ಸಾಲಿಗ್ರಾಮ:10 ನವೆಂಬರ್ 2021
ನಂದಿನಿ
ಸಾಲಿಗ್ರಾಮ ತಾಲ್ಲೂಕು, ಮಿರ್ಲೆ ಹೋಬಳಿಯ ತಂದ್ರೆ ಅಂಕನಹಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಸುಮಾರು 20 ಮನೆಗಳ ಗೋಡೆಗಳು ಶಿಥಿಲಗೊಂಡಿದ್ದು ಶಾಸಕ ಸಾರಾ ಮಹೇಶ್ ಗೊಂಡಿದ್ದು, ಈ ಎಲ್ಲ ಮನೆಗಳನ್ನ ಪರಿಶೀಲನೆ ನಡೆಸಿದರು.
ಸಾ.ರಾ. ಮಹೇಶ್ ರವರು ಸದರಿ ಸಮಸ್ಯೆಯ ಪರಿಹಾರಕ್ಕಾಗಿ ದಿನಾಂಕ. 20-11-2021ರ ಶನಿವಾರದಂದು ಮಾನ್ಯ ಪ್ರಾದೇಶಿಕ ಆಯುಕ್ತರು, ಮಾನ್ಯ ಜಿಲ್ಲಾಧಿಕಾರಿಗಳು, ಮುಖ್ಯ ಇಂಜಿನಿಯರ್, ಅಧೀಕ್ಷಕ ಇಂಜಿನಿಯರ್ ಮತ್ತು ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇಂಜಿನಿಯರುಗಳನ್ನು ಒಳಗೊಂಡಂತಹ ತಾಂತ್ರಿಕ ತಂಡದೊಂದಿಗೆ ಮತ್ತೊಮ್ಮೆ ಪರಿಶೀಲನೆ ನಡೆಸಿ, ಶಾಶ್ವತ ಪರಿಹಾರವನ್ನು ಮಾಡಲಾಗುವುದು ಎಂದು ತಿಳಿಸಿದರು.