ಪತ್ರಕರ್ತರ ಮನವಿಗೆ ಸ್ಪಂದಿಸಿದ ಮೈಸೂರು ನಗರ ಪಾಲಿಕೆ, ನಿತ್ರಾಣಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿದ ಪಾಲಿಕೆ

ಮೈಸೂರು:21 ಆಗಸ್ಟ್ 2021

ವಿಶ್ವವಾಣಿ ದಿನಪತ್ರಿಕೆಯ ಮೈಸೂರು ಜಿಲ್ಲಾ ವರದಿಗಾರರಾದ ಲೋಕೇಶ್ ಬಾಬು ರವರು ಅಪರಿಚಿತ ವ್ಯಕ್ತಿ ದೊಡ್ಡ ಗಡಿಯಾರದ ಮುಂಭಾಗ ಪಾದಚಾರಿ ಮಾರ್ಗದಲ್ಲಿ ನಿತ್ರಾಣಗೊಂಡು ಮಳೆಯಲ್ಲಿಯೇ ಜೀವಿಸುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿ ಅವರಿಗೆ ನೆರವಾಗುವಂತೆ ಹಾಗೂ ಚಿಕಿತ್ಸೆ ನೀಡುವಂತೆ ಕೋರಿರುತ್ತಾರೆ.

ಈ ಕೋರಿಕೆಯ ಮೇರೆಗೆ ಮೈಸೂರು ನಗರ ಪಾಲಿಕೆಯ ಆಯುಕ್ತರ ನಿರ್ದೇಶನದಂತೆ ಪಾಲಿಕೆಯ ಸದಸ್ಯರು ಹಾಗೂ ಅಭಯ ಟೀಮ್, ಅಪರಿಚಿತ ವ್ಯಕ್ತಿಯನ್ನು ದೊಡ್ಡ ಗಡಿಯಾರದ ಬಳಿಯಿಂದ ಕೆ ಆರ್ ಹಾಸ್ಪಿಟಲ್ ಗೆ ಸೂಕ್ತ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಹಾಗೂ ಅವರಿಗೆ ಸೂಕ್ತ ಪುನರ್ವಸತಿಯನ್ನೂ ಸಹ ಒದಗಿಸಿದ್ದಾರೆ.

Leave a Reply

Your email address will not be published. Required fields are marked *