್ಲ.
ಹೀಗಾಗಿ ಈ ಬಾರಿ ನಮಗೆ ತೀರಾ ನಷ್ಟವಾಗಿದೆ ಎಂದು ಮೈಸೂರಿನ ಚಿಕ್ಕಗಡಿ ಯಾರದ ಬಳಿ ಶಿವರಾಂ ಪೇಟೆ ರಸ್ತೆಯಲ್ಲಿ ರಾಖಿ ವ್ಯಾಪಾರ ನಡೆಸು ತ್ತಿರುವ ಶ್ರವಣ್ ಬೇಸರ ವ್ಯಕ್ತಪಡಿಸಿದರು.

                 ಬೆಂಗಳೂರಿನಿಂದ ವಿಧ ವಿಧವಾದ ರಾಖಿಗಳನ್ನ ತಂದಿದ್ದೇನೆ.ಆದರೆ ರಾಖಿ ಖರೀದಿಗೆ ಜನ ಬರುತ್ತಿಲ್ಲ. ಲಾಕ್‍ಡೌನ್ ಸಂದರ್ಭದಲ್ಲಿ ಅಂಗಡಿಗಳನ್ನು ಮುಚ್ಚಿದ್ದೆವು. ಲಾಕ್‍ಡೌನ್ ತೆರವಾದ ಬಳಿಕ ಶೇ.25ರಷ್ಟು ವ್ಯಾಪಾರ ಆಗುತ್ತಿಲ್ಲ ಜೀವನ ಕಷ್ಟವಾಗಿದೆ.ಅದರ ನಡುವೆ ವಿಕೇಂಡ್ ಕರ್ಫ್ಯೂ ವ್ಯಾಪಾರಕ್ಕೆ ಚಾಟಿ ಬೀಸಿದೆ ಎನ್ನುತ್ತಾರೆ ಅಗ್ರಹಾರದ ನ್ಯೂ ಮುರಳಿ ಬ್ಯಾಂಗಲ್ ಸ್ಟೋರ್ ನ ವ್ಯಾಪಾರಿ ವೇದ ಪ್ರಸಾದ್.

       ಒಟ್ಟಾರೆ ಹೇಳೋದಾದರೇ ಕಳೆದ 2 ವರ್ಷಗಳಿಂದ ಕೊರೊನಾ ಸೋಂಕು ವ್ಯಾಪಾರವನ್ನೇ ನುಂಗಿ ಹಾಕಿದೆ.ಮುಂದಿನ ವರುಷವಾದರೂ ಕೊರೋನಾ ನಿಯಂತ್ರಣಕ್ಕೆ ಬಂದು ವ್ಯಾಪಾರ ಜೋರಾಗಿ ನಡೆಯುತ್ತಾ ಕಾದಷ್ಟೇ ನೋಡಬೇಕಿದೆ.

 

Leave a Reply

Your email address will not be published.