ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ‌ ಅಧ್ಯಕ್ಷರಾಗಿದ್ದ ಆರ್.‌ಚಂದ್ರಶೇಖರ್ ರವರ ನೆನಪಿನಲ್ಲಿ ಸಸಿ ನೆಡುವ ಕಾರ್ಯಕ್ರಮ

ನಂದಿನಿ ಮೈಸೂರು

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ‌ ಅಧ್ಯಕ್ಷರಾಗಿದ್ದ ಆರ್.‌ಚಂದ್ರಶೇಖರ್ ರವರ ನೆನಪಿನಲ್ಲಿ ದಸರಾ ವಸ್ತುಪ್ರದರ್ಶನದಲ್ಲಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ದಿ. ಆರ್ ಚಂದ್ರಶೇಖರ್ ರವರ 19ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಅವರ ಹೆಸರಿನಲ್ಲಿರುವ ಚಂದ್ರಶೇಖರ ಮಾರ್ಗದಲ್ಲಿ ಆರ್ ಚಂದ್ರಶೇಖರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನೆನಪಾರ್ತವಾಗಿ ಗಿಡಗಳನ್ನು ನೆಟ್ಟಿ ಅವರನ್ನು ಸ್ಮರಿಸಲಾಯಿತು.

ಈ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಟಿ ಎಸ್ ಶ್ರೀವತ್ಸ ರವರು, ನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್, ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ರಾಜೇಶ್ ಜಿ ಗೌಡ, ಚಂದ್ರು ಅವರ ಆತ್ಮೀಯ ಸ್ನೇಹಿತರಾದ ಎ ವಿ ರಾಮಕೃಷ್ಣ , ಕುಟುಂಬ ವರ್ಗದವರಾದ ಪತ್ನಿ ಗಾಯತ್ರಿ, ಮಕ್ಕಳಾದ ಸಂದೀಪ್, ಸಂತೋಷ್, ಪ್ರದೀಪ್ ಸಹೋದರಿ ಪಾರ್ವತಿ , ಭಾವ ಸುರೇಶ್, ಸೊಸೆ ಮಧುರ, ಮೊಮ್ಮಕ್ಕಳಾದ ಕುಶಲ್, ಜಿಯ ಮತ್ತು ಕುಟುಂಬಕ್ಕೆ ಆತ್ಮೀಯರಾದ ಅಂಬಾಳೆ ಶಿವಣ್ಣ, ರಾಕೇಶ್, ಬಸವರಾಜು, ಧರ್ಮೇಂದ್ರ, ಯೋಗೇಶ್, ಮಹೇಶ್ ಅರಸ್, ಶೇಖರ್ , ಸೋಮೇಶ್, ತಿಪ್ಪೇಶ್, ರೂಪೇಶ್, ಮಂಜುನಾಥ್, ದೀಪಕ್, ಸಂತೋಷ್, ಅನೂಪ್, ಮಾಧವ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *