ನ್ಯೂ ಯಾರ್ಕ್ ಸಿಟಿಯ ಐತಿಹಾಸಿಕ ಟೈಮ್ಸ್ ಸ್ಕ್ವೇರ್‌ನಲ್ಲಿ ಹೊಚ್ಚ ಹೊಸ ಪ್ಯಾಕೇಜಿಂಗ್ ಅನಾವರಣಗೊಳಿಸಿದ ಕ್ವಾಲಿಟಿ ಫುಡ್ಸ್

ನಂದಿನಿ ಮೈಸೂರು

ನ್ಯೂ ಯಾರ್ಕ್ ಸಿಟಿಯ ಐತಿಹಾಸಿಕ ಟೈಮ್ಸ್ ಸ್ಕ್ವೇರ್‌ನಲ್ಲಿ ಹೊಚ್ಚ ಹೊಸ ಪ್ಯಾಕೇಜಿಂಗ್ ಅನಾವರಣಗೊಳಿಸಿದ ಕ್ವಾಲಿಟಿ ಫುಡ್ಸ್

ಜೂನ್ 2024, ಬೆಂಗಳೂರು…

ಉಪಾಹಾರ ಸೀರಿಯಲ್‌ಗಳು(ಧಾನ್ಯಗಳು), ಮಸಾಲೆಗಳು, ಮಿಶ್ರಣಗಳು ಇತ್ಯಾದಿ ಅನೇಕ ವರ್ಗಗಳ ಅತ್ಯುತ್ಕೃಷ್ಟ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸುವ ಮತ್ತು ಅತ್ಯಂತ ವೈವಿಧ್ಯಮಯ ಬಹು-ಬ್ರ್ಯಾಂಡ್ ಸಂಸ್ಥೆಯಾದ ಕ್ವಾಲಿಟಿ ಫುಡ್ಸ್, ಮತ್ತೊಮ್ಮೆ ತನ್ನ ಗ್ರಾಹಕರನ್ನು ಸಂತುಷ್ಟಗೊಳಿಸಿದೆ!

ಒಂದು ಹೊಸ ಆಯಾಮವನ್ನು ಒದಗಿಸುತ್ತಾ, ಅದು ತನ್ನ ಉಪಾಹಾರ ಸೀರಿಯಲ್ ವರ್ಗದಲ್ಲಿ ಹೊಚ್ಚ ಹೊಸ ಪ್ಯಾಕೇಜಿಂಗ್ ಪರಿಚಯಿಸಿ ಅದನ್ನು ನ್ಯೂ ಯಾರ್ಕ್ ಸಿಟಿಯ ಟೈಮ್ಸ್ ಸ್ಕ್ವೇರ್‌ನಲ್ಲಿ ಅನಾವರಣಗೊಳಿಸಿದೆ. ಪ್ಯಾಕೇಜಿಂಗ್‌ನಲ್ಲಿ ಹೊಸತನ ತಂದು ಗ್ರಾಹಕರಿಗೆ ಸಂತೋಷವನ್ನುಂಟು ಮಾಡಬೇಕೆನ್ನುವ ಸಂಸ್ಥೆಯ ಸತತ ಪ್ರಯತ್ನದ ಫಲವಾಗಿದೆ ಇದು. ಇದನ್ನು ಪಗಾರಿಯಾ ಫುಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ನರೇಶ್ ಪಗಾರಿಯಾ ಬಹಿರಂಗಪಡಿಸಿದರು.

ಈ ಹೊಸ ಪ್ಯಾಕೇಜಿಂಗ್ ಅನಾವರಣಗೊಳಿಸುತ್ತಾ, ನಿರ್ದೇಶಕ ಧೀರಜ್ ಜೈನ್, “ಆರಂಭವಾದಾಗಿನಿಮ್ದಲೂ ನಾವು ಗ್ರಾಹಕ-ಕೇಂದ್ರಿತ ಗ್ರೂಪ್ ಆಗಿರಲು ಶ್ರಮಿಸುತ್ತಿದ್ದೇವೆ. ಆದ್ದರಿಂದಲೇ, ಗುಣಮಟ್ಟ, ರುಚಿ ಹಾಗೂ ಪ್ಯಾಕೇಜಿಂಗ್‌ನಲ್ಲಿ ಅತ್ಯುತ್ಕೃಷ್ಟವಾಗಿರುವ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ವಿಶಾಲ ಪೋರ್ಟ್‌ಫೋಲಿಯೋದೊಂದಿಗೆ, ನಾವು ಪ್ರತಿಯೊಂದು ಉತ್ಪನ್ನವನ್ನು ವಿಶ್ವದರ್ಜೆಯುಳ್ಳದ್ದಾಗಿ ಮಾಡುವುದಕ್ಕಾಗಿ ನಿರಂತರವಾಗಿ ನಮ್ಮ ಮಾನದಂಡಗಳನ್ನು ನವೀಕರಿಸಿ ವರ್ಧಿಸಿಕೊಳ್ಳುತ್ತಲೇ ಇರುತ್ತೇವೆ. ಈ ವರ್ಷ ಕ್ವಾಲಿಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB)ದ ಅಧಿಕೃತ ಉಪಾಹಾರ ಸಹಭಾಗಿಯಾಗಿರುವುದು ನಮಗೆ ಸಂತೋಷದ ವಿಷಯವಾಗಿದೆ. ಈ ಹೊಸ ಪ್ಯಾಕೇಜಿಂಗ್, RCBಲೋಗೋ ಮತ್ತು ವಿರಾಟ್ ಕೊಹ್ಲಿ, ಫಾಪ್ ಡಿ ಪ್ಲೆಸಿಸ್ (Faf du Plessis) ಮತ್ತು ಸಿರಾಜ್ ಆಟಗಾರರ ಚಿತ್ರಗಳನ್ನು ಕೂಡ ಹೊಂದಿದೆ.” ಎಂದು ಹೇಳಿದರು.

ಮುಂದುವರಿದು, ಇನ್ನಷ್ಟು ವಿವರಗಳನ್ನು ಒದಗಿಸುತ್ತಾ, ಶ್ರೀ ಧೀರಜ್ ಅವರು, “ನಮ್ಮ ಹೊಸ ಪ್ಯಾಕೇಜಿಂಗ್‌ಅನ್ನು ನ್ಯೂಯಾರ್ಕ್‌ನ ಐತಿಹಾಸಿಕ ಟೈಮ್ಸ್ ಸ್ಕ್ವೇರ್‌ನಲ್ಲಿ ಪರಿಚಯಿಸುತ್ತಿರುವುದಕ್ಕೆ ನಮಗೆ ಅತೀವ ಸಂತೋಷವಾಗುತ್ತಿದೆ! ನಮಗೆ ಇದೊಂದು ಮಹತ್ತರವಾದ ಮೈಲಿಗಲ್ಲಾಗಿದ್ದು, ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಮಾರ್ಕೆಟಿಂಗ್‌ನಲ್ಲಿ ಪ್ಯಾಕೇಜಿಂಗ್ ಒಂದು ಅವಿಭಾಜ್ಯ ಅಂಶವಾಗಿರುವುದರಿಂದ, ಅದು ಯಾವುದೇ ಕಸವಿಲ್ಲದೆ ವಿಭಿನ್ನವಾಗಿ ನಿಲ್ಲುವಂತೆ ಮಾಡುವುದಕ್ಕಾಗಿ ಅದನ್ನು ಹೆಚ್ಚು ಆಕರ್ಷಕ, ವೈವಿಧ್ಯ, ವಿಶಿಷ್ಟ ಹಾಗೂ ಅಂತರರಾಷ್ಟ್ರೀಯಗೊಳಿಸುವುದಕ್ಕೆ ನಾವು ಪ್ರಯತ್ನಿಸಿದ್ದೇವೆ. ಗ್ರಾಹಕರು ಈ ಹೊಸ ನೋಟ ಹಾಗೂ ಅನುಭವವನ್ನು ಆನಂದಿಸುತ್ತಾರೆ ಎಂಬ ವಿಶ್ವಾಸ ನಮಗಿದೆ.” ಎಂದರು.

ಸಂಸ್ಥೆಯ ಬಗ್ಗೆ ವಿವರಣೆ ಒದಗಿಸುತ್ತಾ, ಶ್ರೀ ನರೇಶ್ ಪಗಾರಿಯಾ, “1998ರಿಂದ ನಾವು ಬಹಳ ದೂರ ಸಾಗಿಬಂದಿದ್ದೇವೆ! ಚಿಕ್ಕದಾಗಿ ಆರಂಭಗೊಂಡ ಸಂಸ್ಥೆಯು ಇಂದು ರಾಷ್ಟ್ರೀಯವಾಗಿ ಹಾಗೂ ಅಂತರರಾಷ್ಟ್ರೀಯವಾಗಿ, ಆಹಾರ ಕ್ಷೇತ್ರದಲ್ಲಿ ತನಗೊಂದು ವಿಶಿಷ್ಟ ಸ್ಥಾನ ಸ್ಥಾಪಿಸಿಕೊಂಡಿದೆ. ಉಪಾಹಾರ ಸೀರಿಯಲ್‌ಗಳು(ಧಾನ್ಯಗಳು), ಮಸಾಲೆಗಳು, ಇನ್ಸ್‌ಟೆಂಟ್ ಮಿಶ್ರಣಗಳು ಮುಂತಾದ ವಿಶಾಲ ಶ್ರೇಣಿಯನ್ನು ಒದಗಿಸುವ ಅದು, ಬೃಹತ್ ಗ್ರಾಹಕ್ ಬೇಸ್‌ನೊಂದಿಗೆ, ಅತ್ಯುತ್ಕೃಷ್ಟ ಗುಣಮಟ್ಟ, ಆರೋಗ್ಯ, ಅದ್ಭುತ ರುಚಿ, ಸುರಕ್ಷತೆ ಹಾಗೂ ಉತ್ತಮ ಪ್ಯಾಕೇಜಿಂಗ್‌ನ ವಾಗ್ದಾನದೊಂದಿಗೆ ಬರುತ್ತದೆ. ಮಾನ್ಯಗೊಂಡ ಅಂತರರಾಷ್ಟ್ರೀಯ ಆಹಾರ ಸುರಕ್ಷತಾ ಪ್ರಮಾಣಪತ್ರಗಳೊಂದಿಗೆ ಬೆಂಗಳೂರಿನ ಬಳಿ ಅತ್ಯಾಧುನಿಕ ಘಟಕ ಹೊಂದಿರುವ ಒಂದು ಪ್ರಗತಿಪರ “ಭಾರತದಲ್ಲೇ ತಯಾರಾದ” ಬ್ರ್ಯಾಂಡ್ ಆಗಿ ಸಂಸ್ಥೆಯು, ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಯುಎಸ್‌ಎ, ಯುಎಇ, ಸೌದಿ ಅರೇಬಿಯ, ಖಾತಾರ್, ಆಸ್ಟ್ರೇಲಿಯಾ, ಮಲೇಶಿಯಾ ಹಾಗೂ ಜಗತ್ತಿನಾದ್ಯಂತ ಇರುವ 36+ ದೇಶಗಳ ಸಾಗರೋತ್ತರ ಮಾರುಕಟ್ಟೆಗಳಲ್ಲೂ ತನ್ನ ಉತ್ಪನ್ನಗಳ ವಿಶಾಲ ಶ್ರೇಣಿಯ ರೀಟೇಲ್‌ಅನ್ನು ನಿರಂತರವಾಗಿ ವಿಸ್ತರಿಸುತ್ತಲೇ ಬಂದಿದೆ. ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಹೊಂದುವ ದೂರದೃಷ್ಟಿಯೊಂದಿಗೆ ಈಗ ಸಂಸ್ಥೆಯು, ಭಾರತ ಹಾಗೂ ಸಾಗರೋತ್ತರ ಮಾರುಕಟ್ಟೆಗಳಾದ್ಯಂತ ರೀಟೇಲ್ ಆಗುವಂತಹ ವಿನೂತನ ಉತ್ಪನ್ನಗಳನ್ನು ಪರಿಚಯಿಸಲು ಸರ್ವಪ್ರಯತ್ನ ಮಾಡುತ್ತಿದೆ. ನಮ್ಮ ಬ್ರ್ಯಾಂಡ್‌ಅನ್ನು ಬಲಪಡಿಸುವಲ್ಲಿ ಹಾಗೂ ಅದನ್ನು ಇನ್ನಷ್ಟು ಪ್ರಬಲ ಹಾಗೂ ಸುಪ್ರಸಿದ್ಧಗೊಳಿಸುವಲ್ಲಿ ಈ ಹೊಸ ಪ್ಯಾಕೇಜಿಂಗ್ ಬಹುದೂರ ಸಾಗಲಿದೆ.” ಎಂದು ಹೇಳಿದರು.

ಕಾರ್ಖಾನೆ ನೌಕರರ ಶೈಕ್ಷಣಿಕ ಶುಲ್ಕಗಳನ್ನು ಭರಿಸುವ, ಉದ್ಯೋಗಿಗಳ ಜೊತೆಗೆ ಅವರ ಕುಟುಂಬದವರ ವಿಮಾ ಪಾಲಿಸಿಗಳನ್ನು ಒದಗಿಸುವ ಮೂಲಕ ಸಾಧ್ಯವಾದಷ್ಟೂ ಅತ್ಯುತ್ತಮ ವಿಧಾನದಲ್ಲಿ ಸಂಸ್ಥೆಯು ತನ್ನ ಸಿಎಸ್‌ಆರ್ ಉಪಕ್ರಮಗಳನ್ನು ಸಮುದಾಯಕ್ಕೆ ತೆಗೆದುಕೊಂಡು ಹೋಗುತ್ತಿದೆ.

Leave a Reply

Your email address will not be published. Required fields are marked *